Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸಿದ್ದರಾಮ ಶಿವಯೋಗಿಗಳು ಕಲ್ಯಾಣಕ್ರಾಂತಿಯ ಇತಿಹಾಸದ ಅಗ್ರಜರು : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ತಾಜಾ ಸುದ್ದಿ

ಸಿದ್ದರಾಮ ಶಿವಯೋಗಿಗಳು ಕಲ್ಯಾಣಕ್ರಾಂತಿಯ ಇತಿಹಾಸದ ಅಗ್ರಜರು : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

Dinamaana Kannada News
Last updated: January 15, 2026 3:00 pm
Dinamaana Kannada News
Share
Davanagere
SHARE
ದಾವಣಗೆರೆ.15: ವಚನ ಚಳವಳಿಯ ಸಾವಿರದ ಧಾರೆಗಳಲ್ಲಿ ಅಸಂಖ್ಯ ಶರಣರು ಭಾಗವಹಿಸಿದ್ದು ಅದನ್ನು ಇನ್ನಿಲ್ಲದಂತೆ ಮುನ್ನಡೆಸಿದ್ದು ಸಿದ್ಧರಾಮೇಶ್ವರರು. ಕನ್ನಡ ಬದುಕಿಗೆ ಒಂದು ಜಂಗಮ ಗುಣವನ್ನು ತಂದುಕೊಂಡದ್ದು ಸಿದ್ಧರಾಮೇಶ್ವರರು ಹಾಗೂ ಸಮಾಕಾವೃಲೀನ ಶರಣರು. ಸಿದ್ದರಾಮ ಶಿವಯೋಗಿಗಳು ಕಲ್ಯಾಣಕ್ರಾಂತಿಯ ಇತಿಹಾಸದ ಅಗ್ರಜರು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ದಾವಣಗೆರೆ ನಗರದ ವೆಂಕಭೋವಿ ಕಾಲೋನಿಯ ಸಿದ್ಧರಾಮೇಶ್ವರ ಮಹಾಮಠ ಭೋವಿ ಗುರುಪೀಠದಲ್ಲಿ ಜರುಗಿದ ಸಿದ್ಧರಾಮೇಶ್ವರ ಜಯಂತ್ಯೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು.
ಈ ಶರಣ ಚಳವಳಿಯ ಅಧ್ವರ್ಯುಶಕ್ತಿಯಾಗಿ ಶರಣ ಸಿದ್ಧರಾಮೇಶ್ವರರು ಬರುತ್ತಾರೆ. ಸೊನ್ನಲಾಪುರದಲ್ಲಿ ಕಾಯಕಯೋಗಿಯಾಗಿದ್ದ ಸಿದ್ಧರಾಮರು ಅಲ್ಲಮಪ್ರಭುಗಳ ಕಾರಣದಿಂದಾಗಿ ಶಿವಯೋಗಿಯಾಗಿ ಬೆಳೆದದ್ದು, ಕಲ್ಯಾಣದತ್ತ ಪ್ರಯಾಣಿಸಿದ್ದು ಶರಣರ ಅನುಭವ ಮಂಟಪದಲ್ಲಿ ಸಂವಾದಿಸಿದ್ದು ಶರಣ ಚಳವಳಿಯ ಮಹತ್ವದ ಭಾಗವೇ ಸರಿ.
ಸಿದ್ಧರಾಮರು ಮೂಲತಃ ನಾಥಪಂಥಕ್ಕೆ ಸೇರಿದ್ದು ಶ್ರೀಶೈಲದ ಮಲ್ಲಿನಾಥನ ನಾಥಪಂಥ ಕೇಂದ್ರಕ್ಕೆ ಹೋಗಿಬಂದದ್ದು, ಅದಾದ ತರುವಾಯದಲ್ಲಿ ಕಲ್ಯಾಣಕ್ಕೆ ಬಂದು ಶರಣ ಚಳವಳಿಯಲ್ಲಿ ಭಾಗವಹಿಸಿದ್ದು ಇದು ಸಿದ್ಧರಾಮರ ಬದುಕಿನ ಮಹಾಯಾನವೇ ಆಗಿದೆ. ಈ ಬದುಕಿನ ಯಾನದಲ್ಲಿ ಅಲ್ಲಮಪ್ರಭುಗಳ ಪಾತ್ರದ ಜೊತೆಗೆ ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ ಮೊದಲಾದ ಹಲವು ಶಿವಶರಣರ ಪ್ರಭಾವೀ ಪಾತ್ರವೂ ಇರುವುದನ್ನು ಮರೆಯುವಂತಿಲ್ಲ. ವಚನಧರ್ಮಕ್ಕೆ ಸಿದ್ಧರಾಮರ ಕೊಡುಗೆ ಅಪಾರವಾದುದು.
Read also : ಕಳೆದುಕೊಂಡಿದ್ದ ಚಿನ್ನಾಭರಣ ಪತ್ತೆ ಹಚ್ಚಿ ವಾರಸುದಾರರಿಗೆ ನೀಡಿದ ಪೊಲೀಸರು
ಸಿದ್ಧರಾಮರು ತೋರುಗದ್ದುಗೆಗಳು ಅವರ ಬದುಕಿನ ಯಾನದ ಪ್ರತೀಕಗಳಾಗಿ ಕರ್ನಾಟಕದಾದ್ಯಂತ ಇಂದಿಗೂ ಇವೆ. ಮಹಾರಾಷ್ಟ್ರದಲ್ಲೂ ಇವೆ. ಈ ತೋರುಗದ್ದುಗೆಗಳಲ್ಲಿ ಸಿದ್ಧರಾಮರೇ ಪೂಜೆಗೊಳ್ಳುತ್ತಿ ದ್ದಾರೆ.  ಕ್ಷೇತ್ರಾಧ್ಯಯನ ಮಾಡಿದಂತೆ ಹೊರಹೊಮ್ಮಿದ ಸತ್ಯವೆಂದರೆ ಅವೆಲ್ಲ ಶರಣ ಸಿದ್ದರಾಮರು ಶರಣಧರ್ಮವನ್ನು ಪ್ರಸಾರ ಮಾಡಿದಾಗ ಲಿಂಗದೀಕ್ಷೆಯ ಮುಖೇನ ಶಿವಶರಣರನ್ನೆ ಸಂಘಟಿಸಿದ ಬೆಳೆಸಿದ ತಾಣಗಳೆಂಬುದು ಗೊತ್ತಾಗುವ ಸತ್ಯ. ಅದರಲ್ಲೂ ದಕ್ಷಿಣ ಕರ್ನಾಟಕಕ್ಕೆ ಶರಣಧರ್ಮವನ್ನು ಪ್ರಸಾರ ಮಾಡಿದ್ದರಲ್ಲಿ ಸಿದ್ಧರಾಮರ ಪಾತ್ರ ದೊಡ್ಡದು. ಆದ್ದರಿಂದಲೇ ಅದರ ಕುರುಹಾಗಿ ಇಂದಿಗೂ ಕರ್ನಾಟಕ ಮಹಾರಾಷ್ಟ್ರಗಳಲ್ಲಿ 72ಕ್ಕೂ ಹೆಚ್ಚು ತೋರುಗದ್ದುಗೆಗಳಿವೆ. ಇಂದು ಅವೆಲ್ಲ ಸಿದ್ಧರಾಮೇಶ್ವರ ದೇವಾಲಯಗಳಾಗಿವೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲಾ ಭೋವಿ ಅಭಿವೃದ್ಧಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್ ಜಯಣ್ಣ, ಗೌರವಾಧ್ಯಕ್ಷ ಬಿ.ಟಿ.ಸಿದ್ಧಪ್ಪ, ಕಾರ್ಯಧ್ಯಕ್ಷ ಗೋಪಾಲ, ಯುವಾಧ್ಯಕ್ಷ ನಾಗರಾಜ, ಜಿ.ಪಂ ಮಾಜಿ ಸದಸ್ಯ ವೀರಭದ್ರಪ್ಪ, ನಿವೃತ್ತ ಇಂಜಿನಿಯರ್ ವೆಂಕಟೇಶ್, ಕರಾಟೆ ತಿಮ್ಮೇಶ, ಲಕ್ಷ್ಮಣ, ಮೂರ್ತ್ಯಪ್ಪ, ಚಂದ್ರಪ್ಪ, ಕರಿಯಪ್ಪ ವಕೀಲರು, ಗಣೇಶ, ಬಸವರಾಜ, ದೊರೆರಾಜು ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.
TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
Share This Article
Twitter Email Copy Link Print
Previous Article Davanagere crime news ಕಳೆದುಕೊಂಡಿದ್ದ ಚಿನ್ನಾಭರಣ ಪತ್ತೆ ಹಚ್ಚಿ ವಾರಸುದಾರರಿಗೆ ನೀಡಿದ ಪೊಲೀಸರು
Next Article Davanagere Crime news|ವಿವಿಧ ಕಡೆ ಕಳ್ಳತನ:ತಂದೆ – ಮಕ್ಕಳ ಬಂಧನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಅಲ್ಪಸಂಖ್ಯಾತರ ಇಲಾಖೆವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.…

By Dinamaana Kannada News

DAVANAGERE NEWS : ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಗೆ : ದಾವಣಗೆರೆಯ ಪುಟಾಣಿ ಸ್ತುತಿ ಎಸ್.

ದಾವಣಗೆರೆ (DAVANAGERE ) : ನಗರದ ಪುಟಾಣಿ ಸ್ತುತಿ ಎಸ್. 7ನೇ ವಯಸ್ಸಿನಲ್ಲಿ ಕಣ್ಣು ಮುಚ್ಚಿ   ಪಿರಾಮಿಂಕ್ಸ್ ರೂಬಿಕ್ ಕ್ಯೂಬ್…

By Dinamaana Kannada News

ಹಣ ದುರುಪಯೋಗ, ಕರ್ತವ್ಯ ಲೋಪ ಆರೋಪ: ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಅಮಾನತು

ದಾವಣಗೆರೆ (Davanagere): ಸರ್ಕಾರದ ನಿಯಮಗಳ ಪ್ರಕಾರ ಜವಾಬ್ದಾರಿ ಅರಿತು ತಮ್ಮ ಕರ್ತವ್ಯ ಹಾಗೂ ಹಣ ದುರುಪಯೋಗ , ಹಲವಾರು ಸೇವಾ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಿ: ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Davanagere lok raide
ತಾಜಾ ಸುದ್ದಿ

ಬೆಸ್ಕಾಂ ಎಇಇಗೆ ಲೋಕಾಯುಕ್ತ ಬಿಸಿ: ಶಿವಮೊಗ್ಗ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ

By Dinamaana Kannada News
Davanagere
ತಾಜಾ ಸುದ್ದಿ

ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ : ಪಾಲಿಕೆ ಆಯುಕ್ತೆ ರೇಣುಕಾ

By Dinamaana Kannada News
Job fair
ತಾಜಾ ಸುದ್ದಿ

ಮಾಜಿ ಸೈನಿಕರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?