ದಾವಣಗೆರೆ. ನ.27 (Davanagere); ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಡಿ.10 ರಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಸುವರ್ಣಸೌಧಕ್ಕೆ ಟ್ರ್ಯಾಕ್ಟರ್ ಗಳೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮದ ಗುರುಪೀಠದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಶಿಕ್ಷಣಕ್ಕಾಗಿ ಉದ್ಯೋಗಕ್ಕಾಗಿ ಮೀಸಲಾತಿ ಪಡೆಯಲು 2 ಎಗೆ ಸೇರ್ಪಡೆ ಮಾಡಬೇಕೆಂದು ನಾಲ್ಕು ವರ್ಷದಿಂದ ನಿರಂತರವಾಗಿ ಪ್ರಾಮಾಣಿಕ ಹೋರಾಟ ಮಾಡುತ್ತಾ ಬಂದಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ಕೊನೆಗಳಿಗೆ ಯಲ್ಲಿ ನಿರ್ಧಾರ ತೆಗೆದುಕೊಂಡಿತಾದರೂ ಮೀಸಲಾತಿ ಪ್ರಸ್ತಾಪ ಅಲ್ಲಿಗೆ ಸ್ಥಗಿತವಾಗಿತು. ಆದರೆ, ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಿಸಬಾರದು ಹಾಗೂ ಹೋರಾಟ ಗಟ್ಟಿಗೊಳಿಸಲು ನಿರಂತರ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ನಮ್ಮ ಹೋರಾಟಕ್ಕೆ ಮನ್ನಣೆ ನೀಡುತ್ತಿಲ್ಲ ಮುಖ್ಯಮಂತ್ರಿಗಳು ಮೀಸಲಾತಿ ಕುರಿತು ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಕ್ಕೆ ನಮ್ಮ ಕೂಗು ಮುಟ್ಟುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ಈಗಾಗಲೇ ಹೆದ್ದಾರಿ ತಡೆದು, ರಸ್ತೆಯಲ್ಲೇ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಗುರುಗಳು ಹೋರಾಟ ಮಾಡಿ ಸರ್ಕಾರಕ್ಕೆ ಚುರುಕು ಮುಟ್ಟಿಸಿದರೂ ಕೂಡ ನಮ್ಮ ಸಮಾಜದ ಶಾಸಕರು ಅಧಿವೇಶನದಲ್ಲಿ ಮಾತನಾಡಲಿಲ್ಲ. ಆದರೆ, ನಮ್ಮ ಹೋರಾಟ ನಿಂತಿಲ್ಲ ಕೊನೆಗೆ ಕಾನೂನು ಹೋರಾಟಕ್ಕೆ ಮುಂದಾದ ವೇಳೆ ಸಿಎಂ ಎರಡು ತಾಸು ಸಭೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಸಿಎಂ ಉಪಚುನಾವಣೆ ನೆಪ ಮಾಡಿಕೊಂಡು ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಮೀಸಲಾತಿ ಘೋಷಣೆ ಮಾಡಿಲ್ಲ . ಕೊನೆಗೆ ಒಂದು ದಿನಾಂಕನಿಗಧಿ ಮಾಡಲು ಸಿಎಂಗೆ ಮನವಿ ಮಾಡಿದೆವು ಆದರೆ ಯಾವುದೇ ಪ್ರಯೋಜನ ವಾಗಿಲ್ಲ ಎಂದರು.
ನಮಗೆ ಮೀಸಲಾತಿ ಕೂಲಿ ಕೊಡಿ ಅನುದಾನ ಬೇಡ,ಅಧಿಕಾರ ಬೇಡ ನಮ್ಮ ಮಕ್ಕಳ ವಿದ್ಯಾಭ್ಯಾಸ ಕ್ಕೆ ಮೀಸಲಾತಿ ಕೂಲಿ ಕೇಳಿದ್ದೇವೆ. ಎಲ್ಲಾ ಲಿಂಗಾಯತ ಉಪ ಸಮುದಾಯಗಳಿಗೆ ಮೀಸಲಾತಿ ಕೇಳಿದ್ದೇವೆ.ಆದರೆ ಯಾವುದೇ ಮನ್ನಣೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಉಗ್ರ ಹೋರಾಟದ ಮೂಲಕ ಹಕ್ಕೊತ್ತಾಯ ಮಾಡಲು ಡಿ.10 ರಂದು ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ತೀರ್ಮಾನ ಕೈಗೊಂಡಿದ್ದೇವೆ ನಮ್ಮ ಹೋರಾಟಕ್ಕೆ ಪಕ್ಷಾತೀತ ಬೆಂಬಲ ನೀಡಬೇಕು ಎಂದರು.
ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ಪ್ರತಿಭಟನೆಯ ಮುಂದಾಳತ್ವವನ್ನು ಪಂಚಮಸಾಲಿ ಹೋರಾಟ ಸಮಿತಿ ವಹಿಸಿಕೊಳ್ಳಲಿದೆ..ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹೋರಾಟಕ್ಕೆ ಬರಬೇಕೆಂದು ಮನವಿ ಮಾಡಿದರು.
ದಾವಣಗೆರೆಯಲ್ಲಿ ನಮ್ಮ ಹೋರಾಟ ಯಶಸ್ವಿಯಾಗಿದೆ ಅದಕ್ಕಾಗಿ ಜಿಲ್ಲೆಯಿಂದ ಹೆಚ್ಚು ಸಮಾಜಬಾಂಧವರು ಆಗಮಿಸಬೇಕೆಂದರು. ಸರ್ಕಾರ ಅಧಿಕಾರ ವಹಿಸಿಕೊಂಡು ಎರಡು ವರ್ಷವಾಗಿದೆ. ಸರ್ಕಾರ ವಿಳಂಬ ಮಾಡದೆ ಮೀಸಲಾತಿ ಜಾರಿಗೊಳಿಸಬೇಕು.ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣಬೇಕು. ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತ ಸಮಾಜವೂ ಕಾರಣ ಎಂಬುದನ್ನು ಸಿಎಂ ಮರೆಯಬಾರದು ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದರು.
ಡಿ.10 ರಂದು ಬೆಳಗ್ಗೆ 10 ಕ್ಕೆ ಬೆಳಗಾವಿ ಸುವರ್ಣ ಸೌಧಕ್ಕೆ ಶಾಂತಿಯುತ ಮುತ್ತಿಗೆ ಹಾಕಲಾಗುವುದು ಹಾಗೂ ಅಹಿಂಸಾತ್ಮಕ ಪ್ರತಿಭಟನೆ ಮಾಡುತ್ತೇವೆ ಎಂದರು. ರಾಜ್ಯ ಸರ್ಕಾರ ಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಪಂಚಮಸಾಲಿನಡಿಗೆ ಬೆಳಗಾವಿ ಸುವರ್ಣಸೌಧದ ವರೆಗೆ ಘೋಷವಾಕ್ಯದೊಂದಿಗೆ ನಮ್ಮ ಹೋರಾಟ ನಡೆಯಲಿದೆ ಎಂದರು.
ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಮಾತನಾಡಿ, ಪಂಚಮಸಾಲಿ ಹೋರಾಟ ಕವಲು ದಾರಿಯಲ್ಲ. ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಯಾರು ಮಾಡಬಾರದು. ನಮ್ಮ ನಾಯಕರು ಸರ್ಕಾರ ಬಡಿದೆಬ್ಬಿಸುವ ಕೆಲಸ ಮಾಡಬೇಕು. ಸಮಾಜದ ಒಳಿತಿಗಾಗಿ ಎಲ್ಲರೂ ಒಗ್ಗೂಡಬೇಕು. ಸಮಾಜ 2 ಎ ಮೀಸಲಾತಿ ಪಡೆಯುವ ಉದ್ದೇಶ ಮುಖ್ಯ. ವೈಯಕ್ತಿಕ ವಿಚಾರ ಪ್ರಸ್ತಾಪ ಬೇಡ. ಹೋರಾಟದ ತೀಕ್ಷ್ಣತೆಗೆ ತಣ್ಣಿರು ಎರಚಬಾರದು. ಶ್ರೀಗಳು ಯಾವ ಹೋರಾಟದ ನಾಯಕರ ಪರ ಅಲ್ಲ. ಶ್ರೀಗಳು ನಿರಂತ ಹೋರಾಟ ಮಾಡುತ್ತಿದ್ದಾರೆ. ಕೆಲವರು ಶ್ರೀಗಳ ಮೇಲೆ ಆರೋಪಮಾಡಿದರು .ಶ್ರೀ ಗಳು ಪೀಠ ಬಿಟ್ಟು ನಿರಂತ ಹೋರಾಟ ಮಾಡುತ್ತಿದ್ದಾರೆ. ಶ್ರೀಗಳ ಬಗ್ಗೆ ಅಪನಂಬಿಕೆ ಬೇಡ, ಶ್ರೀಗಳಿಗೆ ಸಮಾಜದ ಕಳಕಳಿ ಇದೆ ಎಂದರು.
ಮಾಜಿ ಮೇಯರ್ ಬಿ.ಜಿ ಅಜಯಕುಮಾರ್, ಕಾರಿಗನೂರು ಕಲ್ಲೇಶಪ್ಪ, ಚನ್ನಬಸವನಗೌಡ್ರು, ಮಯೂರ್, ಆನಂದ ಜಿರ್ಲೆ, ಬಿ.ಜಿ ಭರತ್, ಕೊಟ್ರೆಶ್, ಚಂದ್ರು ಮಹೇಶ್ ಉಪಸ್ಥಿತರಿದ್ದರು.
Read also : Davanagere | ಚಳಿಗಾಲ ಅಧಿವೇಶನದಲ್ಲಿ ಸೇವೆ ಖಾಯಂಗೆ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ನೌಕರರ ಮನವಿ