ದಾವಣಗೆರೆ : ರಾಜ್ಯ ಹಾಗೂ ನಮ್ಮ ದೇಶದ ಅಭಿವೃದ್ದಿಯಾಗಬೇಕಾದರೆ ಮಕ್ಕಳಿಗೆ ಉಜ್ಜಲ ಭವಿಷ್ಯದ ಜೊತೆಗೆ ಉತ್ತಮ ಸಂಸ್ಕಾರ ದೊರೆಯಬೇಕಾದಲ್ಲಿ ಶಿಕ್ಷಣ ಅವಶ್ಯವಾಗಿದೆ ಎಂದು ವಿರಕ್ತಮಠ ಬಸವಪ್ರಭು ಸ್ವಾಮೀಜಿ ಹೇಳಿದರು.
ಮೌಲಾನ ಆಜಾದ್ ಸಂಸ್ಥೆ ಅಧ್ಯಕ್ಷ ಡಾ. ಸಿ.ಆರ್.ನಸೀರ್ ಅಹಮದ್ ವತಿಯಿಂದ ಸರ್ಕಾರಿ ಮತ್ತು ಅನೇಕ ಶಾಲೆಗಳ ವಿದ್ಯಾರ್ಥಿಗಳಿಗೆ, ನೋಟ್‍ಬುಕ್, ಪೆನ್ ಹಾಗೂ ಇತರೆ ಶಿಕ್ಷಣ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೋಷಕರನ್ನು ಯಾವುದೇ ಕಾರಣಕ್ಕೂ ವೃದ್ಧಾಶ್ರಮಕ್ಕೆ ಕಳುಹಿಸಿದೇ ತಮ್ಮ ಬಳಿಯೇ ಇರಿಸಿ ಅವರ ಸೇವೆಯನ್ನು ಮಾಡಬೇಕೆಂದು ಕಿವಿಮಾತು ಹೇಳಿದರು.
ಡಾ. ಸಿ.ಆರ್.ನಸೀರ್ ಅಹಮದ್ ಸಮಾಜ ಸೇವೆಯೊಂದಿಗೆ ಶಿಕ್ಷಣ ಪ್ರೇಮಿಗಳಾಗಿರುತ್ತಾರೆ. ಸುಮಾರು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಮಕ್ಕಳಿಗೋಸ್ಕರ ನಡೆಸಿಕೊಂಡು ಬಂದಿರುತ್ತಾರೆ. ತಮ್ಮ ಕೊನೆ ಉಸಿರಿರುವವರೆಗೂ ಈ ಸೇವೆ ಅವರು ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಬಿ.ಜೆ.ಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಜಿಲ್ಲಾ ಬಿ.ಜೆ.ಪಿ.ಪ್ರಧಾನ ಕಾರ್ಯದರ್ಶಿ ಕಡ್ಲೆಬಾಳು ಧನಂಜಯ, ಜಾಮಿಯಾ ಮಸೀದಿಯ ಪದಾಧಿಕಾರಿ ಅಲ್ಲಾವಲಿ ಭಕ್ಷೀಖಾನ್, ರೋಷನ್, ಮುಖ್ಯೋಪಾಧ್ಯಾಯರು, ವಿರಕ್ತಮಠ ಶಾಲೆ ಸಿಬ್ಬಂದಿ ಇದ್ದರು.