ದಾವಣಗೆರೆ :
ನಗರದ ಅಂಬೇಡ್ಕರ ವೃತ್ತದ ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ ಬಳಿ ಇರುವ ದಶಕಗಳ ಹಿಂದೆ ಸರ್ ಮಿರ್ಜಾ ಇಸ್ಮಾಯಿಲ್ ರಸ್ತೆಗೆ ಅಳವಡಿಸಿದ್ದ ನಾಮಫಲಕ ಹಾಳಾಗಿದ್ದು, ನೂತನ ನಾಮಫಲಕ ಅಳವಡಿಕೆ ಮಾಡುವಂತೆ ಕಳೆದ ವರ್ಷ 2023 ರ ಜೂನ ನಲ್ಲಿ ಸ್ಮಾರ್ಟ್ ಸಿಟಿ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು.ಅದರೆ, ಇಲ್ಲಿರುವರೆಗೂ ಅಧಿಕಾರಿಗಳು ನಾಮಫಲಕ ಅಳವಡಿಸದೆ ಇರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಅನೇಕ ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಅವರ ಸೇವೆ ಗುರುತಿಸಿ ಅವರ ಸ್ಮರಣಾರ್ಥ ಸಿಮೆಂಟ್ ನಾಮಫಲಕ ಅಳವಡಿಸಲಾಗಿತ್ತು. ಅದರೆ , ಆ ಫಲಕವು ಸಂಪೂರ್ಣವಾಗಿ ಹಾಳಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಅದ್ದರಿಂದ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಯವರು ಹೊಸದಾಗಿ ಸರ್ ಮಿರ್ಜಾ ಇಸ್ಮಾಯಿಲ್ ರಸ್ತೆಗೆ ನಾಮಫಲಕ ಅಳವಡಿಸುವಂತೆ ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ ಒತ್ತಾಯಿಸಿದೆ.
ಸರ್ ಮಿರ್ಜಾ ಇಸ್ಮಾಯಿಲ್ ರಸ್ತೆಗೆ “ಹೊಸ ನಾಮಫಲಕ” ಅಳವಡಿಸಿ
