ದಾವಣಗೆರೆ : ವಿಜ್ಞಾನ ವಿಷಯ ಓದುವ ವಿದ್ಯಾರ್ಥಿಗಳ ಮನಸ್ಥಿತಿ, ಅಭಿರುಚಿಗಳು ಬದಲಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ರವಿಕುಮಾರ್ ಕೆ.ವಿ., ಸಲಹೆ ನೀಡಿದರು.
ಬಾಪೂಜಿ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದಿಗೂ ಫಲವನ್ನು ನೀಡುತ್ತದೆ. ದೇವನೂರು ಮಹಾದೇವ ಅವರ ಮಾತುಗಳನ್ನು ನೆನಪಿಸಿದರು.
ವಿದ್ಯಾರ್ಥಿಗಳು ಓದುವುದರಾಚೆಗೆ ಇರುವ ಮನಸ್ಥಿತಿಗಳು ಶುದ್ಧವಾಗಿದ್ದರೆ ಧನಾತ್ಮಕ ಚಿಂತನೆಗಳು ವಿದ್ಯಾರ್ಥಿಗಳ ಮನಸ್ಥಿತಿಯನ್ನು ರೂಪಿಸುತ್ತೇವೆ. ದೃಶ್ಯಗಳ ಕಡೆಗೆ ಹೋಗುವ ಮನಸ್ಸನ್ನು ಅಕ್ಷರಗಳ ಕಡೆಗೆ ತಿರುಗಿಸುವ ಜವಾಬ್ದಾರಿ ಪೋಷಕರಲ್ಲಿದೆ ಎಂದರು.
ಪ್ರಾಂಶುಪಾಲರಾದ . ಎಂ.ಪಿ. ರುದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳನ್ನು ತಿದ್ದಿ ಉತ್ತಮ ಮೂರ್ತಿ ಮಾಡುವ ಕರ್ತವ್ಯ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದರು.
ಹಳೇಯ ವಿದ್ಯಾರ್ಥಿ ಶ್ರೀಮತಿ ಪೂಜಾ ಸಿ ಜನ್ನು, ಉಪನ್ಯಾಸಕರಾದ ಶಿವಶಂಕರ್. ಉಮೇಶ್, ಶ್ರೀಮತಿ ಶರ್ಮಿಳಾ ಸೇರಿದಂತೆ ಇತರರು ಇದ್ದರು.