1) ಕ್ಷಯ ರೋಗ ಅಂದರೆ ಏನು?
ಇದು ಮೈಕೊಬ್ಯಾಕ್ಟೀರಿಯಮ್ ಟ್ಯೂಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾ ದಿಂದ ಹರಡುವ ಕಾಯಿಲೆ.
2) ಇದರ ಲಕ್ಷಣಗಳೇನು?
ತುಂಬಾ ಕೆಮ್ಮು ಹಾಗೂ ಕಫ ಹಾಗೂ ಜ್ವರ ಹಾಗೂ ಮೈ ಸುಸ್ತು ಮತ್ತು ಉಸಿರಾಟದ ತೊಂದರೆ ಜೊತೆಗೆ ದೇಹದ ತೂಕ ಕಡಿಮೆ ಆಗುವುದು.
3) ಇದು ಹರಡುವುದು ಹೇಗೆ?
ಒಬ್ಬ ಟಿಬಿ ಕಾಯಿಲೆ ಇರುವ ವ್ಯಕ್ತಿ ಕಿಮ್ಮಿದಾಗ ಇನ್ನೊಬ್ಬರಿಗೆ ಇದು ಹರಡುವುದು ಅಥವಾ ಸೀನಿದಾಗ.
4 )ಇದು ಗುಣ ಆಗುವ ಕಾಯಿಲೆಯೇ?
ಖಂಡಿತ ಸರಿಯಾದ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು ಹಾಗೂ ಸರಿಯಾದ ಔಷಧಿಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಂಡರೆ ಮಾತ್ರ. ಆದರೆ ವೈದರು ಹೇಳಿದ ಅವಧಿಯನ್ನು ಗಮನಿಸಬೇಕು ಹಾಗೂ ಪೂರ್ಣ ಮಾಡಬೇಕು.
5 ) ಸಾಮಾನ್ಯವಾಗಿ ಗುಣ ಆಗುವಂತಹ ಅವಧಿ ಸಮಯ ಎಷ್ಟು?
ಕನಿಷ್ಠ ಆರು ತಿಂಗಳಿಂದ ಗರಿಷ್ಠ 9 ರಿಂದ 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚು
6) ಮಾಮೂಲಿ ಔಷಧಿಗೆ ಗುಣಪಡುವಂತಹ ಸಾಮಾನ್ಯ ಟಿಬಿ ಎಂದರೆ ಏನು?
ರೈಫ್ಯಾಂಪೇಸಿನ್, ಐಸೋನಿಯಜೀಡ್, ಪೈರೆಜಿನಮೈಡ್, ಎಥಾಂಬುಟಾಲ್ ಈ ಮಾತ್ರೆಗಳಿಂದ ಆರು ತಿಂಗಳಿಗೆ ಗುಣ ಆಗುವ ಟಿಬಿ.
7 ) ಮಾಮೂಲಿ ಟಿಬಿ ಮಾತ್ರೆಗಳಿಗೆ ಗುಣ ಆಗದೆ ಇರುವಂತಹ ಕ್ಲಿಷ್ಟಕರ ಟಿಬಿ ಎಂದರೆ ಏನು?
ಇದು ಮಾಮೂಲಿ ಮಾತ್ರೆ ಹೊರಪಡಿಸಿ ಅದನ್ನು ಮತ್ತು ಅದರ ಜೊತೆಗೆ ಅಥವಾ ಬೇರೆ ಸಂಪೂರ್ಣ ಔಷಧಿ ಉಪಯೋಗಿಸುವಂತಹ ಒಂದು ವಿಧಾನ
8 ) ಟಿಬಿ ಎಲ್ಲೆಲ್ಲಿ ದೇಹದ ಭಾಗದಲ್ಲಿ ತಲುಪುತ್ತದೆ ಹಾಗೂ ಹರಡುತ್ತದೆ?
ಪ್ರಮುಖವಾಗಿ ಶ್ವಾಸಕೋಶಕ್ಕೆ ಟಿಬಿ ಬರುತ್ತದೆ ಆದರೆ ಅದು ಶ್ವಾಸಕೋಶ ಹೊರತುಪಡಿಸಿ ನಮ್ಮ ಮೂಳೆಗಳಲ್ಲಿ ಹಾಗೂ ದೇಹದ ಇತರೆ ಯಾವುದೇ ಭಾಗದಲ್ಲಿ ಹರಡಬಹುದು. ಉದಾಹರಣೆಗೆ ನಮ್ಮ ಅನ್ನನಾಳ ನಮ್ಮ ಮೆದುಳು ನಮ್ಮ ಕಿಡ್ನಿ ಹಾಗೂ ಲಿವರ್ ಅಥವಾ ಎಲ್ಲೇ ಆದರೂ ಇದು ಹರಡಬಹುದು.
9 ) ಟಿಬಿ ಹರಡದೇ ಇರುವಂತಹ ದೇಹದ ಎರಡೇ ಭಾಗಗಳು ಯಾವುವು?
ಕೂದಲು ಹಾಗೂ ಉಗುರು ಹೊರತುಪಡಿಸಿ ನಮ್ಮ ದೇಹದ ಯಾವುದೇ ಭಾಗಕ್ಕೆ ಟಿಬಿ ಹರಡಬಹುದು
10 ) ಟಿಬಿ ಕಾಯಿಲೆಯ ಚಿಕಿತ್ಸೆ ದುಬಾರಿ ನಾ?
ಖಂಡಿತ ಇಲ್ಲ ನಮ್ಮ ಭಾರತ ಸರ್ಕಾರ ಟಿಬಿ ಕಾಯಿಲೆಗೆ ಚಿಕಿತ್ಸೆ ಹಾಗೂ ಆಗಿರುವುದನ್ನು ಕಂಡುಹಿಡಿಯುವ ಅಂತಹ ಕಫ ಪರೀಕ್ಷೆ ಕೂಡ ಉಚಿತವಾಗಿ ನಮ್ಮ ಎಲ್ಲಾ ಸರ್ಕಾರ ಆಸ್ಪತ್ರೆಗಳಲ್ಲಿ ಅವಕಾಶ ಮಾಡಿಕೊಟ್ಟಿದೆ
11 ) ಟಿಬಿ ಕಾಯಿಲೆ ಔಷಧಿಗಳು ಎಷ್ಟು ದುಬಾರಿ? ಅದನ್ನು ನಾವು ಎಲ್ಲಿ ಕೊಂಡುಕೊಳ್ಳಬೇಕು?
ನಿಮಗೆ ಟಿಬಿ ಕಾಯಿಲೆ ಔಷಧಿಗಳು ಸಂಪೂರ್ಣ ಉಚಿತವಾಗಿ ನಿಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ದೊರಕುತ್ತದೆ
12 ) ನಮಗೆ ಅಥವಾ ನಮ್ಮ ಕುಟುಂಬದಲ್ಲಿ ಯಾರಿಗಾದರೂ ಟಿಬಿ ಕಾಯಿಲೆ ಇದ್ದರೆ ಏನು ಮುನ್ನೆಚ್ಚರಿಕೆ ವಹಿಸಬೇಕು?
ಯಾರಿಗೆ ಟಿಬಿ ಕಾಯಿಲೆ ಇದೆಯೋ ಅವರು ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಬಟ್ಟೆ ಅಥವಾ ಕೈ ಅಡ್ಡ ಇಟ್ಟುಕೊಂಡು ಸೀನ ಬೇಕು ಮತ್ತು ಕೆಮ್ಮಬೇಕು ಏಕೆಂದರೆ ಇದರಿಂದಲೇ ಕಾಯಿಲೆ ಇನ್ನೊಬ್ಬರಿಗೆ ಹರಡುವುದು.
13) ಗರ್ಭಿಣಿ ಹೆಂಗಸರಿಗೆ ಮತ್ತು ಹಾಲು ಉಣಿಸುವ ತಾಯಂದಿರಿಗೆ ಟಿಬಿ ಬಂದರೆ ಅವರಿಗೆ ಕೂಡ ಚಿಕಿತ್ಸೆ ಇದೆಯಾ?
ಖಂಡಿತ ಇದೆ ಮತ್ತು ಅವರು ಇದನ್ನು ಎಂದು ನಿರ್ಲಕ್ಷಿಸದೆ ತಕ್ಷಣ ಚಿಕಿತ್ಸೆ ಪಡೆಯಬೇಕು
Read also : ವಿಶ್ವ ಅಸ್ತಮಾ ದಿನಾಚರಣೆ : ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿಗೆ
ಲೇಖಕರು : ಡಾ. ಎನ್. ಹೆಚ್. ಕೃಷ್ಣ.
ಶ್ವಾಸಕೋಶದ ಕಾಯಿಲೆಗಳ ಸಲಹಾ ವೈದ್ಯರು,
ದಾವಣಗೆರೆ