ದಾವಣಗೆರೆ : ಶಾಮನೂರು ಬಳಿಯ ಓಬ್ಬಜ್ಜಿ ಹಳ್ಳಿಯಲ್ಲಿ ಯುವಕನ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್.ಪಿ.ಎಸ್. ನಗರದ ಮನೋಹರ್ ಬಂಧಿತ ಆರೋಪಿ.
ಮೇ 16 ರಂದು ಒಬ್ಬಜ್ಜಿಹಳ್ಳಿ ಬಳಿ ಯುವಕನ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಮೃತ ಸುದೀಪನ ಪತ್ನಿ ಭೂಮಿಕಾ ಅವರು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಪೊಲೀಸ್ ಅಧೀಕ್ಷಕರಾದ ವಿಜಯ್ ಕುಮಾರ್ ಸಂತೋಷ್, ಹಾಗೂ ಮಂಜುನಾಥ ಮತ್ತು ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಸಿದ್ದನಗೌಡರ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್ ನೇತೃತ್ವದಲ್ಲಿ ಠಾಣಾ ಪಿಎಸ್ಐ ಜೋವಿತ್ ರಾಜ್, ನಾರಪ್ಪ, ಸಿಬ್ಬಂದಿಗಳಾದ ಜಗದೀಶ್, ದೇವೇಂದ್ರನಾಯ್ಕ, ನಾಗಭೂಷಣ್, ಮಂಜುನಾಥ, ಅಣ್ಣಯ್ಯ, ಮಹೇಶ್, ವಿಶ್ವನಾಥ, ಮಹಮ್ಮದ್ ಯುಸುಫ್ ಅತ್ತರ್, ವೀರೇಶ್ ರವರನ್ನೋಳಗೊಂಡ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಕೊಲೆ ನಡೆದ ಕೇವಲ 48 ಗಂಟೆಗಳಲ್ಲಿ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ವಿಚಾರಣೆ ನಡೆಸಿದ ವೇಳೆಯಲ್ಲಿ ಆರೋಪಿತನು ಹಣಕಾಸಿನ ವಿಚಾರದಲ್ಲಿ ಮೃತ ಸುದೀಪನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕೊಲೆ ಪ್ರಕರಣದ ಆರೋಪಿತನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ ರವರು ಶ್ಲಾಘಿಸಿದ್ದಾರೆ.