ದಾವಣಗೆರೆ :
ತಪೋವನ ಸಮೂಹ ಸಂಸ್ಥೆ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಚಾರಣೆ ಆಚರಣೆ ಮಾಡಲಾಯಿತು.
ಸಂಸ್ಥೆಯ ಮುಖ್ಯಸ್ಥರಾದ ಡಾ. ಶಶಿಕುಮಾರ್ ವಿ. ಎಂ . ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಾವಿರಾರು ಜನರು ಸೇರಿ ಯೋಗಾಭ್ಯಾಸ ಮಾಡಿದರು. ಹರಿಹರದ ಶಾಸಕ ಬಿ. ಪಿ. ಹರೀಶ್,ಮಾಜಿ ಶಾಸಕ ಎಚ್ . ಎಸ್.ಶಿವಶಂಕರ ಡಾ ಗಂಗಾಧರ್ , ಡಾ. ಅಶ್ವಿನಿ , ಡಾ. ಸುಮನಾ ಭಟ್, ಶ್ರೀ ಶೈಲಜಾ ಮತ್ತು ಅಯುರ್ವೇದ ಮೆಡಿಕಲ್ ಕಾಲೇಜು, ನ್ಯಾಚುರೋಪತಿ ಕಾಲೇಜು, ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಕೆಲವು ಶಾಲಾ ವಿದ್ಯಾರ್ಥಿಗಳು, ಜೆ ಎಸ್ ಎಸ್ ದಾವಣಗೆರೆ ಸಿಬ್ಬಂದಿ ವರ್ಗದವರು ಅಂದಾಜು ಎರಡು ಸಾವಿರ ಜನ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.