ದಾವಣಗೆರೆ ನ.13 (Davanagere): ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಜೀವನದಲ್ಲಿ ಸದಾ ಬೆಳೆಸಿಕೊಂಡರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು
ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ, ದಾವಣಗೆರೆ ಇವರ ವತಿಯಿಂದ ನಗರದ ಸ್ವಿಲರ್ ಜ್ಯೂಬಲಿ ಶಾಖಾ ಗ್ರಂಥಾಲಯದಲ್ಲಿ ನ. 14 ರಂದು ಆಯೋಜಿಸಲಾಗಿದ್ದ. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪೋಷಕರು ಮಕ್ಕಳನ್ನು ಪುಸ್ತಕ ಹಾಗೂ ಕಥೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು. ಅದು ಅವರಿಗೆ ಜೀವನದ ಒತ್ತಡ ಮುಕ್ತ ಜೀವನಕ್ಕೆ ಬದಲಾಯಿಸಲು ಪ್ರೇರೇಪಿಸುತ್ತದೆ. ಮತ್ತು ಅವರಿಗೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ತಿಳಿಸಿದರು.
ಗ್ರಂಥಾಲಯದಲ್ಲಿ ಗಣಕಯಂತ್ರಗಳನ್ನು, ಹಾಗೂ ಇನ್ನೂ ಹೆಚ್ಚಿನ ಪುಸ್ತಕಗಳನ್ನು ನೀಡಲು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅಂತಹ ಮಾರ್ಗದಲ್ಲಿ ಅವರಿಗೆ ಕಲಿಯಲು ಪ್ರೋತ್ಸಾಹ ನೀಡಬೇಕು. ಹಾಗೂ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಅಲ್ಪ ಸಮಯ ಮಾಡಿಕೊಂಡು ಇತಿಹಾಸಕಾರರು, ಸಾಹಿತಿಗಳ ಹಾಗೂ ಸಂವಿಧಾನದ ಬಗ್ಗೆ ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕರಿಗಾಗಿ ಎಸ್.ಎಸ್‌ಕೇರ್ ಟ್ರಸ್ಟ್ನಿಂದ ಡಯಾಬಿಟಿಸ್ ಬಗ್ಗೆ ಉಚಿತವಾಗಿ ಪರೀಕ್ಷೆ ಮಾಡಲಾಗುವುದು. ಹಾಗೂ ಚಲ್ಡ್ಕೇರ್ ಟ್ರಸ್ಟ್ನಿಂದ ಮಕ್ಕಳ ಮಧುಮೇಹ ಉಚಿತವಾಗಿ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ಮಾತನಾಡಿ ಗ್ರಂಥಾಲಯ ಇಲಾಖೆಯವರು ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಜಾಗ ಕೇಳಿದರೆ ನಿವೇಶನ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಯಾರು ಕಷ್ಟಪಟ್ಟು ಓದುತ್ತಾರೋ, ಅಂತಹವರು ಮುಂದೆ ಬರುತ್ತಾರೆ, ಓದಿ ಒಳ್ಳೆಯ ನಾಗರೀಕರಾಗುತ್ತಾರೆ. ನಮ್ಮ ಜಿಲ್ಲೆಗೆ ವಿದ್ಯಾರ್ಥಿಗಳಿಂದ ಇನ್ನೂ ಮಹತ್ತರವಾದ ಹೆಸರು ಬರುವಂತಾಗಲಿ ಎಂದು ಆಶಿಸಿದರು.
ಹಿರಿಯ ಪತ್ರಕರ್ತರಾದ ಹೆಚ್.ಬಿ. ಮಂಜುನಾಥ್ ಉಪನ್ಯಾಸ ನೀಡಿದರು.
ಮಹಾಪಾಲಿಕೆ ಮಹಾಪೌರರಾದ ಚಮನ್ ಸಾಬ್ ಕೆ, ಪಾಲಿಕೆ ಸದಸ್ಯರಾದ ಎಸ್.ಟಿ.ವಿರೇಶ್, ಲೇಖಕರು, ಸಾಹಿತಿಗಳಾದ ಟಿ.ಎಸ್.ಶೈಲಜಾ, ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಪಿ.ಆರ್.ತಿಪ್ಪೇಸ್ವಾಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Read also : Davanagere | ಸೇವಾ ಮನೋಭಾವ ಮೂಡಿದಾಗ ಸದಾ ಕ್ರಿಯಾಶೀಲರಾಗಲು ಸಾಧ್ಯ : ಡಿಸಿ