ಹರಿಹರ (Davanagere): ತಾಲ್ಲೂಕಿನ ಮಾದಿಗರ ಸಮಾಜದಿಂದ ಸಮುದಾಯದ ಜನರ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದೆ ಎಂದು ಹರಿಹರ ತಾಲ್ಲೂಕು ಮಾದಿಗರ ಸಮಾಜದ ಅಧ್ಯಕ್ಷ ಎಂ.ಎಸ್.ಆನಂದಕುಮಾರ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಭಾಗದ ಸಮುದಾಯದವರ ಸಂಘಟನೆ, ಸಮುದಾಯದವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 18 ವರ್ಷ ದಾಟಿದ ಪುರುಷ, ಮಹಿಳೆಯರು ಸದಸ್ಯತ್ವ ಪಡೆಯಬಹುದಾಗಿದೆ. ಅಭಿಯಾನ ಒಂದು ತಿಂಗಳ ಅವಧಿವರೆಗೆ ನಡೆಯಲಿದೆ ಎಂದರು.
ಕಾರ್ಯದರ್ಶಿ ಎಚ್.ಶಿವಪ್ಪ ಮಾತನಾಡಿ, ಸದಸ್ಯತ್ವ ಪಡೆಯಲು ನಿರ್ಧಿಷ್ಟ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, 2 ಪಾಸ್ಪೋರ್ಟ್ ಅಳತೆ ಫೋಟೊ ನೀಡಬೇಕಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ 9342696588, 7406609623 ಸಂಪರ್ಕಿಸಬಹುದೆಂದರು.
ನಮ್ಮದೆ ಅಧಿಕೃತ ಸಂಘ: ಇತ್ತೀಚಿಗೆ ಮಾದಿಗರ ಸಮಾಜದ ಹೊಸ ಸಮಿತಿ ರಚನೆ ಮಾಡಿರುವುದಾಗಿ ಕೆಲವರು ಹೇಳಿದ್ದಾರೆ, ಆದರೆ ನಮ್ಮದು ನೊಂದಾಯಿತ, ಅಧಿಕೃತ ಸಮಿತಿಯಾಗಿದೆ ಎಂದು ಅವರು ಹೇಳಿದರು.
Read also : Davanagere news | ಪ್ರವಾದಿ ಮೊಹಮ್ಮದ್ ಹಾಗೂ ಹಜರತ್ ಆಯಿಷಾ ಅವಹೇಳನ : ಖಂಡಿಸಿ ಮನವಿ
ಸಮಾಜದ ಮುಖಂಡ ಕೊಕ್ಕನೂರು ಬಸವರಾಜಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸದಸ್ಯತ್ವಕ್ಕಾಗಿ ಸಮುದಾಯದ ಜನರ ಮನೆ, ಮನೆಗೆ ಭೇಟಿ ನೀಡಲಾಗುವುದು. ಸಮುದಾಯದ ಜನರು ತಮ್ಮ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕೆಂದರು.
ಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ಎಂ.ಎಸ್.ಶ್ರೀನಿವಾಸ್, ಎಲ್.ಬಿ.ಹನುಮಂತಪ್ಪ, ಬನ್ನಿಕೋಡು ಹನುಮಂತಪ್ಪ, ಕೊಕ್ಕನೂರು ಬಸವರಾಜಪ್ಪ, ರಾಜನಹಳ್ಳಿ ಗ್ರಾಪಂ ಸದಸ್ಯ ಜಿ.ಎಚ್.ಸಿದ್ಧಾರೂಢ, ಎ.ಕೆ.ನಾಗೇಂದ್ರಪ್ಪ, ಎಂ.ಬಿ.ಧರ್ಮದಾತ, ಹಳ್ಳಿಹಾಳ್ ಹನುಮಂತಪ್ಪ, ನಿಂಗಪ್ಪ ಧೂಳೆಹೊಳೆ ಕೊಂಡಜ್ಜಿ ಎ.ಕೆ.ದಾಸಪ್ಪ ಇದ್ದರು.