ಹೊನ್ನಾಳಿ : ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅದರಲ್ಲೂ ತೀರ್ಥಹಳ್ಳಿ ಯಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ತುಂಗಾ ನದಿ ಜಲಾಶಯ ತುಂಬಿ ಹರಿಯುತ್ತಿರುವುದರಿಂದ ತುಂಗಾ ನದಿ ಮುಖಾಂತರ ನೀರು ಬಿಟ್ಟಿರುವ ಪರಿಣಾಮ ಹೊನ್ನಾಳಿಯಲ್ಲಿ ನದಿ ನೀರಿನ ಮಟ್ಟ ೮.೩೫೦. ಮೀಟರ್ಗೆ ಏರಿಕೆ ಕಂಡಿದೆ.
ತುಂಗಾಗಾ ಭದ್ರ ನದಿ ನದಿ ನೀರಿನ ಪ್ರಮಾಣ ೧೦.೫ ಮೀ.ಬಂದರೆ ಅಪಾಯ ಮಟ್ಟಕ್ಕೆರುತ್ತದೆ ಪಟ್ಟಣದ ಬಾಲರಾಜ್ಘಾಟ್ನ ಕೆಲವು ಮನೆಗಳಿಗೆ ನೀರು ನುಗ್ಗುತ್ತದೆ, ಇನ್ನೂ ಭದ್ರಾ ಡ್ಯಾಂ ಈ ವರ್ಷ ಇನ್ನೂ ೧೮೬ಕ್ಕೆ ೧೪೨ ಅಡಿ ತಲುಪಿದೆ ಇನ್ನೂ ಮಳೆರಾಯ ಅಬ್ಬರಿಸುತ್ತಿದೆ ಡ್ಯಾಂನ ನೀರು ತುಂಬುತ್ತದೆ ಎಂದು ಭದ್ರ ನಾಲೆ ವ್ಯಾಪ್ತಿ ರೈತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
.
ತುಂಗಾ ಭದ್ರಾ ನದಿ ನೀರು ತುಂಬಿ ಹರಿಯುತ್ತಿರುವುದರಿಂದ ತಾಲೂಕು ತಹಶೀಲ್ದಾರ ಪಟ್ಟರಾಜಗೌಡ ಅವರು ನದಿ ಹರಿಯುತ್ತಿರುವ ಅಕ್ಕ-ಪಕ್ಕ ಗ್ರಾಮಗಳ ಜನರು ಮತ್ತು ತಮ್ಮ ಜಾನುವಾರುಗಳನ್ನು ನದಿ ಕಡೆ ಹೋಗದಂತೆ ಎಚ್ಚರಿಕೆ ನೀಡಿದರು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಆಯಾ ಗ್ರಾಮಗಳಲ್ಲಿ ನದಿದಡದ ಬಗ ಹೋಗದಂತೆ ಸಲಹೆ ಚೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ಭಾಗದಲ್ಲಿ ಕಳೆದರಡು ದಿನಗಳಿಂದ ಬಿಟ್ಟು ಬಿಟ್ಟು ಬರುತ್ತಿರುವ ಮಳೆ
ಪ್ರಮಾಣ:- ಹೊನ್ನಾಳಿ,೪೫..ಸವಳಂಗ ೫೬.ಬೆಳಗುತ್ತಿ ೬೬. ಹರಳಹಳ್ಳಿ ೪೩.೪.ಗೋವಿನಕೋವಿ ೩೮.೪..ಕುಂದೂರು ೩೪.೮..ಸಾಸ್ವೆಹಳ್ಳಿ ೩೮.೪. ಒಟ್ಟು ೩೨೬.೬..ಆವರೇಜ್ ೪೬.೦. ಮೀ.ಮೀ.. ನದಿ ನೀರಿನ ಮಟ್ಟ ೯.೮೦೦. ನದಿ ನೀರಿನ ಹರಿವು ಹೆಚ್ಚಾಗುತ್ತಲಿದೆ ರಾತ್ರಿವೇಳೆ ೧೦.ಮೀಟರಿಗಿಂತ ಹೆಚ್ಚಾಗುವ ಸಂಭವವಿದೆ.
ತುಂಗಾ ಭದ್ರಾ ನದಿ ನೀರಿನಿಂದ ನದಿ ಎರಡು ದಡ ಸೇರಿ ನೀರಿನ ಹರಿವು ಹೆಚ್ಚಾಗಿ ಬರುತ್ತದೆ ಜೊತೆಗೆ ಭದ್ರಾ ಡ್ಯಾಂ ನ ನೀರು ಸಹ ಬಂದಿದ್ದರೆ ನದಿ ಅಕ್ಕ-ಪಕ್ಕ ಹಳ್ಳಿಗಳಿಗೆ ನೀರು ನುಗ್ಗುವ ಸಂಭವಿತ್ತು ಎಂದು ತುಂಗಾಭದ್ರ ನದಿ ನೀರಿನ ಹರಿವು ನೋಡಲು ಬಂದ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.