ದಾವಣಗೆರೆ: ಶಿವಮೊಗ್ಗ ಜಿಲ್ಲೆಯ ಯುವತಿಯೊಬ್ಬರು ಮನನೊಂದು ಕೊಡತಾಳ ಕ್ರಾಸ್ ಬಳಿ ಇರುವ ಕೆರೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಬಗ್ಗೆ 112 ಅಧಿಕಾರಿಗಳಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಕೊಡಲೇ ಘಟನಾ ಆಗಮಿಸಿ ಸಂತ್ರಸ್ಥೆಯನ್ನು ರಕ್ಷಿಸಿದ್ದಾರೆ.
112 ಕರ್ತವ್ಯಾಧಿಕಾರಿಗಳಾದ ಬಸವರಾಜ್ ಹಾಗೂ ಮಂಜಪ್ಪ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸಂತ್ರಸ್ತೆಯ ಮಾಹಿತಿ ಪಡೆದು ಸಮಸ್ಯೆಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದೇ ಪರಿಹಾರವಲ್ಲ, ಮನಸ್ಥೈರ್ಯ ತುಂಬಿ ಸೂಕ್ತ ತಿಳುವಳಿಕೆ ನೀಡಿದ್ದಾರೆ.
ನಂತರ ನ್ಯಾಮತಿ ಠಾಣೆಗೆ ಮಾಹಿತಿ ನೀಡಿ, ಸಂತ್ರಸ್ತೆಯ ಕಡೆಯವರಿಗೆ ಸಂಪರ್ಕಿಸಿ, ಕರೆಯಿಸಿ ಸೂಕ್ತ ತಿಳುವಳಿಕೆ ನೀಡಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
Read also : ದಾವಣಗೆರೆ:ರೈಲಿಗೆ ತಲೆ ಕೊಟ್ಟು ಉಸಿರು ಚೆಲ್ಲಿದ ಯುವಕ
ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಯುವತಿಯ ರಕ್ಷಣೆ ಮಾಡಿದ 112 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕರವರು ಪ್ರಶಂಸಿಸಿರುತ್ತಾರೆ.
ಸಾರ್ವಜನಿಕರ ಗಮನಕ್ಕೆ: ಯಾವುದೇ ತುರ್ತು ಸೇವೆಗೆ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ
