ದಾವಣಗೆರೆ.ಡಿ.9 (Davanagere): ಉತ್ತರ ಕರ್ನಾಟಕದ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಇದೇ ಡಿ.11 ರಿಂದ 15 ರ ವರೆಗೆ 5 ದಿನಗಳ ಕಾಲ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಸಹಯೋಗದಲ್ಲಿ ನಡೆಯಲಿರುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2024 ಗ್ರ್ಯಾಂಡ್‍ಫಿನಾಲೆ ಸ್ಪರ್ಧೆಗೆ ಜ್ಯೂರಿ/ ತೀರ್ಪುಗಾರರಾಗಿ ದಾವಣಗೆರೆಯ ಐಡಾಲವ್‍ಲೇಸ್ ಸಾಫ್ಟ್ವೇರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಲ್.ರಾಕೇಶ್ ಆಯ್ಕೆಯಾಗಿದ್ದಾರೆ.
ವಿಶ್ವದ ಅತಿದೊಡ್ಡ ಹ್ಯಾಕಥಾನ್ ಇದಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಆರ್ಟಿ ಫಿಷಿಯಲ್ ಇಂಟಲಿಜೆನ್ಸ್, ಸಾಫ್ಟ್‍ವೇರ್ ಹಾಗೂ ಹಾರ್ಡ್‍ವೇರ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ದಾವಣಗೆರೆ ಮೂಲದ ಬೆಂಗಳೂರಿನ ಐಡಾ ಲವ್ಲೇಸ್ ಸಾಫ್ಟ್‍ವೇರ್ ಕಂಪನಿಗೆ ಈ ವರ್ಷದ ಆರಂಭದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ದೊಡ್ಡ ಮೊತ್ತದ ಅನುದಾನ ಮತ್ತು ಪ್ರಶಂಸನಾ ಪತ್ರ ನೀಡಿತ್ತು. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಲ್.ರಾಕೇಶ್ ಪುರಸ್ಕಾರ ಸ್ವೀಕರಿಸಿದ್ದರು.
Read also : ಅಕ್ರಮ ಮಣ್ಣು ಗಣಿಗಾರಿಕೆ | ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ : ಡಿಎಸ್ ಎಸ್ ಆರೋಪ