ದಾವಣಗೆರೆ (Davanagere): ನವದೆಹಲಿಯ ಗಡಿಭಾಗದಲ್ಲಿ ಕೃಷಿ ಉತ್ಪನ್ನ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಗಾಗಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಾಷ್ಟ್ರೀಯ ರೈತ ಮುಖಂಡರ ಸತ್ಯಾಗ್ರಹ ಬೆಂಬಲಸಿ ಕರ್ನಾಟಕ ರಾಜ್ಯ ರೈತ ಸಂಘ (ರಿ) ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ 2014ರಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರದ ರೈತರ ಕೃಷಿ ಉತ್ಪನ್ನ ಬೆಳೆಗಳಿಗೆ ಎಂ.ಎಸ್.ಪಿ.ಬೆಲೆ ಖಾತ್ರಿ ಮಾಡುತ್ತೇವೆಂದು 2014ರಲ್ಲಿ ಪ್ರನಾಳಿಕೆಯಲ್ಲಿ ಹೊರಡಿಸಿದ್ದಾರೆ. ಅದೇ ಕಾರಣಕ್ಕೆ ರಾಷ್ಟ್ರೀಯ ರೈತ ಮುಖಂಡರು ಹಾಗೂ ರಾಷ್ಟ್ರದ ರೈತರು ಕರೋನಾ ಸಮಯದಲ್ಲಿ ಧರಣಿ ಕುಳಿತಿದ್ದರು. ಧರಣಿ ಸಂದರ್ಭದಲ್ಲಿ ಸುಮಾರು 800 ರೈತರು ಕರೋನಾಕ್ಕಾಗಿ ಹಾಗೂ ಕೇಂದ್ರ ಸರ್ಕಾರ ರೈತ ನೀತಿ ವಿರೋಧಕ್ಕಾಗಿ ಹುತಾತ್ಮರಾದರು ಎಂದು ಹೇಳಿದ್ದಾರೆ.
2ನೇ ಬಾರಿಯೂ ಅಧಿಕಾರಕ್ಕೆ ಬಂದ ಎನ್ಡಿಎ ಎಂ.ಎಸ್.ಪಿ.ಬೆಲೆ ಖಾತ್ರಿ ಮಾಡುತ್ತೇವೆಂದು ಕಾನೂನನ್ನು ವಾಪಾಸ್ಸು ಪಡೆದರು. ವಾಪಾಸ್ ಪಡೆದರೂ ಸಹ ರಾಜ್ಯಗಳಲ್ಲಿ ಯಾವುದೇ ಎಂ.ಎಸ್.ಪಿ.ಬೆಲೆ ಖಾತ್ರಿ ಮಾಡಿಲ್ಲ. ಇದು ಕೇಂದ್ರ ಸರ್ಕಾರ ಕುರುಡು ನೆಪ ಹೇಳುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಬಲ್ಲೂರು ರವಿಕುಮಾರ್, ಮಾಯಕೊಂಡದ ಅಶೋಕ ರಾಂಪುರದ ಬಸವರಾಜ, ಪೂಜಾರ್ ಅಂಜಿನಪ್ಪ, ಕೋಗಳಿ ಮಂಜುನಾಥ್, ಮೀಯಾಪುರದ ತಿರುಮಲೇಶ, ಹೆಬ್ಬಾಳು ರಾಜಯೋಗಿ, ಪ್ರತಾಪ್ ನಾಗರಕಟ್ಟೆ, ಜಯನಾಯ್ಕ, ಸಾಣಿಕೇರೆ ಗುರುಮರ‍್ತಿ, ಸೋಮಣ್ಣ, ದಶರಥ, ಇನ್ನಿತರರು ಉಪಸ್ಥಿತರಿದ್ದರು.
Read also : ದಾವಣಗೆರೆ ಮಹಾನಗರ ಪಾಲಿಕೆ | ನ.27 ರಿಂದ 30 ರವರೆಗೆ 69 ನೇ ಕನ್ನಡ ರಾಜ್ಯೋತ್ಸವ : ಮೇಯರ್ ಚಮನಸಾಬ್