Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸಿರಿಧಾನ್ಯ ಪಾಕಗಳು ಬಾಯಲ್ಲಿ ನೀರೂರಿಸಿದವು:ಗಿತ್ತೆ ಮಾಧವ ವಿಠ್ಠಲ್‍ರಾವ್
ತಾಜಾ ಸುದ್ದಿ

ಸಿರಿಧಾನ್ಯ ಪಾಕಗಳು ಬಾಯಲ್ಲಿ ನೀರೂರಿಸಿದವು:ಗಿತ್ತೆ ಮಾಧವ ವಿಠ್ಠಲ್‍ರಾವ್

Dinamaana Kannada News
Last updated: December 31, 2025 3:45 pm
Dinamaana Kannada News
Share
Davanagere
SHARE

ದಾವಣಗೆರೆ : ರುಚಿ ರುಚಿಯಾದ ವಿವಿಧ ಸಿರಿಧಾನ್ಯ ಪಾಕಗಳನ್ನು ಸವಿದಿದ್ದು, ಪ್ರತಿಯೊಂದು ಪದಾರ್ಥಗಳು ರುಚಿಕರವಾಗಿದ್ದು ಬಾಯಿಯಲ್ಲಿ ನೀರೂರಿಸಿದವು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠಲರಾವ್ ಅವರು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ  ಆಯೋಜಿಸಲಾದ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2026ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ  ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಉದ್ಪಾಟಿಸಿ ಮಾತನಾಡಿದರು.

ಸೇವಾ ಅವಧಿಯಲ್ಲಿ ನಾನು ಅನೇಕ ಪಂಚತಾರಾ  ಹೋಟೆಲ್‍ಗಳಲ್ಲಿ ವಿವಿಧ ಪದಾರ್ಥಗಳನ್ನು ಸವಿದಿದ್ದೇನೆ, ಆದರೆ ಇಷ್ಟು ರುಚಿಕರವಾದ ಪದಾರ್ಥಗಳನ್ನು ಸವಿದಿರಲಿಲ್ಲ. ಇಂದಿನ ಪದಾರ್ಥಗಳು ಯಾವ ಪಂಚತಾರಾ ಹೋಟೆಲ್‍ಗಳಿಗಿಂತ ರುಚಿಯಲ್ಲಿ ಕಡಿಮೆ ಇರಲಿಲ್ಲ. ಇಲ್ಲಿನ ಪದಾರ್ಥಗಳನ್ನು ಸವಿಯುವಾಗ ನನಗೆ ನನ್ನ ಬಾಲ್ಯದ ಪದಾರ್ಥಗಳನ್ನು ಸವಿಯುತ್ತಿದ್ದ್ದ ನೆನಪಿಗೆ ಬಂದವು. ಸಿರಿಧಾನ್ಯದಲ್ಲಿ ಇಷ್ಟು ಬಗೆಯ ಆಹಾರ ಖಾದ್ಯಗಳನ್ನು ತಯಾರಿಸಿರುವುದು ಹೆಮ್ಮೆ ಎನಿಸುತ್ತಿದೆ. ಇಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರು ವಿಜೇತರೆ, ಬಹುಮಾನ ಪಡೆದವರು ಮಾತ್ರ ವಿಜೇತರಲ್ಲ ಎಂದರು.

ಜಿಲ್ಲೆಯಲ್ಲಿ ಅನೇಕ ಮಹಿಳೆಯರು ತಮ್ಮ ಕೈಚಳಕದೊಂದಿಗೆ ಗುಣಮಟ್ಟದ ಖಾದ್ಯ ತಯಾರಿಸುತ್ತಿದ್ದೀರಿ. ಇದು ಕೇವಲ ಹವ್ಯಾಸಕ್ಕೆ ಬಳಕೆಯಾಗದೇ, ಪ್ರತಿಯೊಬ್ಬರು ಆರ್ಥಿಕವಾಗಿ ಸಬಲರಾಗಬೇಕು. ಸಿರಿ ಧಾನ್ಯ ಬಳಸಿ ತಯಾರಿಸಲಾದ ಉಪ್ಪಿನಕಾಯಿ, ಹಪ್ಪಳ, ಚಟ್ನಿಪುಡಿ, ಸಿಹಿ ಪದಾರ್ಥಗಳು, ಖಾರ ಪದಾರ್ಥಗಳು ಹಾಗೂ ಸಜ್ಜೆ ರೊಟ್ಟಿ, ಸಜ್ಜೆ ಕಡುಬು ಸೇರಿದಂತೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ.

ಆದರೆ ಅವರಿಗೆ ಸರಿಯಾಗಿ ಮಾರುಕಟ್ಟೆ ಪ್ರವೇಶ ಮಾಡುವುದು ತಿಳಿದಿರುವುದಿಲ್ಲ, ಇದನ್ನು ದೃಷ್ಟಿಯಾಗಿಟ್ಟುಕೊಂಡು ಜಿಲ್ಲೆಯಲ್ಲಿ ಪದಾರ್ಥಗಳನ್ನು ತಯಾರಿಸುವವರ ಹೆಸರುಗಳು ಅವರು ಮಾಡುವ ಖಾದ್ಯದ ವಿವರಗಳೊಂದಿಗೆ ಜಿಲ್ಲಾ ಪಂಚಾಯಿತಿ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.  ಇದರಿಂದ  ಅವರು ಇಡೀ ರಾಜ್ಯ, ದೇಶದಲ್ಲಿ ಹೆಸರು ಗಳಿಸಲು ಮತ್ತು  ಮಾರುಕಟ್ಟೆಯನ್ನು ಪ್ರವೇಶ ಮಾಡಲು ಅನುಕೂಲವಾಗುತ್ತದೆ. ಇದರಿಂದ ನೀವು ಉದ್ಯೋಗ ಹುಡುಕುವುದು ತಪ್ಪುತ್ತದೆ. ಹಾಗೂ ನೀವೇ ಉದ್ಯೋಗ ನೀಡುವ ಸಾಮಥ್ರ್ಯ ವೃದ್ಧಿಸಿಕೊಳ್ಳಬೇಕು ಎಂದರು.

ಪಿಜ್ಜಾ ಬರ್ಗರ್ ಫಾಸ್ಟ್ ಪುಡ್‍ಗಿಂತ ಉತ್ತಮ ಗುಣಮಟ್ಟ ಮತ್ತು ಹೆಚ್ಚು ಪೆÇೀಷಕಾಂಶ ಹೊಂದಿದ ಸಿರಿಧಾನ್ಯ ಪದಾರ್ಥಗಳನ್ನು ಪ್ರತಿಯೊಬ್ಬರು ಸೇವಿಸಬೇಕು ಎಂದರು.

ಕೃಷಿ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ 7 ತಾಲ್ಲೂಕುಗಳಿಂದ ಒಟ್ಟು 70 ಜನರು ಭಾಗವಹಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಅಡಿಕೆಯನ್ನು ಹೆಚ್ಚು ಬೆಳೆಯಲಾಗುತ್ತಿದೆ. ಆದ್ದರಿಂದ ಜಿಲ್ಲೆಯು ತೋಟಗಾರಿಕೆ ಜಿಲ್ಲಾಯಾಗುತ್ತಿದ್ದು, ಅಲ್ಲದೆ ಜಿಲ್ಲೆಯಲ್ಲಿ ರಾಗಿ, ಭತ್ತವನ್ನು ಬೆಳೆಯಲಾಗುತ್ತಿದೆ. ಅದರ ಜೊತೆಗೆ ಸಿರಿಧಾನ್ಯಗಳನ್ನು ಬೆಳೆಯ ಬೇಕು, ಸಿರಿಧಾನ್ಯ ಸೇವೆನೆಯಿಂದ ಆರೋಗ್ಯ ಜೀವನವನ್ನು ನಡೆಸಬಹುದು ಎಂದರು.

ಇಂದು ಬೆಳೆಯುವ ಆಹಾರ ಪದಾರ್ಥಗಳಿಗೆ ಅನೇಕ ರೀತಿಯ ಔಷಧಗಳನ್ನು ಸಿಂಪಡಿಸುತ್ತಾರೆ. ಆದುದರಿಂದ ನಾವು ಸಿರಿಧಾನ್ಯ ಪದಾರ್ಥಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.

ಸಿರಿಧಾನ್ಯ ಸಿಹಿ ಖಾದ್ಯದಲ್ಲಿ ಹೊನ್ನಾಳಿ ಮಂಗಳಾ ಕೋಂ ಸೂರ್ಯನಾರಾಯಣ ಪ್ರಥಮ ಬಹುಮಾನ ಪಡೆದರು. ಜಗಳೂರಿನ ಸುನಂದಮ್ಮ ಕೋಂ ನಾಗೇಂದ್ರಪ್ಪ ದ್ವಿತೀಯ ಬಹುಮಾನ ಪಡೆದರು. ದಾವಣಗೆರೆಯ ಪೂಜಾ ಕೋಂ ಪ್ರಶಾಂತ್  ಎಂ.ವಿದ್ಯಾ ತೃತೀಯ ಬಹುಮಾನ ಪಡೆದರು.

Read also : ಬಡವರ ಬದುಕಿಗೆ ಬುಲ್ಡೋಜರ್ ದಾಳಿ: ಸರ್ಕಾರದ ನೀತಿಗೆ ಆಕ್ರೋಶ

ಮರೆತುಹೋದ ಖಾದ್ಯದಲ್ಲಿ ಜಗಳೂರಿನ ವೀರಮ್ಮ ಕೋಂ ಬಸವರಾಜಪ್ಪ ಪ್ರಥಮ ಬಹುಮಾನ ಪಡೆದರು. ನ್ಯಾಮತಿಯ ನೇತ್ರಾವತಿ ಕೋಂ ತಿಮ್ಮೇಶಪ್ಪ  ದ್ವಿತೀಯ ಬಹುಮಾನ ಪಡೆದರು. ಜಗಳೂರಿನ ಕೆ.ಬಿ.ಮಂಗಳಮ್ಮ ಕೋಂ ಮಂಜುನಾಥ್  ತೃತೀಯ ಬಹುಮಾನ ಪಡೆದರು.

ಸಿರಿಧಾನ್ಯ ಖಾರ ಖಾದ್ಯದಲ್ಲಿ ದಾವಣಗೆರೆಯ ಪೂರ್ಣಿಮ ಕೋಂ ರಮೇಶ್ ಬಾಬು ಪ್ರಥಮ, ದಾವಣಗೆರೆಯ ಸಿಂಧುಕುಮಾರಿ  ದ್ವೀತಿಯ ಹಾಗೂ  ದಾವಣಗೆರೆಯ ಸುನಂದ ವರ್ಣೇಕರ್  ತೃತೀಯ ಬಹುಮಾನ ಪಡೆದರು.

ಉಪ ಕೃಷಿ ನಿರ್ದೇಶಕರಾದ ಅಶೋಕ್, ತಿಪ್ಪೇಸ್ವಾಮಿ, ರೇವಣ್ಣ ಸಿದ್ದೇಶ್ವರ್, ಸಹಾಯಕ ನಿರ್ದೇಶಕರುಗಳಾದ ಶ್ರೀಧರ್‍ಮೂರ್ತಿ, ತೀರ್ಪುಗಾರರಾಗಿ  ಮೀನಾಕ್ಷಿ ಜೋತ್ಸನಾ ಶ್ರೀಕಾಂತ್, ಸುಧಾ, ಸುಪ್ರಿಯ, ಕೃಷಿಕ್ ಸಮಾಜದ ಶಾಮನೂರು ಶಿವಣ್ಣ ಉಪಸ್ಥಿತರಿದ್ದರು.

TAGGED:Davanagere NewsDinamana.comGitte Madhava VitthalraoKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere protest ಬಡವರ ಬದುಕಿಗೆ ಬುಲ್ಡೋಜರ್ ದಾಳಿ: ಸರ್ಕಾರದ ನೀತಿಗೆ ಆಕ್ರೋಶ
Next Article Geeta Bharamasagar ಬದಲಾದ ಕಾಲದಲ್ಲಿ ಬದುಕಿನ ಮೌಲ್ಯಗಳು:ಗೀತಾ ಭರಮಸಾಗರ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಇಂದಿನ ಮಕ್ಕಳಿಗೆ ತಮಟೆ ಮತ್ತು ಕಂಸಾಳೆ ತರಬೇತಿ ಶಿಬಿರ ಅವಶ್ಯ : ಎಲ್.ಹೆಚ್ ಅರುಣ್ ಕುಮಾರ್

ದಾವಣಗೆರೆ ಡಿ.30 (Davanagere) : ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್‌ಗಳ ಪ್ರಭಾವಕ್ಕೆ ಒಳಗಾಗಿದ್ದು, ಅವುಗಳಿಂದ ಹೊರತರಲು ಜಾನಪದ…

By Dinamaana Kannada News

ದಾವಣಗೆರೆ | ಯುವ ಪೀಳಿಗೆ ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗದಿರಿ : ಐಜಿಪಿ ರವಿಕಾಂತೇಗೌಡ

ದಾವಣಗೆರೆ (Davanagere) : ಯುವ ಸಮುದಾಯ ಮದ್ಯ, ಮಾದಕ ವಸ್ತುಗಳ ಸೇವನೆಗೆ ಪ್ರೇರೇಪಣೆಯಾಗದೇ ದುಶ್ಚಟಗಳಿಗೆ ಬಲಿಯಾಗದಿರಿ ಎಂದು ಪೂರ್ವವಲಯ ಐಜಿಪಿ…

By Dinamaana Kannada News

ನವೆಂಬರ್ 14|ಮಿನುಗುವ ತಾರೆಗಳು ನಮ್ಮ ಮಕ್ಕಳು: ನಾಳಿನ ಪ್ರಕಾಶಮಾನ ಭವಿಷ್ಯ 

ಭಾರತದ ಮೊದಲ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನವಾದ ನವೆಂಬರ್ 14 ಅನ್ನು ದೇಶಾದ್ಯಂತ ಮಕ್ಕಳ ದಿನಾಚರಣೆಯಾಗಿ (ಬಾಲ…

By Dinamaana Kannada News

You Might Also Like

Davanagere crime news
ಅಪರಾಧ ಸುದ್ದಿ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ

By Dinamaana Kannada News
Power outage
ತಾಜಾ ಸುದ್ದಿ

ನಗರದ ವಿವಿಧ ಪ್ರದೇಶಗಳಲ್ಲಿ ಜ.24 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಉಚಿತ ಆರೋಗ್ಯ ತಪಾಸಣಾ ಶಿಬಿರ

By Dinamaana Kannada News
Davanagere
ತಾಜಾ ಸುದ್ದಿ

ಗಣಿತದ ಮೂಲಕ ಸಮಸ್ಯೆ ಪರಿಹಾರ ಕೌಶಲ್ಯವನ್ನು ಬೆಳೆಸಿಕೊಳ್ಳಿ:ನ್ಯಾ.ಮಹಾವೀರ ಎಂ.ಕರೇಣ್ಣವರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?