ದಾವಣಗೆರೆ (Davangere District): ಇಲ್ಲಿನ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆ ವತಿಯಿಂದ ಡಯಾಲಿಸಿಸ್ ರೋಗಿಗಳಿಗೆ ಉಚಿತ ವಾಹನ ಸೇವೆಗೆ ಗುರುವಾರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ, ಕಳೆದ 11 ವರ್ಷಗಳಿಂದ ಹೃದಯ ಸಂಬಂಧಿ ಸಮಸ್ಯೆಗಳಿಗೆ ಎಸ್ ಎಸ್ ನಾರಾಯಣ ಹೆಲ್ತ್ ಕೇರ್ ಆಸ್ಪತ್ರೆ ಉತ್ತಮ ಸೇವೆ ಒದಗಿಸುತ್ತಿದೆ.ಮೂತ್ರಪಿಂಡ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ಅಗತ್ಯವಿದ್ದು, ಇಂತಹ ಸಂದರ್ಭಗಳಲ್ಲಿ ಉಚಿತ ವಾಹನ ಸೇವೆಯು ಅತ್ಯಂತ ಪ್ರಯೋಜನಕಾರಿಯಾಗಲಿದೆ. ಈ ಮೂಲಕ ಡಯಾಲಿಸಿಸ್‌ನ ಸಮಯಪಾಲನೆ ಜೊತೆಗೆ, ಓಡಾಟದ ವೆಚ್ಚವು ಉಳಿತಾಯವಾಗಲಿದೆ. ಎಸ್ ಎಸ್ ನಾರಾಯಣ ಹೆಲ್ತ್‌ನ ಈ ಹೊಸ ಯೋಜನೆಯು ಸಮಾಜಮುಖಿಯಾಗಿದ್ದು ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
Read also : Davangere | ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರ : ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಭಂಡಾರಿಗಲ್ ಮಾತನಾಡಿ, 2012ನೇ ಇಸವಿಯಿಂದ ಎಸ್. ಎಸ್. ಐ. ಎಮ್. ಎಸ್ & ಆರ್.ಸಿ ಜೊತೆ ಕೈ ಜೋಡಿಸಿರುವ ನಾರಾಯಣ ಹೆಲ್ತ್, ಕಳೆದ 11 ವರ್ಷಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಹೃದಯರೋಗಿಗಳಿಗೆ ಚಿಕಿತ್ಸೆ ಒದಗಿಸಿದ್ದು, ಕಳೆದ 8 ತಿಂಗಳುಗಳಿಂದ ನರರೋಗ, ಮೂತ್ರಪಿಂಡ, ಮೂತ್ರಕೋಶ ಮತ್ತು ಗ್ಯಾಸ್ಟ್ರೊಎಂಟರಾಲಜಿ ಸಂಬಂಧಿತ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುತ್ತಿದೆ. ದಾವಣಗೆರೆಯ ಸುತ್ತಲಿನ 25 ಕಿಲೊಮೀಟರ್ ವ್ಯಾಪ್ತಿಯ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಉಚಿತ ವಾಹನ ಸೌಲಭ್ಯ ಇಂದಿನಿಂದ ಲಭ್ಯವಿದೆ ಎಂದು ತಿಳಿಸಿದರು.
ಎಸ್.ಎಸ್.ಐ.ಎಂ.ಎಸ್ & ಆರ್ ಸಿ ವೈದ್ಯಕೀಯ ನಿರ್ದೇಶಕ ಡಾ|| ಅರುಣ್ ಅಜ್ಜಪ್ಪ, ಮೂತ್ರಪಿಂಡ ಚಿಕಿತ್ಸಾ ತಜ್ಞ ಡಾ||ಪ್ರಮೋದ್.ಜಿ.ಆರ್ ಮತ್ತು ಎಸ್. ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯ ಇತರೆ ವೈದ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.