ದಾವಣಗೆರೆ (Davanagere) : ಇಲ್ಲಿನ ಗುರುಭವನದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಟೆಕ್ವಾಂಡೋ ಕ್ರೀಡೆಯನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ದಾವಣಗೆರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹರಿಹರ ಮತ್ತು ಶ್ರೀ ಕಾಳಿದಾಸ ಪ್ರೌಢಶಾಲೆ ಹರಿಹರ ಸಹಯೋಗದೊಂದಿಗೆ ನಡೆಯಿತು.
ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ, ಕಾಳಿದಾಸ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರಭಾಕರ್ ಮಾತನಾಡಿ, ಮೂಲತಃ ಕೊರಿಯಾ ದೇಶದ ಕ್ರೀಡೆಯಾಗಿದೆ, 1980 ರಲ್ಲಿ ಮೊಟ್ಟಮೊದಲ ಬಾರಿಗೆ ಮಣಿಪುರ, ಮಿಜೋರಾಂ, ರಾಜ್ಯದಿಂದ ಭಾರತ ದೇಶಕ್ಕೆ ಪಾದರ್ಪಣೆಗೊಂಡಿದೆ. ಮತ್ತು 1992 ರಲ್ಲಿ ಮಣಿಪುರ ರಾಜ್ಯದ ರಾಜೇಶ್ವರ್ ಮೇಟಿ ಮತ್ತು ಮಲೆಬೆನ್ನೂರಿನ ಸೈಯದ್ ಮನ್ ಪುಷ್ ಎಂಬುವರು ಈ ಟೆಕ್ವೊಂಡೋ ಕ್ರೀಡೆಯನ್ನು ಹರಿಹರ ನಗರಕ್ಕೆ ಪರಿಚಯಿಸಿದರು ಎಂದು ಹೇಳಿದರು.
ತರಬೇತಿದಾರ ಶ್ರೀನಿವಾಸ್ ಮಾತನಾಡಿ, ಟೇಕ್ವಾಂಡೋ ಕಲೆಯನ್ನು ಪ್ರತಿಯೊಬ್ಬರು ಕರಗತ ಮಾಡಿಕೊಂಡರೆ ಅಪಾಯದ ಸಂದರ್ಭ ಎದುರಾದಾಗ ಆತ್ಮರಕ್ಷಣೆ ಮಾಡಿಕೊಂಡು ಸ್ವಯಂ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶ್ರೀ ಕಾಳಿದಾಸ ಪ್ರೌಢಶಾಲಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ರಾಜಶೇಖರ್ ವಹಿಸಿದ್ದರು.
Read also : Davanagere news | ಶಿಕ್ಷಕರ ಕರ್ತವ್ಯ ಲೋಪಕ್ಕೆ ಶಾಸಕ ಬಸವಂತಪ್ಪ ಗರಂ
ಟೆಕ್ವಾಂಡೋ ಸ್ಪರ್ಧೆ 2024 25ರ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 14ರಿಂದ 17 ವರ್ಷದ ಒಳಗಿನ ಬಾಲಕ ಬಾಲಕಿಯರಿಗೆ ಈ ಸ್ಪರ್ಧೆ ನಡೆಯಿತು.
ಚಂದ್ರಶೇಖರ್, ಈಶಪ್ಪ ಬೂದಿಹಾಳ, ರಾಜಪ್ಪ, ಅಂಜು ಮನ ಸದಸ್ಯ ರೋಷನ್ ಜಮೀರ್, ದೈಹಿಕ ಶಿಕ್ಷಕ ಶಿಕ್ಷಕಿಯರು ವಿವಿಧ ಶಾಲಾ ವಿಭಾಗದ ಮಕ್ಕಳುಗಳು ಹಾಗೂ ಪೋಷಕರು ಇದ್ದರು.