ದಾವಣಗೆರೆ (Davanagere): ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ವಿಶ್ವಬ್ಯಾಂಕ್ ಸಿವಿಲ್ ಸೊಸೈಟಿ ಪಾಲಿಸಿ ಫೋರಂ (ಸಿಎಸ್ಪಿಎಫ್) 2024-2026 ಅಧಿಕಾರಾವಧಿ ವರ್ಕಿಂಗ್ ಗ್ರೂಪ್ ವಿಶೇಷ ಪ್ರತಿನಿಧಿ ಚುನಾವಣಾ ಅಭ್ಯರ್ಥಿಯಾಗಿ ದಾವಣಗೆರೆ ಸಿದ್ಧವೀರಪ್ಪ ಬಡಾವಣೆಯ ನಿವಾಸಿ ಡಾ.ಎಲ್. ರಾಕೇಶ್ ಸ್ಪರ್ಧಿಸುತ್ತಿದ್ದಾರೆ.
ದಕ್ಷಿಣ ಏಷ್ಯಾದ ಎಂಟು ದೇಶಗಳ ಪರವಾಗಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಜಗತ್ತಿನ 189 ದೇಶಗಳ ಪ್ರತಿನಿಧಿಗಳು ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 15 ರಿಂದ ನವೆಂಬರ್ 15 ರವರೆಗೆ ಒಂದು ತಿಂಗಳು ಚುನಾವಣೆ ನಡೆಯಲಿದೆ.
ದಾವಣಗೆರೆಯ ಐಡಾ ಲವ್ಲೇಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ.ಎಲ್. ರಾಕೇಶ್, ಕಳೆದ ವರ್ಷ ನಡೆದ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಅಂತರರಾಷ್ಟ್ರೀಯ ಹಣಕಾಸು ನಿಧಿ ವಾರ್ಷಿಕ ಸಭೆಯನ್ನು ಪ್ರತಿನಿಧಿಸಿದ್ದರು.
ತಂತ್ರಜ್ಞಾನ ಮತ್ತು ಆವಿಷ್ಕಾರ, ಸುಸ್ಥಿರ ಅಭಿವೃದ್ಧಿ ಗುರಿಗಳು, ತರಬೇತಿ ಮತ್ತು ವೃತ್ತಿಪರ ಅಭಿವೃದ್ಧಿ ಮಾರುಕಟ್ಟೆಗಳು, ಬಂಡವಾಳ ಮಾರುಕಟ್ಟೆಗಳು, ನಾಗರಿಕ ಸಮಾಜ ಪ್ರಾತಿನಿಧ್ಯ ವೇದಿಕೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ತಂತ್ರಜ್ಞಾನ ಮತ್ತು ಆವಿಷ್ಕಾರ, ಸುಸ್ಥಿರ ಅಭಿವೃದ್ಧಿ ಗುರಿಗಳು, ತರಬೇತಿಮತ್ತು ವೃತ್ತಿಪರ ಅಭಿವೃದ್ಧಿ ಮಾರುಕಟ್ಟೆ ಗಳು, ಬಂಡವಾಳ ಮಾರುಕಟ್ಟೆಗಳು, ನಾಗರಿಕ ಸಮಾಜ ಪ್ರಾತಿನಿಧ್ಯ ವೇದಿಕೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ನಡೆದ ಸಭೆಯಲ್ಲಿ ಡಾ.ಎಲ್. ರಾಕೇಶ್ ಗಮನ ಸೆಳೆದಿದ್ದರು.
`ಸಮಾಜವನ್ನು ಒಳಗೊಂಡು ಜಗತ್ತಿನ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಲಹೆ ನೀಡುವ ಈ ಫೋರಂನಲ್ಲಿ ಶೈಕ್ಷಣಿಕ ಅಭಿವೃದ್ಧಿಯ ಸಲಹಾ ಸದಸ್ಯನಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ಡಾ. ರಾಕೇಶ್ ತಿಳಿಸಿದ್ದಾರೆ.