ದಾವಣಗೆರೆ (Davanagere): ಮನೆಯಲ್ಲಿ ಬಂಗಾರ ಕಳ್ಳತನ ಮಾಡಿದ್ದ ಆರೋಪಿಯನ್ನು ಪಿ.ಜೆ.ಬಡಾವಣೆಯ ಪೊಲೀಸರು ಬಂಧಿಸಿ 1 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆದಿದ್ದಾರೆ.
ಪೇಂಟ್ ಮೇಸ್ತ್ರೀ ರಾಮಚಂದ್ರ ಆರ್ ಬಂಧಿತ ಆರೋಪಿ.
ಪಿ.ಜೆ.ಬಡಾವಣೆಯಲ್ಲಿ ಮನೆಯೊಂದರಲ್ಲಿ ಪೇಂಟ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಮನೆಯ ಮಾಲೀಕರು ಸ್ನಾನ ಮಾಡಿಸುವ ವೇಳೆ ಪೇಂಟ್ ನೆಪದಲ್ಲಿ ಬೀಗದ ಕೀ ಪಡೆದು ಬಾತ್ ರೂಂ ಸೇಲ್ಸ್ ಮೇಲೆ ಇಟ್ಟಿದ್ದ ಮೇಲ್ಕಂಡ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ದೂರು ದಾಖಲಾಗಿತ್ತು.
ಪ್ರಕರಣ ಸಂಬಂಧ ಪೇಂಟ್ ಮೇಸ್ತ್ರೀ ರಾಮಚಂದ್ರನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ಪೇಂಟ್ ಕೆಲಸಕ್ಕೆ ಮನೆಗೆ ಹೋದಾಗ ಮನೆಯ ಬಾತ್ ರೂಂ ಸೇಲ್ಸ್ ಮೇಲೆ ಇಟ್ಟಿದ್ದ 02 ಬಂಗಾರದ ಬಳೆಗಳು ಮತ್ತು 01 ಒಂದು ಎಳೆಯ ಸರವನ್ನು ಕಳ್ಳತನ ಮಾಡಿ ಹಳೇ ಬಾತಿ ಮುತ್ತೂಟ್ ಮನಿ ಅಮಿಟೆಡ್ ನಲ್ಲಿ ಅಡವಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ ಸುಮಾರು 18 ಗ್ರಾಮ ತೂಕದ 01 ಲಕ್ಷ ಮೌಲ್ಯದ ಬಂಗಾರದ ಒಡವೆಗಳನ್ನು ಅಮಾನತ್ತು ವಶಪಡಿಸಿಕೊಂಡು ಹಾಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
Read also : Davanagere news | ಸೆ.30ರಂದು ಭದ್ರಾ ಅಭಿಯಾನ : ಪಾದಯಾತ್ರೆ
ಆರೋಪಿತನನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ್ ಎಂ ಸಂತೋಷ್ ಮತ್ತು ಮಂಜುನಾಥ ಜಿ ಹಾಗೂ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಎಮ್.ಆರ್ ಚೌಬೆ, ಪಿಎಸ್ಐ ನಾಗರಾಜಪ್ಪ ಬಿ.ಆರ್ ಸಿಬ್ಬಂಧಿಗಳಾದ ಬಸವರಾಜಪ್ಪ ಆರ್, ಕೆಂಚಪ್ಪ, ಬಸವರಾಜ್, ಧೃವ, ಗೀತಾ ಹೆಚ್ ಅವರುಗಳನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.