ಹರಿಹರ (Davanagere ): ನಗರದ ತುಂಗಭದ್ರಾ ಲಾರಿ ಚಾಲಕರ ಮತ್ತು ಕ್ಲೀನರ್‌ಗಳ ಶ್ರೇಯೋಭಿವೃದ್ಧಿ ಸಂಘ ದಿಂದ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರು ಕ್ರಿಯಾಶೀಲವಾಗಿ ಭಾಗವಹಿಸಿ ಸಾಮರಸ್ಯಕ್ಕೆ ಉತ್ತಮ ಉದಾಹರಣೆ ನೀಡಿದರು.
ನಗರದ ಪಿ.ಬಿ.ರಸ್ತೆ ನಂದಾ ಪೆಟ್ರೋಲ್ ಬಂಕ್ ಸಮೀಪ ಇರುವ ಸಂಘದ ಕಚೇರಿಯಲ್ಲಿ ಶನಿವಾರ ಗಣೇಶನ್ನು ಪ್ರತಿಷ್ಟಾಪಿಸಲಾಯಿತು. ಗಣೇಶ ಮೂರ್ತಿಯನ್ನು ತರುವುದರಿಂದ ಹಿಡಿದು ಗಣೇಶ ಮೂರ್ತಿ ಇಡುವ ಕೊಠಡಿಯನ್ನು ಅಲಂಕಾರ ಮಾಡುವುದರಲ್ಲಿ, ಸಂಜೆ ವಿಸರ್ಜನೆ ಮಾಡುವವರೆಗೂ ಸಂಘದ ಮುಸ್ಲಿಂ ಪದಾಧಿಕಾರಿಗಳು ಹಾಗೂ ಸದಸ್ಯರು ಯಾವುದೆ ಅಳುಕಿಲ್ಲದೆ, ಶ್ರದ್ಧೆಯಿಂದ ಭಾಗವಹಿಸಿದ್ದರು.
ಸುದ್ದಿಗಾರರೊಂದಿಗೆ ಸಂಘದ ಅಧ್ಯಕ್ಷ ಸೈಯದ್ ಯೂಸುಫ್ ಮಾತನಾಡಿ, ನಮ್ಮ ಸಂಘದಲ್ಲಿ 97 ಜನ ಸದಸ್ಯರಿದ್ದು, ಅದರಲ್ಲಿ ಮುಸ್ಲಿಮರು 81 ಹಾಗು 16 ಜನ ಹಿಂದೂ ಸಮುದಾಯದವರಿದ್ದಾರೆ. ನಾವೆಲ್ಲರೂ ಸೇರಿ ಗಣೇಶ ಉತ್ಸವವನ್ನು ಈ ವರ್ಷದಿಂದ ಏಕೆ ಆಚರಣೆ ಮಾಡಬಾರದು ಎಂದು ಯೋಚಿಸಿ ಪ್ರಥಮವಾಗಿ ಈ ವರ್ಷ ಆಚರಣೆಗೆ ಆರಂಭಿಸಿದ್ದೇವೆ.
Read also : Davanagere news | ಶೌಚಾಲಯ ತೊಳೆಯಲು ಮಕ್ಕಳ ಬಳಕೆ ತಪ್ಪೇನಿಲ್ಲವೆಂಬ ಕಾರಜೋಳ ಹೇಳಿಕೆಗೆ ಮೊಹಮ್ಮದ್ ಜಿಕ್ರಿಯಾ ಆಕ್ರೋಶ
ಗಣೇಶೋತ್ಸವದ ಆಚರಣೆಯಲ್ಲಿ ಹಿಂದೂ ಸಮುದಾಯದ ಸಂಪ್ರದಾಯಗಳನ್ನು ನಮ್ಮಲ್ಲಿರುವ ಹಿಂದೂ ಸಮುದಾಯದ ಸದಸ್ಯರು ಮಾಡಿದರೆ, ಉಳಿದ ಅಲಂಕಾರ ಹಾಗೂ ಇತರೆ ಕೆಲಸಗಳನ್ನು ಮುಸ್ಲಿಂ ಸದಸ್ಯರು ಮಾಡಿದ್ದೇವೆ. ಎಲ್ಲರೂ ಭಾವೈಕ್ಯತೆಯಿಂದ ಸಹೋದರರಂತೆ ಕೆಲಸ ಮಾಡಿದ್ದರಿಂದ ಉತ್ಸವ ವಿಜೃಂಬಣೆ ಯಿಂದ ನಡೆದಿದೆ. ಮುಂದೆಯೂ ಗಣೇಶೋತ್ಸವವನ್ನು ಎಲ್ಲರೂ ಸೇರಿಯೆ ಆಚರಿಸುತ್ತೇವೆ ಎಂದರು.
ಸAಘದ ಗೌರವಾಧ್ಯಕ್ಷ ರಾಜು ಬಸಪ್ಪ, ಉಪಾಧ್ಯಕ್ಷ ಫಯಾಜ್ ಅಹಮದ್, ಕಾರ್ಯದರ್ಶಿ ಜಂಬಯ್ಯ ಮಡಿವಾಳ, ಕಾನೂನು ಸಲಹೆಗಾರ ಶಶಿ ನಾಯ್ಕ್, ಜಕಾವುಲ್ಲಾ, ವಾಸು, ಪಾಂಡು, ದಾದಾಪೀರ್, ಎಂ..
ಹೈದರ್‌ಅಲಿ, ಮುಜೀಬ್ ಉಲ್ಲಾ ಸೇರಿದಂತೆ ಸಂಘದ ಸದಸ್ಯರು, ಮೆಕಾನಿಕ್‌ಗಳು ಉಪಸ್ಥಿತರಿದ್ದರು.