ದಿನಮಾನ.ಕಾಂ ವಿಶೇಷ, ದಾವಣಗೆರೆ: ಪ್ರವಾಸ ಕರೆದುಕೊಂಡು ಹೋಗುವುದಾಗಿ ವಿದ್ಯಾರ್ಥಿಗಳಿಗೆ ಮಾತು ನೀಡಿದ್ದ ಶಿಕ್ಷಕರೊಬ್ಬರು ಸ್ವಂತ ಖರ್ಚಿನಲ್ಲಿ 40 ಪಿಯು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಗಮನ ಸೆಳೆದಿದ್ದಾರೆ.
ದಾವಣಗೆರೆ ತಾಲೂಕಿನ ವೈ.ಎನ್ .ಕ್ಯಾಂಪ್ ನ ಶ್ರೀಬಾಲಾಜಿ ಸಂಯುಕ್ತ ಪ್ರೌಢಶಾಲೆಯ ಶಿಕ್ಷಕ ಪವಾಡಿ ಮೇಘರಾಜ್ ಅವರು ವಿದ್ಯಾರ್ಥಿಗಳ ಅಕ್ಕರೆಗೆ ಮಾತುಕೊಟ್ಟು ಅದರಂತೆ ನಡೆದುಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
2022-2023 ನೇ ಸಾಲಿನ ವಿದ್ಯಾರ್ಥಿಗಳೀಗ PUC ದ್ವಿತಿಯ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಪ್ರೌಢಶಾಲೆ ಅವಧಿಯಲ್ಲಿ ನಿಮ್ಮ ಅನುಪಸ್ಥಿತಿಯಲ್ಲಿ ನಮ್ಮ ಪ್ರವಾಸ ಸರಿಯಾಗಿಲ್ಲವೆಂದು ವಿಜ್ಞಾನ ಶಿಕ್ಷಕ ಪವಾಡಿ ಮೇಘರಾಜ್ ಅರವರಿಗೆ ಹೇಳಿದ್ದರು.
ಆಗ ನಾನೇ ನಿಮ್ಮನ್ನೆಲ್ಲಾ ಪ್ರವಾಸ ಕರೆದುಕೊಂಡು ಹೋಗುತ್ತೇನೆಂದು ಎಂದು ಶಿಕ್ಷಕ ಮಾತು ಕೊಟ್ಟಿದ್ದರು.
ನಂತರ ಶಾಲಾ ಸಿಬ್ಬಂದಿ ಅಣ್ಣಪ್ಪ ಅವರ ಬಳಿ ವಿದ್ಯಾರ್ಥಿಗಳು ಮೇಘರಾಜ್ ಸರ್ ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು. ಇನ್ನೂ ಕರೆದುಕೊಂಡು ಹೋಗಿಲ್ಲವೆಂದು ದುಂಬಾಲು ಬಿದ್ದಿದ್ದರು. ಕೊಟ್ಟ ಮಾತು ನೆನಪಿದ್ದ ಶಿಕ್ಷಕ ಮೇಘರಾಜ್ ಅವರು ಜ.26 ರಾತ್ರಿ ಪ್ರವಾಸಕ್ಕೆ ವ್ಯವಸ್ಥೆ ಮಾಡಿದರು.
Read Also: Crime News | ಕಳ್ಳತನ ಪ್ರಕರಣ : 24 ಗಂಟೆಯಲ್ಲಿ ಆರೋಪಿ ಸೆರೆ
ಸುಮಾರು 40 ವಿದ್ಯಾರ್ಥಿಗಳನ್ನು ಮೈಸೂರಿನ ನಿಮಿಷಾಂಬ ದೇವಸ್ಥಾನ, ಶ್ರೀರಂಗಪಟ್ಟಣ, ಚಾಮುಂಡೇಶ್ವರಿ ದೇವಸ್ಥಾನ, ಅರಮನೆ, ಸುತ್ತೂರು ಮಠ, ನಂಜನಗೂಡು, ಮೇಲುಕೋಟೆ ಚಲುವನಾರಾಯಣ ಸ್ವಾಮಿ, ಶ್ರೀ ಎಡೆಯೂರು ಸಿದ್ದಲಿಂಗೇಶ್ವರ, ಆದಿ ಚುಂಚನಗಿರಿ ಮಠ ಮುಂತಾದ ಕ್ಷೇತ್ರಗಳ ದರ್ಶನ ಮಾಡಿಸಿದ್ದಾರೆ. ಕೊಟ್ಟ ಮಾತಿಗೆ ತಪ್ಪದ ಮೆಚ್ಚಿನ ಶಿಕ್ಷಕರಾದ ಮೇಘರಾಜ್ ಸೇವೆಗೆ ವಿದ್ಯಾರ್ಥಿ ಬಳಗ ಧ್ಯನವಾದ ತಿಳಿಸಿದೆ. ಪ್ರವಾಸಕ್ಕೆ 85000 ಖರ್ಚು ಬಂದಿದೆ. ವಿದ್ಯಾರ್ಥಿಗಳ ಪ್ರೀತಿ ಖುಷಿಗೆ ಬೆಲೆ ಕಟ್ಟಲು ಸಾಧ್ಯವೇ? ಎನ್ನುತ್ತಾರೆ ಶಿಕ್ಷಕ ಮೇಘರಾಜ್.
ಪ್ರತಿಯೊಂದಕ್ಕೂ ಲೆಕ್ಕ ಹಾಕುವ ಇದರಲ್ಲಿ ನನಗೆಷ್ಟು ಪಾಯಿದೆ ಐತಿ ಅನ್ನುವ ಕೆಲ ಶಿಕ್ಷಕರೇ ನಮಗೆ ಮುಖ್ಯವಾಗಬಾರದು. ಘರಾಜ್ ನಂತಹ ಶಿಕ್ಷಕರು ಅಲ್ಲಲ್ಲಿ ಕಾಣ ಸಿಗುತ್ತಾರೆ.ಅಂತಹವರೆಲ್ಲರಿಗೂ ನಮ್ಮ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳೂ ಇರಲಿ.
ಹೇಮಣ್ಣ ಮೋರಿಗೇರಿ
ಮುಖ್ಯ ಜೀವ ವಿಮಾ ಸಲಹೆಗಾರರು
“ಜೀವಜಲ” ಹರಪನಹಳ್ಳಿ.