Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಜಗತ್ತಿನ ಅಸ್ತಿತ್ವಕ್ಕೆ ಸೂರ್ಯನ ಕೊಡುಗೆ ಅಪಾರವಾದದ್ದು : ಹಿರಿಯ ಪ್ರವಚನಕಾರ ಶ್ರೀ ಗೋಪಾಲಾಚಾರ್ ಮಣ್ಣೂರ್
ತಾಜಾ ಸುದ್ದಿ

ಜಗತ್ತಿನ ಅಸ್ತಿತ್ವಕ್ಕೆ ಸೂರ್ಯನ ಕೊಡುಗೆ ಅಪಾರವಾದದ್ದು : ಹಿರಿಯ ಪ್ರವಚನಕಾರ ಶ್ರೀ ಗೋಪಾಲಾಚಾರ್ ಮಣ್ಣೂರ್

Dinamaana Kannada News
Last updated: January 25, 2026 9:42 am
Dinamaana Kannada News
Share
Davanagere
SHARE

ದಾವಣಗೆರೆ ಜ.25 : ಇಂದು ನಾವು ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಸೂರ್ಯ, ಸೂರ್ಯನಿಂದಲೇ ಮಳೆ, ಬೆಳೆ, ಆಹಾರ, ನೀರು, ಬಟ್ಟೆ, ಹೆಚ್ಚೇಕೆ? ಉಸಿರಾಡುವ ಆಮ್ಲಜನಕವೂ ಅವನ ಶಕ್ತಿಯಿಂದ ಉತ್ಪತ್ತಿಯಾಗುವುದು. ಜಗತ್ತಿನ ಅಸ್ತಿತ್ವಕ್ಕೆ ಸೂರ್ಯನ ಕೊಡುಗೆ ಅಪಾರವಾದದ್ದು. ಆದ್ದರಿಂದ ನಾವು ಸೂರ್ಯದೇವನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದು ಹಿರಿಯ ಪ್ರವಚನಕಾರರೂ, ವಾಗ್ಮಿಗಳೂ, ಜ್ಯೋತಿಷಿ, ಪುರೋಹಿತರೂ ಆದ ಪೂಜ್ಯ ಶ್ರೀ ವೇ|| ಪಂ|| ಶ್ರೀ ಗೋಪಾಲಾಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶಯೋಗ ಪ್ರತಿಷ್ಠಾನ (ರಿ) ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೆಂದ್ರ ಇಲ್ಲಿ ರಥ ಸಪ್ತಮಿ ನಿಮಿತ್ತ ಆಯೋಜಿಸಲಾಗಿದ್ದ ಸೂರ್ಯ ನಮಸ್ಕಾರ ಯೋಗ ಯಜ್ಞ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ವಿಶೇಷ ಉಪನ್ಯಾಸ ನೀಡಿದರು.

ರಥ ಸಪ್ತಮಿಯು ಭಾರತೀಯರಿಗೆ ಒಂದು ವಿಶೇಷವಾದ ಶುಭ ದಿನ. ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿಯಂದು ಸೂರ್ಯ ದೇವನು ಅರುಣ ಎಂಬ ಸಾರಥಿಯೊಂದಿಗೆ 7 ಕುದುರೆಗಳುಳ್ಳ ಕುದುರೆಯನ್ನೇರಿ ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸುತ್ತಾನೆ. ಭೂಮಿಗೆ ಸ್ವಲ್ಪ ಸಮೀಪ ಬರುವುದರಿಂದ ಬಿಸಿಲು ಹೆಚ್ಚಾಗುತ್ತದೆ. ಆದ್ದರಿಂದ ನಾವು ಸೂರ್ಯನನ್ನು ವಿಶೇಷವಾಗಿ ಸ್ವಾಗತಿಸಿ ಪೂಜಾ, ಪಾರಾಯಣ ಅಘ್ರ್ಯ ಪ್ರಧಾನ ಮಾಡುವುದು ಹಾಗೂ ಸೂರ್ಯ ನಮಸ್ಕರಾದಿಯನ್ನು ಅವಶ್ಯವಾಗಿ ಮಾಡಬೇಕು. ಕಾರಣ ಸೂರ್ಯ ನಮಸ್ಕಾರವು ಸೂರ್ಯದೇವರಿಗೆ ಅತ್ಯಂತ ಪ್ರಿಯವಾದುದು. ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ದಿನದ ವಿಶೇಷವೇ ರಥಸಪ್ತಮಿ ಆಗಿದೆ ಎಂದು ರಥಸಪ್ತಮಿಯ ದಿನದಂದು ನಾವು ಮನೆಯಲ್ಲಿ ಮಾಡಬೇಕಾದ ಸರಳವಾದ ಪೂಜೆಯ ವಿಧಾನವನ್ನು ವಿವರವಾಗಿ ತಿಳಿಸಿಕೊಟ್ಟರು.

ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮ, ಯೋಗಗುರು ಡಾ|| ರಾಘವೇಂದ್ರ ಗುರೂಜಿಯವರು ನಡೆಸಿಕೊಟ್ಟರು. ನಂತರ ಸೂರ್ಯಾಷ್ಟೋತ್ತರ, ಶತನಾಮಾವಳಿಗಳೊಂದಿಗೆ ಶಾಸ್ತ್ರೋಕ್ತವಾಗಿ 108 ಸುತ್ತಿನ ಸೂರ್ಯ ನಮಸ್ಕಾರ ಯೋಗ ಪದ್ಧತಿಯನ್ನು ಪ್ರತಿಷ್ಠಾನದ ಯೋಗ ಸಾಧಕರು ಮತ್ತು ಆಸಕ್ತ ಯೋಗ ಬಂಧುಗಳು 5 ವರ್ಷದ ಮಕ್ಕಳಾದಿಯಾಗಿ 76 ವರ್ಷದ ವಯೋವೃದ್ಧರು ನಿರಾಯಾಸವಾಗಿ ಮಾಡಿ ಭಕ್ತಿ ಸಮರ್ಪಣೆ ಮಾಡಿದರು. ಸೂರ್ಯ ಮಂಡಲ ಪೂಜಾ ಕೈಂಕರ್ಯವನ್ನು ಪೂಜ್ಯ ಶ್ರೀ ವೇ|| ಪಂ|| ಶ್ರೀ ಗೋಪಾಲಾಚಾರ್ ಮಣ್ಣೂರ್ ಇವರ ಮಾರ್ಗದರ್ಶನದಲ್ಲಿ ದಂಪತಿಗಳಾದ ಪ್ರಸನ್ನಕುಮಾರ್ ಎಸ್.ಆರ್., ಜಿಲ್ಲಾ ಸಹಾಯಕ ಔಷಧಿ ನಿಯಂತ್ರಣಾಧಿಕಾರಿಗಳು ಮತ್ತು ಮಾನಸ ಎನ.ಜಿ. ಇವರು ವಿಧಿ-ವಿಧಾನಗಳೊಂದಿಗೆ ನೆರವೇರಿಸಿದರು.

ದೊಡ್ಡಬಾತಿ ಅಂಚೆ ಇಲಾಖೆಯ ವೇದಾವತಿ ಡಿ.ಎಂ.ಎಸ್. ಹಾಗೂ ಹಣಕಾಸು ಸಲಹೆಗಾರರಾದ ಮಂಜುನಾಥ್ ಹೆಚ್., ಸುಮಂಗಲ ಬಿ.ಕೆ. ಶೇಷಾದ್ರಿ, ಶಂಕರ್ ಎಲ್.ಹೆಚ್. ಪ್ರಸಾದ ಸೇವೆ, ಶ್ರೀ ಲಕ್ಷ್ಮಣ್ ಹೆಚ್.ಎನ್. ಅಭಿಯಂತರರು ಪುಷ್ಪಾಲಂಕಾರ ಸೇವೆ, ಶ್ರೀಮತಿ ಜ್ಯೋತಿ ಲಕ್ಷ್ಮೀ ವಾಸುದೇವ್ ರಂಗೋಲಿ ಸೇವೆ, ಬಾಳೆಯೆಲೆ ರುದ್ರೇಶ್ ಕೆ.ಆರ್. ಮಾರ್ಕೇಟ್, ಬಾಳೆಕಂದು ಸೇವೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಂತೋಷ್ ಹೆಚ್., ಮಾಸ್ಟರ್ ತನ್ಮಯಿ, ಮಾಸ್ಟರ್ ಷಣ್ಮಖ ಎಸ್.ವಿ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Read also : ದಾವಣಗೆರೆ:16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾಕ್ಕೆ ಚಾಲನೆ

ಸೂರ್ಯ ಮಂಡಲ ಪೂಜಾ ಸುಸಂದರ್ಭದಲ್ಲಿ ಜಿಲ್ಲಾ ಔಷಧಿ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್ ಎಸ್.ಆರ್. ಹಾಗೂ ಬ್ಯಾಡ್ಮಿಂಟನ್ ಕ್ರೀಡಾಪಟು ಮಾನಸ ಎನ್.ಜಿ. ದಂಪತಿಗಳನ್ನು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.

ಹಿರಿಯ ಯೋಗ ಶಿಕ್ಷಕ, ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ಸಂಯೋಜಕ ಲಲಿತ್‍ಕುಮಾರ್ ವಿ. ಜೈನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಯೋಗ ಸಾಧಕರುಗಳಾದ ಮಹಂತೇಶ್, ಆಸಕ್ತ ಯೋಗ ಬಂಧುಗಳು, ಇನ್ನಿತರರು ಭಾಗವಹಿಸಿದ್ದರು. ಮಹಾಮಂಗಳಾರತಿ, ತೀರ್ಥ ಪ್ರಸಾದ, ದೇಶಿ ಪಾನಿಯ, ಉಪಹಾರ ಸೇವನೆಯೊಂದಿಗೆ ರಥ ಸಪ್ತಮಿ ಕಾರ್ಯಕ್ರಮವು ಸಂಪನ್ನಗೊಂಡಿತು.

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಹಿರಿಯ ಪ್ರವಚನಕಾರ ವೇ|| ಪಂ|| ಶ್ರೀ ಗೋಪಾಲಾಚಾರ್ ಮಣ್ಣೂರ್
Share This Article
Twitter Email Copy Link Print
Previous Article Davanagere ದಾವಣಗೆರೆ:16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾಕ್ಕೆ ಚಾಲನೆ
Next Article Davanagere ಮತದಾನ ದೇಶದ ಅಭಿವೃದ್ಧಿಯ ದಿಕ್ಸೂಚಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯ

ಹರಿಹರ:  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಚಿತ್ರ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ…

By Dinamaana Kannada News

Davanagere | ಧರ್ಮ -ಜಾತಿ ಎಂಬ ದ್ವೇಷ ಬಿಟ್ಟು, ವಿಶ್ವಮಾನವರಾಗಿ : ಎಸ್ಪಿ ಉಮಾ ಪ್ರಶಾಂತ್ ಕರೆ

ದಾವಣಗೆರೆ (Davanagere) : ಯುವ ಸಮೂಹ ಧರ್ಮ -ಜಾತಿ ಎಂಬ ದ್ವೇಷ ಬಿಟ್ಟು, ವಿಶ್ವಮಾನವರಾಗಬೇಕು  ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ …

By Dinamaana Kannada News

ಪ್ರಾಮಾಣಿಕವಾಗಿ ಕೆಲಸ ಮಾಡಿ : ಡಿಸಿ

ದಾವಣಗೆರೆ : ಲೋಕಸಭಾ ಚುನಾವಣೆ ನಡೆಯುತ್ತಿದ್ದು ಇದನ್ನು ನ್ಯಾಯ ಸಮ್ಮತ, ಪಾರದರ್ಶಕ ಹಾಗೂ ಮುಕ್ತವಾಗಿ ನಡೆಸಲು ಚುನಾವಣಾ ಅಧಿಕಾರಿಗಳು ಆಯೋಗದ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಿ: ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Davanagere lok raide
ತಾಜಾ ಸುದ್ದಿ

ಬೆಸ್ಕಾಂ ಎಇಇಗೆ ಲೋಕಾಯುಕ್ತ ಬಿಸಿ: ಶಿವಮೊಗ್ಗ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ

By Dinamaana Kannada News
Davanagere
ತಾಜಾ ಸುದ್ದಿ

ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ : ಪಾಲಿಕೆ ಆಯುಕ್ತೆ ರೇಣುಕಾ

By Dinamaana Kannada News
Job fair
ತಾಜಾ ಸುದ್ದಿ

ಮಾಜಿ ಸೈನಿಕರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?