ದಾವಣಗೆರೆ (Davanagere): ನಗರದ ಆಜಾದ್ ನಗರದ ಮೊದಲನೇ ಮುಖ್ಯ ರಸ್ತೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ ಸ್ವತಂತ್ರ ಚಳುವಳಿಯ ಹರಿಕಾರರು ಹಾಗೂ ಕ್ರಾಂತಿಕಾರಿ ಕಿಡಿ ಹೊತ್ತಿಸಿ ಸ್ವತಂತ್ರಕ್ಕಾಗಿ ಹೋರಾಡಿದ ವೀರ ಪುರುಷ ಚಂದ್ರಶೇಖರ ಅಜಾದ್ ಅವರ ಪುಣ್ಮ ಸ್ಮರಣೆಯನ್ನು ಆಚರಿಸಿ, ಮೇಣದ ಬತ್ತಿಯನ್ನು ಬೆಳಗಿಸಿ ಗೌರವ ನಮನಗಳನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಘಟಕದ ಪ್ರಧಾನ ಕಾರ್ಯದರ್ಶಿ ಹರೀಶ್ .ಹೆಚ್, ಮಂಜುನಾಥ್ .ಎ, ಕುಮಾರ .ಎನ್, ಪ್ರದೀಪ್ .ಆರ್, ತೇಜಸ್ .ಕೆ, ಜಿತೇಂದ್ರ ಪಿ.ಪಿ ಸೇರಿದಂತೆ ಇತರರು ಉಪಸ್ಥಿತರಿದ್ದರು.