ದಾವಣಗೆರೆ.ಸೆ 29 (Davanagere) : ಕೇಂದ್ರ ಸರಕಾರದ ಸ್ವಚ್ಛ ಭಾರತ ಮಿಷನ್ ಯೋಜನೆಯ ಹತ್ತನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮತ್ತು ದಾವಣಗೆರೆ ಬೈಸಿಕಲ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ದಾವಣಗೆರೆ ನಗರದ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸೈಕಲ್ ಜಾಥಾಕ್ಕೆ ಮೇಯರ್ ಚಮನ್ ಸಾಬ್ ಚಾಲನೆ ನೀಡಿದರು.
ಗುಂಡಿ ಸರ್ಕಲ್, ವಿದ್ಯಾರ್ಥಿ ಭವನ್, ಜಯದೇವ ಸರ್ಕಲ್, ಮಹಾನಗರ ಪಾಲಿಕೆ, ಅರುಣ ಸರ್ಕಲ್, ಸಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಆಫೀಸ್ರ್ಸ್ ಕ್ಲಬ್ ವರೆಗೂ ಸೈಕಲ್ ಜಾಥಾ ನಡೆಯಿತು.
ಉಪ ಮೇಯರ್ ಸೋಗಿ ಶಾಂತ್ ಕುಮಾರ್, ಪಾಲಿಕೆಯ ಆಯುಕ್ತರಾದ ರೇಣುಕಾ. ಪಾಲಿಕೆಯ ಸದಸ್ಯರಾದ ಗಡಿ ಗುಡಾಳ್ ಮಂಜುನಾಥ್, ದಾವಣಗೆರೆ ಬೈಸಿಕಲ್ ಕ್ಲಬ್ ನ ಅಧ್ಯಕ್ಷರಾದ ಟಿ.ಎಂ.ರಾಜೇಂದ್ರ ಕುಮಾರ್. ಕಾರ್ಯದರ್ಶಿ ಕೆ.ಎಸ್.ಮಹೇಶ್. ಸದಸ್ಯರಾದ ಕಿರಣ್ , ಎನ್. ಕೆ. ಕೊಟ್ರೇಶ್ , ವಿಜಯಕಿರಣ್ , ನಂದೀಶ್, ಹರೀಶ್ , ಪ್ರಸಾದ್ , ರಮೇಶ್ , ಅರಣ್ ,ವಿಜಯ್ ಭಟ್, ನಾಗರಾಜ್ ,ಅನಿಲ್, ಮಾಲತೇಶ. ಮತ್ತು ಸಂಚಾರಿ ಪೆÇಲೀಸ್ ಸಿಬ್ಬಂದಿ, ಪಾಲಿಗೆಯ ಸಿಬ್ಬಂದಿಗಳು ಇನ್ನು ಮುಂತಾದವರು ಸಹ ಸೈಕಲ್ ಜಾತಾದಲ್ಲಿ ಭಾಗವಹಿಸಿದ್ದರು.
Read also : LG Havanur | ದಕ್ಷಿಣ ಆಫ್ರಿಕಾದ ಸಂವಿಧಾನ ರಚನಾ ಸಲಹಾ ಸಮಿತಿಯಲ್ಲಿ ಹಾವನೂರು