ದಾವಣಗೆರೆ: ಸ್ಟಾರ್ಟಅಪ್ ಅಂದರೆ ನವೋದ್ಯಮ ಸ್ಥಾಪನೆಗೆ ಈಗ ಸುವರ್ಣಯುಗ ಇದಕ್ಕೆ ಹತ್ತು ಹಲವು ಅವಕಾಶಗಳು ಇವೆ ಆದುದರಿಂದ ಮೊದಲಿಗೆ ಯಾವ ಬಗೆಯ ವ್ಯವಹಾರ ಮಾಡಲು ಬಯಸುವಿರಿ ಎಂದು ನಿರ್ಧರಸಿಕೊಳ್ಳುವುದರ ಜೊತೆಗೆ ಇದರ ಕುರಿತು ಸಾಕಷ್ಟು ಸಂಶೋಧನೆ ಮಾಡುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಕೃಷಿ ಕಲ್ಪ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ. ಪಾಟೀಲ್ ಹೇಳಿದರು.
ಸ್ಥಳೀಯ ವಿಶ್ವವಿದ್ಯಾಲಯ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಯಾಂತ್ರಿಕ ವಿಭಾಗದ ಆಶ್ರಯದಲ್ಲಿ ವಿಭಾಗದ ಹಳೇಯ ವಿದ್ಯಾರ್ಥಿ ದಿ||ಎಸ್.ದಕ್ಷಿಣ ಮೂರ್ತಿ ಇವರ ಸ್ಮರಣಾರ್ಥ ಕುಟುಂಬಸ್ಥರು ಪ್ರಾಯೋಜಿಸಿದ ಎರಡು ದಿನಗಳ ಸ್ಟಾರ್ಟಅಪ್ ಕಂಪನಿಗಳು ಹೊಂದಿಸುವಿಕೆ ಮತ್ತು ಬೆಳವಣಗೆÂಗಾಗಿ ಪರಿಸರ ವ್ಯವಸ್ಥೆಗಳು ಎಂಬ ಉದ್ಯಮಶೀಲತೆ ಅಭಿವೃದ್ದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನುಭವಿರುವ ಕ್ಷೇತ್ರದಲ್ಲಿ ಉದ್ಯವi ಸ್ಥಾಪಿಸುವುದು ಉತ್ತಮ. ಇಲ್ಲವಾದರೆ, ಕೊಂಚ ಅನುಭವ ಪಡೆದುಕೊಂಡು ಉದ್ಯಮ ಆರಂಭಿಸುವುದು ಸೂಕ್ತ. ಇದೇ ರೀತಿ ನವೋದ್ಯಮ ಆರಂಭಿಸುವಾಗ ಆ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಸಂಪಾಧಿಸಿ ಅಲ್ಲಿ ಕಲಿತ ಅನುಭವಗಳನ್ನು ವ್ಯವಹಾರದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ವಿ ಸಾಧಿಸಲು ಸಾಧ್ಯವೆಂದು ಸಿ.ಎಂ.ಪಾಟೀಲ್ ನುಡಿದರು.
ಡಾ.ಭಾರತಿ ಎಂ.ಡಿ.ಮಾತನಾಡಿ, ಇಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿ ಶೈಕ್ಷಣಿಕ ಉಪಕ್ರಮಗಳಲ್ಲಿ ಉದ್ಯಮಶೀಲತೆಯ ಮಹತ್ವ ಮತ್ತು ಅನಿವಾರ್ಯತೆ ಬಗ್ಗೆ ದಕ್ಷಿಣಮೂರ್ತಿಯವರಿಗಿದ್ದ ಚಿಂತನೆಗಳನ್ನು ಹಂಚಿಕೊಂಡರು.
ಪ್ರಭಾರೆ ಪ್ರಾಚಾರ್ಯ ರಾದ ಡಾ.ಮಲ್ಲಿಕಾರ್ಜುನ್ ಎಸ್,ಹೊಳಿ,ಡಾ.ಎಸ್.ಬಸವರಾಜಪ್ಪ, ಡಾ.ಶೇಖರಪ್ಪ ಬಿ. ಮಲ್ಲೂರ ಡಾ.ಸಿ.ಜಿ.ಶ್ರೀನಿವಾಸ್ ಡಾ.ಈರಪ್ಪ ಸೊಗಲದ, ಡಾ.ವಿಜಯಕುಮಾರ್ ಇದ್ದರು.