Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಕಲೆ ವಾಸ್ತುಶಿಲ್ಪದ ಕಾಯಕದಿಂದಲೇ ವಿಶ್ವಪ್ರಸಿದ್ದಿ ಪಡೆದವರು ಅಮರಶಿಲ್ಪಿ ಜಕಣಾಚಾರಿ:ಶಾಸಕ ಕೆ.ಎಸ್.ಬಸವಂತಪ್ಪ
ತಾಜಾ ಸುದ್ದಿ

ಕಲೆ ವಾಸ್ತುಶಿಲ್ಪದ ಕಾಯಕದಿಂದಲೇ ವಿಶ್ವಪ್ರಸಿದ್ದಿ ಪಡೆದವರು ಅಮರಶಿಲ್ಪಿ ಜಕಣಾಚಾರಿ:ಶಾಸಕ ಕೆ.ಎಸ್.ಬಸವಂತಪ್ಪ

Dinamaana Kannada News
Last updated: January 1, 2026 4:20 pm
Dinamaana Kannada News
Share
Davanagere
SHARE

ದಾವಣಗೆರೆ ಜ.01: ಪ್ರಾಚೀನ ಕಾಲದಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನ, ಸಲಕರಣೆ ಇಲ್ಲದ ಸಂದರ್ಭದಲ್ಲಿ ಉಳಿ ಮತ್ತು ಸುತ್ತಿಗೆಯಿಂದ ಸೂಕ್ಷ್ಮವಾಗಿ ಅದ್ಭುತ ಕೆತ್ತನೆ ಮಾಡಿ ವಿಶ್ವ ಪ್ರಸಿದ್ದಿ ಪಡೆದವರು ಅಮರಶಿಲ್ಪಿ ಜಕಣಾಚಾರಿ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಅಮರಶಿಲ್ಪ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

seem1 dinamaana ads

ಪ್ರಾಚೀನ ಕಾಲದ ವಿಶ್ವಪಾರಂಪರಿಕ ಇತಿಹಾಸವುಳ್ಳ ದೇವಾಲಯ, ವಾಸ್ತುಶಿಲ್ಪ ಕೇಂದ್ರ, ಶಿಲೆಗಳು ಇಂದಿಗೂ ಉಳಿದಿವೆ ಎಂದರೆ, ಅದಕ್ಕೆ ಜಕಣಾಚಾರಿ ಅವರಂತಹ ಹೆಸರಾಂತ ಶಿಲ್ಪಿಗಳೇ ಕಾರಣ. ಪ್ರಸ್ತುತ ಇಷ್ಟೆಲ್ಲಾ ಆಧುನಿಕ, ತಂತ್ರಜ್ಞಾನ, ಅತ್ಯಾಧುನಿಕ ಸಲಕರಣೆಗಳು ಇದ್ದರೂ ಸಹ ಪ್ರಾಚೀನ ಕಾಲದ ವಾಸ್ತುಶಿಲ್ಪ ಕೆತ್ತನೆ ಮೀರಿ ಜನಪ್ರಿಯತೆ ಗಳಿಸಲು ಸಾಧ್ಯವಿಲ್ಲ. ಜಕಣಾಚಾರಿಯವರು ಕೆತ್ತನೆ ಮಾಡಿದ ಬೇಲೂರು, ಹಳೇಬೀಡು ದೇವಾಲಯ ಜಿಲ್ಲೆ, ರಾಜ್ಯ ಹಾಗೂ ದೇಶ ವಿದೇಶಗಳಲ್ಲಿ ಇಂದಿಗೂ ವಿಶ್ವಪ್ರಸಿದ್ದಿ. ಇದು ಕೇವಲ ಕಲ್ಲು ಕೆತ್ತನೆಯಷ್ಟೇ ಅಲ್ಲದೇ, ತಾಮ್ರ, ಬೆಳ್ಳಿ ಬಂಗಾರದ ಮೇಲೆಯೂ ತಮ್ಮ ಕೆತ್ತನೆ ಕೈಚಳಕ ತೋರ್ಪಡಿಸುತ್ತಾ ಬಂದಿದ್ದಾರೆ. ಆದ್ದರಿಂದ ಇಂತಹ ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿ, ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಜಿ.ಎಂ.ಗAಗಾಧರಸ್ವಾಮಿ ಮಾತನಾಡಿ, ಇಂದಿನ ಮಕ್ಕಳಿಗೆ ಕಟ್ಟು ಕಥೆಗಳ ಬದಲಾಗಿ ಉಪಮಾ, ಉಪಮೇಯ, ಸಾಹಿತ್ಯ ಮತ್ತು ಕಲೆ, ವಾಸ್ತುಶಿಲ್ಪದ ಇತಿಹಾಸದ ಬಗ್ಗೆ ತಿಳಿಸಬೇಕಿದೆ. ಉತ್ತರದಿಂದ ದಕ್ಷಿಣ ಭಾರತದುದ್ದಕ್ಕೂ ಹರಡಿಕೊಂಡಿರುವ ಗಾಂಧಾರ, ಮಥುರಾ, ಮತ್ತು ಹೊಯ್ಸಳ ಶೈಲಿಯ ಕಲೆ ಮತ್ತು ವಾಸ್ತುಶಿಲ್ಪ ಕಾಣಬಹುದು. ಅದರಲ್ಲಿಯೂ ಇಡೀ ಪ್ರಪಂಚದಲ್ಲಿ ಎಲ್ಲಿಯೂ ಕಾಣಲು ಸಿಗದೇ ಇರುವಂತಹ ಕಲೆಯೇ ಹೊಯ್ಸಳ ಶೈಲಿಯ ವಾಸ್ತುಶಿಲ್ಪ. ಹೊಯ್ಸಳ ಕಾಲದ ಬೇಲೂರು, ಹಳೇಬೀಡು ಹೊರತುಪಡಿಸಿದರೆ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಕೃಷ್ಣನಮೂರ್ತಿ ಕೆತ್ತನೆ ಮಾಡಲಾಗಿದೆ.

ಅಂತಹ ಪಾರಂಪರಿಕ ಇತಿಹಾಸ, ಸಂಸ್ಕೃತಿ ಕೊಟ್ಟು ದೇಶ, ರಾಜ್ಯ ಭಾಷೆಯನ್ನು ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟಂತಹ ಮಹಾನ್ ಪುರುಷ ಜಕಣಾಚಾರಿ. ಬೇಲೂರು ಹಳೇಬೀಡು ಅಷ್ಟೇ ಅಲ್ಲದೆ ತುಮಕೂರು ಜಿಲ್ಲೆಯಲ್ಲಿಯೇ ಸುಮಾರು 40ಕ್ಕೂ ಹೆಚ್ಚು ದೇವಾಲಯ ನಿರ್ಮಾಣ ಮಾಡಲಾಗಿದೆ. ಹಾಗೆಯೇ ನಮ್ಮ ಜಿಲ್ಲೆಯ ಕಲ್ಲೇದೇವಪುರದಲ್ಲಿ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಕಾಣಬಹುದು. ಅದೇ ರೀತಿ ನೆರೆ ರಾಜ್ಯಗಳಲ್ಲಿ ಕೂಡ ತಮ್ಮ ಪ್ರತಿಭೆಯ ಅನಾವರಣಗೊಳಿಸುವ ಮೂಲಕ ಇಡೀ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದವರು ಅಮರಶಿಲ್ಪ ಜಕಣಾಚಾರಿ. ಇಂಥವರ ಜೀವನ, ಸಾಧನೆ, ಯಶೋಗಾಥೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ ಎಂದರು.

Read also : ಜ. 5 ರಂದು ವಾಲ್ಮೀಕಿ ಜಾತ್ರೆಯ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಾಜದ ಮುಖಂಡ ವೀರೇಶ್ ಆಚಾರಿ ಉಪನ್ಯಾಸ ನೀಡಿದರು.

ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ತಹಶೀಲ್ದಾರ್ ಡಾ. ಅಶ್ವಥ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಂದ್ರಚಾರ್, ಗೌರವಾಧ್ಯಕ್ಷ ಪೂರ್ವಾಚಾರ್, ಕಾರ್ಯದರ್ಶಿ ಬಿ.ವಿ.ಶಿವಾನಂದ್, ಉಪಾಧ್ಯಕ್ಷ ಬಿ. ಸಿದ್ದಾಚಾರ್, ಆಡಳಿತಾಧಿಕಾರಿ ಬಿ.ಬಿ. ಜಗನ್ನಾಥ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.

job news dinamaana ads
TAGGED:Davanagere Newsdinamaana.comKannada NewsMLA K.S. Basavanthappaಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Valmiki Fair on Jan 5 davanagere ಜ. 5 ರಂದು ವಾಲ್ಮೀಕಿ ಜಾತ್ರೆಯ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ
Next Article Davanagere ನೂತನ ರಥಕ್ಕೆ ಆವರಗೊಳ್ಳ ಹಿರೇಮಠದ ಶ್ರೀಗಳಿಂದ ಕಳಸಾರೋಹಣ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಜ.25-26 ರಂದು ಡಿಎಸ್‍ಎಸ್‍ನಿಂದ ರಾಜ್ಯಮಟ್ಟದ ತರಬೇತಿ ಕಾರ್ಯಗಾರ

ದಾವಣಗೆರೆ (Davanagere): ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜ.25 ಹಾಗೂ 26ರಂದು ಬೆಳಗ್ಗೆ 10ಕ್ಕೆ ಹರಿಹರ ಹೊರವಲಯದ ಬಿ.ಕೃಷ್ಣಪ್ಪನವರ…

By Dinamaana Kannada News

ಭದ್ರಾ ಜಲಾಶಯದಲ್ಲಿ 172 ಅಡಿ ನೀರು ಸಂಗ್ರಹ

Bhadra dam water level today : ಮಲೆನಾಡು ಮತ್ತು ಬಯಲು ಸೀಮೆಯ ಜೀವನಾಡಿ ಶಿವಮೊಗ್ಗದ ಭದ್ರಾಜಲಾಶಯದಲ್ಲಿ ನೀರಿನ ಒಳಹರಿವು…

By Dinamaana Kannada News

Davanagere | ಸರಿಯಾದ ವೀಸಾ ಹೊಂದದ ಹಾಗೂ ನಕಲಿ ಪ್ರಮಾಣ ಪತ್ರ ಸೃಷ್ಠಿಸಿದ ಆರೋಪಿಗೆ 1 ವರ್ಷ ಕಾರಾಗೃಹ ಶಿಕ್ಷೆ ,1.5 ಲಕ್ಷ ದಂಡ

ದಾವಣಗೆರೆ  (Davanagere ): ನಕಲಿ ಪ್ರಮಾಣಪತ್ರ ಸೃಷ್ಠಿಸಿ ಸರಿಯಾದ ವೀಸಾ ಹೊಂದದೆ ಭಾರತದಲ್ಲಿ ವಾಸ ಮುಂದುವರಿಸಿದ ಆರೋಪಿಗೆ ಒಂದು ವರ್ಷ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಯುವಜನರಲ್ಲಿ ಆರೋಗ್ಯ ಅರಿವು, ಸಾಮಾಜಿಕ ಹೊಣೆಗಾರಿಕೆ ಅವಶ್ಯ : ಡಾ.ಬಿ.ಡಿ.ಮುರುಳಿಧರ

By Dinamaana Kannada News
Davanagere
ತಾಜಾ ಸುದ್ದಿ

ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?