Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಬದಲಾದ ಕಾಲದಲ್ಲಿ ಬದುಕಿನ ಮೌಲ್ಯಗಳು:ಗೀತಾ ಭರಮಸಾಗರ
ಅಭಿಪ್ರಾಯ

ಬದಲಾದ ಕಾಲದಲ್ಲಿ ಬದುಕಿನ ಮೌಲ್ಯಗಳು:ಗೀತಾ ಭರಮಸಾಗರ

ಗೀತಾ ಭರಮಸಾಗರ
Last updated: January 1, 2026 3:07 am
ಗೀತಾ ಭರಮಸಾಗರ
Share
Geeta Bharamasagar
SHARE

ನಮಗೆ ಅನ್ನಿಸಿದಂತೆ ಬದುಕು ನಡೆದುಬಿಟ್ಟರೆ ಬದುಕಿಗೆ ಅರ್ಥವೆಲ್ಲಿ? ಬದುಕೆಂದರೆ ತಿರುವುಗಳ ದಾರಿ!!.. ಸಾಗಲೇಬೇಕು ತಿರುವುಗಳು,ಕಲ್ಲು, ಮುಳ್ಳುಗಳು ಎಲ್ಲವನ್ನು ದಾಟಿ ಬದುಕಿನ ಸಾರ್ಥಕತೆಯ ಗುರಿ ತಲುಪಲು ಬದುಕನ್ನು ಬದುಕಿಗಾಗಿ ಪ್ರೀತಿಸಬೇಕಿದೆ.

ಬದುಕು ಒಂದು ಕನಸಿನ ಮೂಟೆ ಇದ್ದಂತೆ.ಕಟ್ಟುವುದು ಸುಲಭ, ಹೊತ್ತು ಜೀವನ ಸಾಗಿಸುವುದು ಕಷ್ಟ.ಮುಂದಿನ ಜೀವನದ ಬಗ್ಗೆ ಅರಿವಿನಿಂದ ಬದುಕಬೇಕು. ಅದು ಹೇಗೆಂದರೆ ನೋಡಿ ನಕ್ಕವರು ಮತ್ತೆ ನಮ್ಮ ಬಗ್ಗೆ ಮಾತಾಡುವವರು ಮುಂದೆ ಯಾರಿಗೂ ನೆನಪಿರುವುದಿಲ್ಲ. ಆದರೆ ಜೀವನದಲ್ಲಿ ಗೆದ್ದವರು ಮತ್ತು ಸೋತವರು ಮಾತ್ರ ನೆನಪಿರುತ್ತಾರೆ….. ಬದುಕನ್ನು ಪ್ರೀತಿಸದೆ ಇದ್ದರೆ ನಾವು ಯಾರಿಗೂ ನೆನಪಿರುವುದಿಲ್ಲ.

seem1 dinamaana ads

ಬದುಕಿನ ದೊಡ್ಡ ಕರಾರು ಏನೆಂದರೆ,ಇಲ್ಲಿ ಎಲ್ಲಾ ಕೆಟ್ಟ ಮತ್ತು ಒಳ್ಳೆಯ ಕೃತ್ಯಕ್ಕೆ ಬೆಲೆ ತೆರಬೇಕಾಗುತ್ತದೆ. ಯಾವ ಪ್ರಶ್ನೆಗಳಿಗೂ ಬದುಕು ಅಷ್ಟು ಸುಲಭವಾಗಿ ಉತ್ತರ ಕೊಡುವುದಿಲ್ಲ.

“ಜೀವ ಚಿಕ್ಕದು, ಜೀವನ ದೊಡ್ಡದು” ಎಂಬ ಪರಿಪಾಠವನ್ನು ಕಲಿಸುತ್ತಲೇ ನಮ್ಮನ್ನು ಕಾಲವಾಗಿಸುತ್ತದೆ. ಬದುಕು ಸದಾ ಅದೃಷ್ಟಗಳನ್ನು ನಮ್ಮತ್ತ ಎಸೆದಿದ್ದರೂ, ಸಾವಿರಾರು ಅವಕಾಶಗಳನ್ನು ನಮ್ಮೆದುರು ತೆರೆದಿರುತ್ತದೆ. ಆದರೆ ಆಯ್ಕೆಗಳು ನಮ್ಮ ಪಾಲಿನದಾಗಿರುತ್ತದೆ. ನೂರು ಹಾದಿಯನ್ನು ಹಾಸಿದೆ,ಎದ್ದು ನಡೆಯಬೇಕಷ್ಟೆ.ವೇಗದ ಬದುಕಿನ ಆತಂಕಗಳು, ಬದಲಾದ ಜೀವನ ಮೌಲ್ಯಗಳು,ಯಶಸ್ಸಿನ ತುತ್ತ ತುದಿಯನ್ನು ಮುಟ್ಟುವ ಆತುರ ಇವೆಲ್ಲವೂ ನಮ್ಮನ್ನು ಇಂದು ಕೃತಕತೆಗೆ ತಳ್ಳಿದೆ.

ಬದುಕು ಪಕ್ಷಪಾತಿಯಾಗಿದೆ ಎಂದು ಸದಾ ದೂರುತ್ತಲೇ ಬದುಕುವವರನ್ನು ನಮ್ಮ ಸುತ್ತಮುತ್ತಲು ಕಾಣುತ್ತೇವೆ. ಬದುಕು ಕೊಟ್ಟ ವರಗಳನ್ನು ನಾವು ಎಣಿಸುವುದು ಕಡಿಮೆ ಮತ್ತು ಬದುಕಿಗೆ ಕೃತಜ್ಞತೆ ವ್ಯಕ್ತಪಡಿಸುವುದೂ ಕಡಿಮೆಯೇ. ಬದುಕು ಕೊಟ್ಟಿಲ್ಲದಿರುವ ಅನೇಕ ಪರಿಸ್ಥಿತಿಗಳನ್ನು ತಾವಾಗಿಯೇ ತಮ್ಮ ಬಳಿ ಕರೆದುಕೊಂಡು ಸದಾ ಎದೆಯಲ್ಲಿ ಹಬೆಯಾಡುವ ಅಸಮಾಧಾನದ ಅಗ್ನಿ ಪರ್ವತವನ್ನು ಹೊತ್ತು ಬಸುಗುಟ್ಟುತ್ತಿರುತ್ತಾರೆ.

ಹಿಂದಿನ ಕಾಲದಲ್ಲಿ ಬದುಕು ಏನೇ ತಿರುವುಗಳನ್ನು ನೀಡಿದರೂ ನಾಲ್ಕು ಗೋಡೆಗಳ ಮಧ್ಯೆ ವಿಷಯ ಮಂಥನವಾಗಿ ಅಲ್ಲಿಯೇ ಮನದ ಮೂಲೆಯಲ್ಲಿ ಸದ್ದಡಗುತ್ತಿತ್ತು. ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನೇ ತಾವು ಹರಾಜು ಹಾಕಿಕೊಳ್ಳುವವರಿದ್ದಾರೆ.

Read also : ಸಿರಿಧಾನ್ಯ ಪಾಕಗಳು ಬಾಯಲ್ಲಿ ನೀರೂರಿಸಿದವು:ಗಿತ್ತೆ ಮಾಧವ ವಿಠ್ಠಲ್‍ರಾವ್

ಮನೆಯ ಮತ್ತು ಮನದ ಒಳಗಡೆ ಇರಬೇಕಾದ ವಿಷಯಗಳನ್ನು ಜನರ ಬಾಯಿಗೆ ಆಹಾರವಾಗುವಂತೆ ಮಾತನಾಡುತ್ತಿರುವುದನ್ನು ಗಮನಿಸಿದರೆ ಬದುಕು ಅನ್ನುವುದು ಅಂತಹವರ ಪಾಲಿಗೆ ‘ಹಳಸಿದ ಅನ್ನವಿದ್ದಂತೆ ‘ಎಂದು ತೋಚುತ್ತದೆ.

ಕುಟುಂಬದ ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕಾದ “ಗರತಿಯರ ಗಮ್ಮತ್ತು” ಇಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನೇ ತಾವು ಹರಾಜಿಗೆ ಇಟ್ಟುಕೊಂಡು ಇಡೀ ಮನೆತನದ ಮೌಲ್ಯಗಳನ್ನೇ ಮಾರಾಟಕ್ಕಿಟ್ಟು subscriber, followers, posts ಅಂತ ತಮ್ಮನ್ನೇ ತಾವು ಮೇಧಾವಿಗಳಂತೆ,ಚಿಂತಕರಂತೆ,ಮಾರ್ಗದರ್ಶಿಗಳಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ನೋವಿನ ಕ್ಷಣಗಳು ನಮಗೆ ನಮ್ಮೊಳಕ್ಕೆ ಇಳಿಯಲು ಪ್ರೇರೇಪಿಸುತ್ತವೆ. ಇವು ನಮ್ಮೊಳಗಿನ ಆಂತರ್ಯದ ಶಕ್ತಿಯ ಪರಿಚಯವನ್ನು ನಮಗೆ ಮಾಡಿಕೊಡುತ್ತವೆ. ಬದುಕು ನಿಜಕ್ಕೂ ‘ನಮಗೇನಾಯಿತು ‘ ಎಂಬುದಲ್ಲ.

‘ನಮಗಾದದ್ದಕ್ಕೆ ‘ನಾವು ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದೆವು, ಹೇಗೆ ಎದುರಿಸಿದವು, ಹೇಗೆ ಸ್ವೀಕರಿಸಿದೆವು ಎಂಬುದಾಗಿದೆ.

ಬದುಕು ಪ್ರತಿಕ್ಷಣವೂ ಹೊಸ ಸವಾಲುಗಳಿಗೆ ನಮ್ಮನ್ನು ಅಣಿಗೊಳಿಸುತ್ತಿರುತ್ತದೆ. ಮನುಷ್ಯನಿಗೆ ಸ್ವಾಭಿಮಾನವಿರಬೇಕು, ಅಭಿಮಾನವಿರಬೇಕು ಆದರೆ ಒಣ ಪ್ರತಿಷ್ಠೆ, ಒಣ ಅಭಿಮಾನಗಳಿಂದ ಬದುಕನ್ನು ಬಂಜರಾಗಿಸಿಕೊಳ್ಳಬಾರದು.

ಆಧುನಿಕತೆಯಿಂದ, ದುರಾಭಿಮಾನದಿಂದ ನಾನೇ, ನನ್ನಿಂದಲೇ, ಎನ್ನುವ ಅಹಂಗಳಿಂದ ಅನುಮಾನಗಳಿಂದ ತಮ್ಮ ಬದುಕನ್ನು ತಾವೇ ಕಮರಿಸಿಕೊಳ್ಳದಿರಿ.

“ಬದುಕು ಸ್ವೀಕಾರಕ್ಕಿದೆಯೇ ಹೊರತು, ತಿರಸ್ಕಾರಕ್ಕಲ್ಲ “

ಲೇಖಕರು
ಗೀತಾ ಭರಮಸಾಗರ
ಚಿತ್ರದುರ್ಗ
Ph :-9113694200

job news dinamaana ads
TAGGED:Davanagere Newsdinamaana.comGeeta BharamasagarKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
By ಗೀತಾ ಭರಮಸಾಗರ
ಗೀತಾ ಭರಮಸಾಗರ ಶಿಕ್ಷಕರು, ಲೇಖಕರು ಚಿತ್ರದುರ್ಗ.
Previous Article Davanagere ಸಿರಿಧಾನ್ಯ ಪಾಕಗಳು ಬಾಯಲ್ಲಿ ನೀರೂರಿಸಿದವು:ಗಿತ್ತೆ ಮಾಧವ ವಿಠ್ಠಲ್‍ರಾವ್
Next Article POEM POEM|ಹೊಸ ಹರುಷ -ರಚನೆ : ಮಂಜುನಾಥ.ಜಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಆಧಾರ್‌ ಕಾರ್ಡ್‌..  ಬಯೋಮೆಟ್ರಿಕ್ ಅಪ್‌ಡೇಟ್‌ ಏಕೆ?

ಮಗುವಿನ ಬಯೋಮೆಟ್ರಿಕ್ ಅಪ್‌ಡೇಟ್ ಅನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ರೆ UIDAI ನಿಮ್ಮ ಮಗುವಿನ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುವ ಅಧಿಕಾರ ಹೊಂದಿದೆ.…

By Dinamaana Kannada News

ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಎಸ್ಸೆಸ್ ಗೆ ಸಂತಾಪ

ದಾವಣಗೆರೆ :  ಕೊಡುಗೈ ದಾನಿಗಳಾದಂತಹ ಡಾ. ಶಾಮನೂರ  ಶಿವಶಂಕರಪ್ಪನವರು  ಅವರ ಆತ್ಮಕ್ಕೆ ಶಾಂತಿ ಕೋರಿ ದಾವಣಗೆರೆ ಜಿಲ್ಲಾ ಸಂಘದ ವತಿಯಿಂದ…

By Dinamaana Kannada News

ಭದ್ರಾ ಜಲಾಶಯದಲ್ಲಿ 173 ಅಡಿ ನೀರು : ಭರ್ತಿಗೆ ಕೆಲವೇ ದಿನ ಬಾಕಿ

Bhadra dam water level today :   ಮಲೆನಾಡು ಮತ್ತು ಬಯಲು ಸೀಮೆಯ ಜೀವನಾಡಿ ಶಿವಮೊಗ್ಗದ ಭದ್ರಾ ಜಲಾಶಯದಲ್ಲಿ ನೀರಿನ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಯುವಜನರಲ್ಲಿ ಆರೋಗ್ಯ ಅರಿವು, ಸಾಮಾಜಿಕ ಹೊಣೆಗಾರಿಕೆ ಅವಶ್ಯ : ಡಾ.ಬಿ.ಡಿ.ಮುರುಳಿಧರ

By Dinamaana Kannada News
Davanagere
ತಾಜಾ ಸುದ್ದಿ

ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?