ದಾವಣಗೆರೆ (Davanagere) : ದರೋಡೆ ಮಾಡಲು ಪ್ರಯತ್ನಿಸಿದ 05 ಜನ ಆರೋಪಿಗಳಿಗೆ 08 ತಿಂಗಳು ಸಾಧಾ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಅಜಾದ ನಗರ ಠಾಣಾ ವ್ಯಾಪ್ತಿಯ ಮಾಗನಹಳ್ಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಜೀಪ್‌ನ ನಿಲ್ಲಿಸಿಕೊಂಡು ಆಯುಧಗಳನ್ನು ಹಿಡಿದು ದರೋಡೆಗೆ ಯತ್ನಿಸಿದ ಆರೋಪಿಗಳನ್ನು 08.03.2024 ರಂದು ಡಿಸಿಆರ್‌ಬಿ ಮತ್ತು ಅಜಾದನಗರ ಪೊಲೀಸ ಠಾಣೆಯ ಸಿಬ್ಬಂದಿಗಳು ದುರ್ಯೋಧನ, ರಮೇಶ ಸೋಪಾನ, ಲಕ್ಷ್ಮಣ, ಗಣೇಶ, ಲಕ್ಷ್ಮಣ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾ ರೋಪಣಾಪಟ್ಟಿ ಸಲ್ಲಿಸಿದ್ದರು.
02 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಪ್ರವೀಣ್‌ಕುಮಾರ್ ಆರ್.ಎನ್ ರವರು ಆರೋಪಿಗಳಿಗೆ 12-11-2024 ರಂದು 08 ತಿಂಗಳು ಸಾಧಾ ಕಾರಾಗೃಹ ಶಿಕ್ಷೆ ಮತ್ತು ತಲಾ 10,000/-ರೂ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ವಕೀಲರಾದ ಜಯ್ಯಪ್ಪ ಕೆ.ಜಿ ರವರು ನ್ಯಾಯ ಮಂಡನೆ ಮಾಡಿದ್ದಾರೆ.
ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ತನಿಖಾಧಿಕಾರಿ ಇಮ್ತಿಯಾಜ್, ಸಿಪಿಐ ಅಶ್ವಿನ್ ಕುಮಾರ್ . ಡಿಸಿಆರ್‌ಬಿ ವಿಭಾಗದ ಸಿಬ್ಬಂದಿಗಳಾದ ಆಂಜನೇಯ, ಮಜೀದ್ ಕೆ.ಸಿ, ರಾಘವೇಂದ್ರ, ಬಾಲರಾಜ್, ಸಿಬ್ಬಂದಿಗಳನ್ನು ಮತ್ತು ಅಜಾದ್‌ನಗರ ಠಾಣಾ ಸಿಬ್ಬಂದಿಗಳಾದ ಮಂಜುನಾಥನಾಯ್ಕ, ಶ್ರೀ ಕೃಷ್ಣ ನಂದ್ಯಾಲ್, ತಿಪ್ಪೇಸ್ವಾಮಿ, ನಾಗರಾಜ ಡಿ.ಬಿ, ವೆಂಕಟೇಶ್ ರವರುಗಳನ್ನು ನ್ಯಾಯಾಮಂಡನೆ ಮಾಡಿದ ಸರ್ಕಾರಿ ವಕೀಲರಾದ ಜಯ್ಯಪ್ಪ ಕೆ.ಜಿ ರವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಮಂಜುನಾಥ. ಜಿ ರವರು ಶ್ಲಾಘೀಸಿದ್ದಾರೆ.
Read also : Davanagere | ನಮ್ಮ ದೇಶದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ : ಕೇಂದ್ರ ಸಚಿವ ಪ್ರಹ್ಲಾದ ಜೋಷಿ