ದಾವಣಗೆರೆ (Davanagere ): ಆಶಾ ಕಾರ್ಯಕರ್ತೆಯರಿಗೆ ರಾಷ್ಟೀಯ ರೋಗವಾಹಕ ಅಶ್ರಿತ ರೋಗಗಳ ಬಗ್ಗೆ ತರಬೇತಿ ಕಾರ್ಯಾಗಾರ ಶನಿವಾರ ಹರಿಹರದ ಸರಕಾರಿ ನೌಕರರ ಭವನದಲ್ಲಿ ನಡೆಯಿತು.
ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಗಂಗಾಧರ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅರೋಗ್ಯ ಬಗ್ಗೆ ಜಾಗೃತಿ ಮೂಡಿಸುವುದು ಬಹು ಮುಖ್ಯ ಕೆಲಸವಾಗಿರುವುದರಿಂದ ಆಶಾ ಕಾರ್ಯಕರ್ತೆಯರು ಈ ಬಗ್ಗೆ ತಿಳಿದುಕೊಂಡು ಸಮಾಜದಲ್ಲಿ ಸಕ್ರಿಯ ಕಾರ್ಯನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂದರು.
ಮಲೇರಿಯಾ. ಫೈಲೇರಿಯಾ.ಡೆಂಗ್ಯೂ ಹಾಗೂ ಚಿಕನ್ ಗುನ್ಯಾ. ಮೆದುಳು ಜ್ವರ. ಸೊಳ್ಳೆಗಳಿಂದ ಬರುವ ರೋಗಗಳಾಗಿವೆ. ಈ ರೋಗವಾಹಕವನ್ನು (ಸೊಳ್ಳೆ ) ನಿಯಂತ್ರಣ ಮಾಡಬೇಕಾಗಿದೆ. ಲಾರ್ವ ಸಮೀಕ್ಷೆ ಮಾಡುವುದರಿಂದ ನಿಯಂತ್ರಣ ಸಾಧ್ಯ ಎಂದು ಹೇಳಿದರು.
Read also : Davanagere Gmit : ಎಂಬಿಎ ವಿಭಾಗದ 18 ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಆಯ್ಕೆ
ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಅಬ್ದುಲ್ ಖಾದರ್, ಡಾ.ಕಲ್ಲೇಶ್, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ. ತಾಲೂಕು ಆಶಾ ಟಿ ಒ ಟಿ ಕವಿತಾ. ಜಿಲ್ಲೆಯಿಂದ ಆಗಮಿಸಿದ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಹ್ಲಾದ್ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ನೀಲಾವತಿ ಪ್ರಾರ್ಥಿಸಿದರು. ತಾಲೂಕು ಅರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಸ್ವಾಗತಿಸಿದರು.