ಹರಿಹರ (HARIHARA ) : ದುರುದ್ದೇಶದಿಂದ ಮಹಿಳೆ, ಪುರುಷ ಅಥವಾ ಮಕ್ಕಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಪ್ರಕ್ರಿಯೆಯು ಮಾನವ ಕಳ್ಳಸಾಗಣೆ ಎನಿಸುತ್ತದೆ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಪದ್ಮಶ್ರೀ ಮುನ್ನೋಳಿ ಹೇಳಿದರು.
ನಗರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಒಳ್ಳೆಯ ಉದ್ಯೋಗ ಕೊಡಿಸುವ ಭರವಸೆ ನೀಡಿ ಜೀತಕ್ಕೆ ಇಟ್ಟುಕೊಳ್ಳುವುದು, ಬಲವಂತವಾಗಿ ದುಡಿಸಿಕೊಳ್ಳುವುದು, ಮಹಿಳೆಯರನ್ನು ಲೈಂಗಿಕ ಶೋಷಣೆಗೀಡು ಮಾಡುವುದು, ದೇಹದ ಅಂಗಾAಗಗಳನ್ನು ತೆರವುಗೊಳಿಸುವುದು, ಭಿಕ್ಷಾಟನೆಗೆ ಬಿಡುವಂತಹ ಕೃತ್ಯಗಳನ್ನು ಎಸಗಲಾಗುತ್ತದೆ, ಈ ಕುರಿತು ಎಚ್ಚರಿಕೆ ವಹಿಸಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ಬಿ.ಆನಂದ ಕುಮಾರ್ ಮಾತನಾಡಿ, ಮೊಬೈಲ್ ಬಳಕೆ ಮಾಡುವಾಗ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಫೇಸ್ ಬುಕ್, ವ್ಹಾಟ್ಸಪ್ ಇತರೆ ಸಾಮಾಜಿಕ ಜಾಲಾತಾಣಗಳಲ್ಲಿ ಯಾವುದಾದರು ಮೆಸೇಜ್ ವೀಡಿಯೋಗಳಿಗೆ ಪ್ರತಿಕ್ರಿಯೆ ನೀಡದೆ ಇದ್ದರೆ ಒಳ್ಳೆಯದು ಮೊಬೈಲನ್ನು ಹಿತ,ಮಿತವಾಗಿ ಬಳಸಬೇಕೆಂದರು.
ಸAಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲೆ ಜಿ.ಎಚ್.ಭಾಗೀರಥಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನ ನಂತರ ದೇಶದೊಳಗೆ ಅಥವಾ ಹೊರ ದೇಶಗಳಲ್ಲಿ ಉದ್ಯೋಗಕ್ಕೆ ಸಂದರ್ಶನ ನೀಡಿ ಉದ್ಯೋಗಕ್ಕೆ ಸೇರುವ ಮುನ್ನ ಉದ್ಯೋಗ ಕೊಡಿಸುವ ಏಜೆನ್ಸಿ, ಉದ್ಯೋಗಕ್ಕೆ ಸೇರುವ ಕಂಪನಿಗಳ ಪೂರ್ವಾಪರ ಪರಿಶೀಲಿಸಬೇಕು, ತಪ್ಪಿದಲ್ಲಿ ನಾವು ಶೋಷಣೆಗೆ, ಮೋಸಕ್ಕೀಡಾಗುವ ಅಪಾಯ ಇರುತ್ತದೆ ಎಂದರು.
READ ALSO : Harihara protest : ವ್ಯವಸ್ಥಿತ ವಸತಿ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಧರಣಿ
ಅಧ್ಯಕ್ಷತೆವಹಿಸಿದ್ದ ಬೆಂಗಳೂರಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಉಪ ವ್ಯವಸ್ಥಾಪಕ ಲಕ್ಷö್ಮಣ ನಾಯ್ಕ ಮಾತನಾಡಿ, ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಓದು ಮುಗಿಸಿದ ನಂತರ ಹೊರ ದೇಶಗಳಿಗೆ ಉದ್ಯೋಗಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ, ಮಾನವ ಕಳ್ಳಸಾಗಣೆಯ ಜಾಲಕ್ಕೆ ಬಲಿಪಶು ಆಗದಂತೆ ಎಚ್ಚರಿಕೆ ವಹಿಸಬೇಕೆಂದರು.
ವಕೀಲರ ಸಂಘದ ಉಪಾಧ್ಯಕ್ಷೆ ಕೆ.ಎಸ್.ಶುಭ, ಕಾರ್ಯದರ್ಶಿ ನಾಗರಾಜ್ ಕೆ.ವಿ. ಸಂಸ್ಥೆಯ ಪ್ರಾಚಾರ್ಯ ಶಿವಕುಮಾರ್ ಕೆ.ಎಸ್. ಮಾತನಾಡಿದರು. ೨ನೇ ಸೆಮಿಸ್ಟರ್ನ ಶಿವಾನಂದ್ ಬಿಜ್ಜರ್, ೪ನೇ ಸೆಮಿಸ್ಟರ್ನ ಪೂರ್ಣಿಮಾ, ೬ನೇ ಸೆಮಿಸ್ಟರ್ನ ಹನುಮಂತಪ್ಪ ಟಿ.ಎನ್. ಇವರಿಗೆ ಉತ್ತಮ ಶೈಕ್ಷಣಿಕ ಸಾಧನೆಗಾಗಿ ಪ್ರಶಸ್ತಿ ಪತ್ರ ವಿತರಿಸಲಾಯಿತು.