ದಾವಣಗೆರೆ (Davanagere ) : ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ಕೊಟ್ಟ ಪೋಷಕರಿಗೆ ನ್ಯಾಯಾಲಯ (PRL SENIOR CIVIL JUDGE AND CJM COURT) 25 ಸಾವಿರ ದಂಡ ವಿಧಿಸಿದೆ.
ನಗರದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಯಲು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ರವರ ಸೂಚನೆಯಂತೆ ದಾವಣಗೆರೆ ನಗರ ಪೊಲೀಸ್ ಉಪಾಧೀಕ್ಷಕ
ಮಲ್ಲೇಶ್ ದೊಡ್ಮನಿ ರವರ ಮಾರ್ಗದರ್ಶನದಲ್ಲಿ ಆ 23 ರಂದು ದಕ್ಷಿಣ ಸಂಚಾರ ಠಾಣೆ ಪಿಎಸ್‌ಐ ನಿರ್ಮಲ ಡಿ.ಹೆಚ್ ರವರ ನೇತೃತ್ವದಲ್ಲಿ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ನೂತನ ಕಾಲೇಜು ರಸ್ತೆಯಲ್ಲಿ ಅಪ್ರಾಪ್ತ ವಯಸ್ಸಿನ (17 ವರ್ಷದ ಬಾಲಕ) ಬಾಲಕನು ಬೈಕ್ ಚಾಲನೆ
ಮಾಡಿಕೊಂಡು ಬರುತ್ತಿದ್ದ ವೇಳೆ ಪರಿಶೀಲನೆ ಮಾಡಿದಾಗ ಬಾಲಕ ಅಪ್ರಾಪ್ತನಾಗಿದ್ದು, ಅಪ್ರಾಪ್ತನಿಗೆ ಸಾರ್ವಜನಿಕ ರಸ್ತೆ ಮೇಲೆ ಚಲಾಯಿಸಲು ಬೈಕ್ ನೀಡಿದ ಹಿನ್ನಲೆಯಲ್ಲಿ ಬೈಕನ್ನು ಜಪ್ತು ಮಾಡಿ ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು PRL SENIOR CIVIL JUDGE AND CJM COURT ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿತ್ತು.
Read also : Davanagere Electrical variation | ಆ.30 ರಂದು ವಿದ್ಯುತ್ ವ್ಯತ್ಯಯ
ನ್ಯಾಯಾಲಯವು ಆರೋಪಿತ ಬೈಕ್ ಮಾಲೀಕ ತನ್ನ ಬೈಕನ್ನು ಅಪ್ರಾಪ್ತ ವಯಸ್ಕನಾದ ತನ್ನ ಮಗನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ಬೈಕ್ ಮಾಲೀಕನಿಗೆ 25,000/- ರೂಗಳ ದಂಡವನ್ನು ವಿಧಿಸಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರಿಗೆ / ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ, ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.