ದಾವಣಗೆರೆ: ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನು ಏನು ಕೊಡುಗೆ ನೀಡಿದ್ದೇನೆ ಎಂಬುದು ಮುಖ್ಯ. ತಪೋವನ ಸಂಸ್ಥೆ ಬೆಳೆಯಲು ಸಾವಿರಾರು ಕೈಗಳ ಸಹಕಾರ ಕಾರಣ ಎಂದು ತಪೋವನ ಸಂಸ್ಥೆ ಚೇರಮನ್ ಡಾ.ಶಶಿಕುಮಾರ್ ವಿ.ಎಂ. ತಿಳಿಸಿದರು.
ದೊಡ್ಡಬಾತಿ ಗ್ರಾಮದಲ್ಲಿರುವ ತಪೋವನ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ೫೦ನೇ ವರ್ಷದ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇತ್ತೀಚಿಗಿನ ದಿನಗಳಲ್ಲಿ ಆಡಂಬರದ ಆಚರಣೆಗಳನ್ನು ಮಾಡಿ ಮೋಜು ಮಸ್ತಿಯನ್ನು ಮಾಡಿ ಸಂಭ್ರಮಿಸುತ್ತೇವೆ. ಆದರೆ ಅದು ತರವಲ್ಲ. ನಾವೆಲ್ಲಾ ಪ್ರಕೃತಿಯ ಕೂಸುಗಳು. ಆರೋಗ್ಯವಂತನಾದ ಮನುಷ್ಯನೇ ನಿಜವಾದ ಭಗವಂತ ಎಂದರು.
ನಾವೆಲ್ಲಾ ಹೆಚ್ಚು ಗಿಡಮರಗಳನ್ನು ಬೆಳೆಸಬೇಕು. ಆಗ ಪರಿಶುದ್ಧ ಗಾಳಿ, ಉತ್ತಮ ಆರೋಗ್ಯ ನಮ್ಮ ಜೊತೆ ಇರುತ್ತದೆ. ಉತ್ತಮ ಆರೋಗ್ಯದ ಜೊತೆಗೆ ಸ್ವಸ್ಥ ಸಮಾಜ ನಮ್ಮದಾಗುತ್ತದೆ. ಹಾಗಾಗಿ ಪರಿಸರವನ್ನು ಬೆಳೆಸಬೇಕು. ನಾವೆಲ್ಲಾ ಪರಿಸರದೊಂದಿಗೆ ಬಾಳಲೇಬೇಕಿದೆ. ಆ ಕಾರಣ ನಮ್ಮ ಸುತ್ತಮುತ್ತ ಹಸುರಿನ ವಾತಾವರಣ ಅಭಿವೃದ್ಧಿಗೊಳಿಸಬೇಕು. ಯೋಗ, ಉತ್ತಮ ಪರಿಸರದಿಂದ ಒಳ್ಳೆಯ ಆರೋಗ್ಯವಂತರಾಗಿ ಬಾಳುತ್ತೇವೆ ಎಂದರು.
ತಪೋವನ ಸಂಸ್ಥೆ ನಿಮ್ಮೆಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ ಶಾಖೆಗಳನ್ನು ಹೊಂದಿ ಸೇವೆಯನ್ನು ಸಲ್ಲಿಸುತ್ತಿದೆ. ನಿಮ್ಮೆಲ್ಲರ ಸಹಕಾರದಿಂದ ಸಂಸ್ಥೆಯು ಅಭಿವೃದ್ಧಿಯತ್ತ ಸಾಗುತ್ತಿದೆ. ನಾನು ಸದಾ ನಿಮ್ಮೆಲ್ಲರಿಗೂ ಋಣಿಯಾಗಿರುತ್ತೇನೆ. ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ನಮ್ಮ ಸಂಸ್ಥೆಯ ಗೌರವವನ್ನು ಹೆಚ್ಚಿಸಿದ್ದೀರಿ. ಹೆಚ್ಚಿನ ವಿದ್ಯಾರ್ಥಿಗಳು ಪದವಿ ಪೂರೈಸಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಮುಂದೆಯೂ ಸಹಾ ತಾವುಗಳು ನಮ್ಮ ಕಾರ್ಯಕ್ಕೆ ಕೈಜೋಡಿಸಲು ಮನವಿ ಮಾಡಿದರು.
ತಪೋವನ ಸಂಸ್ಥೆಯ ಚೇರಮನ್ ಡಾ.ಶಶಿಕುಮಾರ್ ಅವರಿಗೆ 5೦ ವರ್ಷ ತುಂಬಿದ ಕಾರಣ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಮಾಡಿ ಹುಟ್ಟುಹಬ್ಬ ಸಂಭ್ರಮಕ್ಕೆ ವಿಶೇಷ ಮೆರಗು ನೀಡಿದರು.ಶ್ರೀಮತಿಜಯ ಲಕ್ಷ್ಮಿ ಶಶಿಕುಮಾರ್ ಮೆಹರ್ ವಾಡೆ ಅಭಿಷೇಕ್ ಮೆಹಾರ್ ವಾಡೆ ಉಪಾಧ್ಯಕ್ಷ ಅಮಿತ್ ಮೆಹರ್ವಾಡೆ ಡಾಕ್ಟರ್ ಗೀತಾ ಬಿ.ಹೆಚ್. ಡಾಕ್ಟರ್ ಅಶ್ವಿನಿ ಕೆ ಆರ್. ಸುಮನ ಭಟ್. ಶೈಲಜಾ ಬಿ.ಆರ್. ಡಾಕ್ಟರ್ ಗಂಗಾಧರ್ ವರ್ಮ . ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು. ಕೆ. ನಾಗಪ್ಪ. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ . ಇಪ್ತಾ ಕಲಾವಿದರಾದ ಹೆಗ್ಗೆರೆ ರಂಗಪ್ಪ. ಐರಾಣಿಕದ್ದು ಸಂಗಡಿಗರು ಜಾಗೃತಿ ಗೀತೆಗಳು ನಾಡಿ ಹಾಡಿ ಅವರಿಗೆ ಶುಭಾಶಯ ಕೋರಿದರು. ಸಂಸ್ಥೆಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು
ಈ ಸಂದರ್ಭದಲ್ಲಿ. ಸಾವಿರಾರು ಅಭಿಮಾನಿ ವರ್ಗ ಡಾಕ್ಟರ್ ಶಶಿಕುಮಾರ್ ವಿಎಂ ಅವರಿಗೆ ಅಭಿನಂದಸಿ ಸನ್ಮಾನಿಸಿ ಶುಭ ಕೋರಿದರು