ಹರಿಹರ : (Davangere district ) ಸಂತ ಅಲೋಶಿಯಸ್ ಸಂಸ್ಥೆ (St. Aloysius Institute) ಯಲ್ಲಿ ಅವರಣದಲ್ಲಿ ಇಗ್ನೇಷಿಯಸ್ ಲೊಯೋಲಾ ಹಬ್ಬ ಆಚರಣೆ ಹಾಗೂ ಶಾಲಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಹರಿಹರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ದುರ್ಗಪ್ಪ ಡಿ ಮಾತನಾಡಿ, ಶಿಸ್ತಿನ, ಸಂಸ್ಕಾರಯುತ ವಾತಾವರಣದಲ್ಲಿ ಸದೃಢ ಪ್ರಜೆಗಳು ಮೂಡಿಬರಲು ಸಾಧ್ಯ. ಈ ನಿಟ್ಟಿನಲ್ಲಿ ಅಲೋಶಿಯಸ್ ಸಂಸ್ಥೆಯು ಪ್ರಶಂಸಾರ್ಹ ಕಾರ್ಯ ನಿರ್ವಹಿಸುತ್ತಿದೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ, ಮಾತನಾಡಿ, ಶಾಲಾ -ಕಾಲೇಜುಗಳು ಇಂದು ಡ್ರಗ್ ಮಾಫಿಯಾದ ಕೇಂದ್ರಗಳಾಗುತ್ತಿವೆ. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ಸುರಕ್ಷಿತ ತಾಣವಾಗಿದೆ ಎಂದರು.
READ ALSO : Davanagere : ಭದ್ರಾ ಡ್ಯಾಂನಿಂದ ಹೆಚ್ಚಿದ ಹೊರ ಹರಿವು : ಪ್ರವಾಹ ಭೀತಿ
ಹರಿಹರ ಆರೋಗ್ಯ ಮಾತಾ ಧರ್ಮ ದೇವಾಲಯದ ಧರ್ಮ ಗುರು ಫಾದರ್ ಜಾರ್ಜ್ ಕೆ.ಎ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು. ವಿದ್ಯಾರ್ಥಿನಿ ವರ್ಷಾ ಚೌಧರಿ ದಿನದ ಮಹತ್ವವನ್ನು ಭಾಷಣದ ಮೂಲಕ ನಿರೂಪಿಸಿದರು. ಶಾಲೆಯ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳ ಪದಗ್ರಹಣ, ಶಾಲಾ ಧ್ವಜ, ವಿವಿಧ ವಿದ್ಯಾರ್ಥಿಗಳಿಗೆ ಸಂಬAಧಿಸಿದAತೆ ಕೆಂಪು,ನೀಲಿ, ಹಸಿರು,ಹಳದಿ ಬಣ್ಣದ ಧ್ವಜ, ಬ್ಯಾಡ್ಜ್ ಹಸ್ತಾಂತರದೊAದಿಗೆ ಕಾರ್ಯಕ್ರಮ ಅತ್ಯಂತ ಶಿಸ್ತು ಬದ್ಧವಾಗಿ ನಡೆಯುವ ಮೂಲಕ ಎಲ್ಲರ ಕಣ್ಮನ ಸೆಳೆಯಿತು.
ಶಾಲಾ ಪ್ರಾಂಶುಪಾಲರಾದ ಫಾದರ್ ವಿನೋದ್ ಎ ಜೆ.ಎಸ್ ಜೆ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಅಧಿಕಾರ ನಿರ್ವಹಣೆ ಮತ್ತು ಗೌಪ್ಯತಾ ಪ್ರಯಾಣವಚನ ಬೋಧಿಸಿದರು.
ಕಾಲೇಜು ಮಟ್ಟದಲ್ಲಿ ನಡೆಸಲಾದ ಪ್ರಬಂಧ, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಫಾದರ್ ವಿನೋದ್ ಎ ಜೆ.ಎಸ್ ಜೆ, ಸಂಸ್ಥೆಯ ನಿರ್ದೇಶಕ ಫಾದರ್ ಎರಿಕ್ ಮಥಾಯಸ್ ಎಸ್ ಜೆ, ವೇದಿಕೆಯಲ್ಲಿ ಶಾಲಾ ಶೈಕ್ಷಣಿಕ ಸಲಹೆಗಾರರಾದ ಗ್ರೇಸ್ ನೊರೋನ್ಹ, ಕಾಲೇಜು ಪ್ರಾಂಶುಪಾಲರಾದ ಪುಷ್ಪಲತಾ ಅರಸ್, ಸಂಸ್ಥೆಯ ಬಾಲಕರ ವಿದ್ಯಾರ್ಥಿ ನಿಲಯದ ನಿರ್ದೇಶಕ ಫಾದರ್ ಜೋನ್ ಬ್ಯಾಪ್ಟಿಸ್ಟ್ ಎಸ್ ಜೆ, ಉಪ ಪ್ರಾಂಶುಪಾಲರಾದ ಮೌಸಿನ್ ಉಲ್ಲಾ, ಫಾಸ್ಕಲ್ ಫೆರ್ನಾಂಡಿಸ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜೋಸ್ ಆಂಟನಿ, ಶ್ರೀಮತಿ ಸ್ಟೆಲ್ಲಾ , ಸಂತೋಷ್ , ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.