ದಾವಣಗೆರೆ : ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದ್ದು, ಲಕ್ಷ್ಮೀ ವೆಂಕಟೇಶ್ವರ ಸ್ವಾಮೀಗೆ ಲಕ್ಷ ತುಳಸಿ ಬಿಲ್ವಾರ್ಚನೆ ನಡೆಯುತ್ತಿದೆ.
ಲೋಕಕಲ್ಯಾಣಕ್ಕಾಗಿ ನಿರಂತರ ಆರು ಗಂಟೆಗೆ ಅಧಿಕ ಕಾಲ ತುಳಸಿ ಅರ್ಚನೆ , ಇಷ್ಟಾರ್ಥ ಸಿದ್ಧಿ ಐದು ಜನ ಅರ್ಚಕರಿಂದ ನಡೆಯಲಿದೆ.
ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿ ಇರುವ ತ್ರಿಕೂಟಾಚಲ ದೇವಸ್ಥಾನ, ಲಕ್ಷ್ಮಿ ವೆಂಕಟೇಶ್ವರ, ಚಂಡಿಕಾ ದುರ್ಗಪರಮೇಶ್ವರಿ, ಅರ್ಧನಾರೇಶ್ವರ ಒಳಗೊಂಡ ದೇವಸ್ಥಾನದಲ್ಲಿ ಲಕ್ಷ್ಮಿ ವೆಂಕಟೇಶ್ವರ ಮೂರ್ತಿಗೆ
ದೇವಸ್ಥಾನದ ಧರ್ಮದರ್ಶಿ ತಿಪ್ಪಣ್ಣ ಅವರಿಂದ ಲಕ್ಷ ತುಳಸಿ ಅರ್ಪಣೆ ವಿಶೇಷ ಪೂಜೆ ನಡೆಯುತ್ತಿದೆ.
Read also : ಮಾದಕ ವಸ್ತು ಮಾರಾಟ ದಂಧೆ ಪ್ರಕರಣ:ತಲೆಮರಿಸಿಕೊಂಡಿದ್ದ ನಾಲ್ವರ ಬಂಧನ
ಕೂಡ್ಲಿ ಪೀಠದ ವಿದ್ಯಾರಣ್ಯ ಭಾರತಿ ಸ್ವಾಮಿಜೀ ಸಾನಿಧ್ಯ ವಹಿಸಿದ್ದು , ಬೆಳ್ಳಗೆ 4 ಗಂಟೆಯಿಂದ, ಜಲಾಭೀಷಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕ್ ಸೇರಿದಂತೆ ನಡೆದ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ದಾವಣಗೆರೆ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದಾರೆ.


