ಪ್ರತಿ ವರ್ಷ ಮಾರ್ಚ್ 8ನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುತ್ತಿರುವುದು ತಿಳಿದ ಸಂಗತಿ. ಈದಿನ ನಾವು ಮಹಿಳೆಯರನ್ನ ಹಾಡಿ ಹೊಗಳುವುದು ಹಾಗೂ ಅವರ ಸಂಕಟ ನೋವುಗಳನ್ನು ಚರ್ಚಿಸಲಿಕ್ಕೆ ಮೀಸಲಿಟ್ಟ ದಿನವಾಗಿಸುತ್ತಿದ್ದೇವೇನೋ ಎಂಬ ಆತಂಕ ಕಾಡುತ್ತಿದೆ.
ದುಡಿಯವ ವರ್ಗದ ಮಹಿಳೆಯರು ತಮ್ಮ ಘನತೆಯ ಬದುಕಿಗಾಗಿ ಹೋರಾಟ ಮಾಡಿದುದರ ಫಲವಾಗಿ ಈ ದಿನ ಆಚರಿಸುವಂತಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ ಗೆ ಅವಳದೇ ಆದ ಗೌರವ ಸ್ಥಾನಮಾನಗಳಿರುವುದು ಗಮನಾರ್ಹವಾಗಿದೆ. ದೇಶವನ್ನು ಕಟ್ಟುವುದರಲ್ಲಿ ಮಹಿಳೆಯರು ಅನಾದಿಕಾಲದಿಂದಲೂ ತಮ್ಮ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ ಆದರೆ ತಾರತಮ್ಯದಂತಹ ವಿಷಯವು ದೇಶದ ಅಡಿಪಾಯವನ್ನೇ ಆಭದ್ರಗೊಳಿಸುತ್ತಿದೆ.
ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರಬೇಕಾದರೆ ಮಹಿಳೆಯರನ್ನು ನೋಡುವ ರೀತಿ ಬದಲಾಗಬೇಕು. ಹುಟ್ಟು, ವಿದ್ಯಾಭ್ಯಾಸ, ವಿವಾಹ, ಕುಟುಂಬ, ಉದ್ಯೋಗದಂತಹ ವಿಷಯಗಳಲ್ಲಿ ರಾಜಿ ಮಾಡಿ ಕೊಳ್ಳುತ್ತಲೇ ಹೋಗಬೇಕಾದ ಪರಿಸ್ಥಿತಿಯಿಂದ ಆಕೆ ಮುಕ್ತಳಾಗಬೇಕು. ನಿರ್ಭಯವಾಗಿ ಬದುಕಲು ಬೇಕಾದ ಸ್ವಾತಂತ್ರ್ಯ ಮಹಿಳೆಗಿರಬೇಕು.
ಇತ್ತೀಚಿನ ದಿನಗಳಲ್ಲಿ ಮಹಿಳೆಯ ಪಾತ್ರ ಬದಲಾಗಿದೆ ವೃತ್ತಿ ,ಹಾಗೂ ಸಂಸಾರ, ಎರಡನ್ನು ನಿಭಾಯಿಸಬಲ್ಲೆ ಎಂಬ ಆತ್ಮ ವಿಶ್ವಾಸ ಹೊಂದಿದ್ದಾಳೆ.ದಿಟ್ಟತನದಿಂದ ಜೀವನದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳವ ಶಕ್ತಿ ತನ್ನಲ್ಲೂ ಇದೆ, ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಎಂಬ ವಾಸ್ತವವನ್ನು ಅರ್ಥ ಮಾಡಿಕೊಂಡು ಬದಲಾದ ಪರಿಸ್ಥಿತಿಗೆ ತನ್ನನ್ನು ತಾನು ಹೊಂದಿಸಿಕೊಳ್ಳುವ ದಿಕ್ಕಿನಲ್ಲಿ ಸಾಗಿದ್ದಾಳೆ
ಸಹನಶೀಲತೆಯಿಂದ ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳಾದರು ಅವಳ ಸ್ಥಿತಿ ಗತಿ ,ಸ್ಥಾನ ಮಾನ, ಆರ್ಥಿಕ, ಸಾಮಾಜಿಕ ,ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಮೇಲಕ್ಕೇರುವುದು ಸಾಧ್ಯವಾಗಿಲ್ಲ
ಮಹಿಳೆಯರಿಗೆ ಶಿಕ್ಷಣ, ವಿಜ್ಞಾನ ತಂತ್ರ ಜ್ಞಾನಕ್ಕೆ ವಿಶೇಷ ನೆರವು ನೀಡಿ ಸಮಾಜದಲ್ಲಿ ಸಮಾನತೆಯ ವೈಶಿಷ್ಟ್ಯ ಪೂರ್ಣ ಬದಲಾವಣೆ ಗಳಿಗೆ ಅವಕಾಶ ಕಲ್ಪಿಸಬೇಕು. ಲಿಂಗ ತಾರತಮ್ಯ ಅತ್ಯಾಚಾರ ದಂತಹ ವಿಷಯಗಳಿಗೆ ತೆರೆ ಬೀಳಬೇಕು. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣಾಗಬೇಕು.
ಮಹಿಳೆಯರ ಸಾಧನೆಗೆ ಪ್ರೋತ್ಸಾಹ ,ನೈತಿಕ ಬೆಂಬಲ ಸಹಕಾರ ಅತ್ಯಗತ್ಯ.
ಕೇವಲ ಒಂದು ದಿನಕ್ಕೆ ಮಹಿಳೆಯನ್ನ ಸೀಮಿತಗೊಳಿಸಿ ಮಹಿಳೆಯರನ್ನು ಹಾಡಿ ಹೊಗಳುವುದರಿಂದ ಯಾವುದೇ ಬದಲಾವಣೆ ಯಾಗಲಿ..ಪ್ರಗತಿಯಾಗಲಿ ಸಾದ್ಯ ವಿಲ್ಲ.ಮಹಿಳೆಯರಿಗೆ ಉತ್ತಮ ಅವಕಾಶ ,ಸಾಧನೆಗೆ ಬೆಂಬಲ ಹಾಗೂ ಪ್ರಶಂಸೆ ಪ್ರೋತ್ಸಾಹ ದೊರೆತಾಗ ಮಾತ್ರ ಮಹಿಳಾ ದಿನಾಚರಣೆಗೊಂದು ಅರ್ಥ ಬಂದೀತು ಎಂಬುದು ನನ್ನ ಅಭಿಮತ.
ಮಹಿಳೆಯರ ಸಂಕಷ್ಟಗಳಿಗೆ ಸ್ಪಂದಿಸುವ ಅರ್ಥಪೂರ್ಣ ದಿನಾಚರಣೆ ಯ ಆಶಯಗಳೊಂದಿಗೆ ಸರ್ವರಿಗೂ ಶುಭಾಶಯಗಳು.
-ಜಿ ಪದ್ಮಲತಾ, KSPSTA