ದಾವಣಗೆರೆ : ಕಾಂಗ್ರೆಸ್ಸಿಗೆ ದಲಿತರು ಕೇವಲ ಮತಬ್ಯಾಂಕ್. ಹಾಗೂ ಕಾಂಗ್ರೆಸ್ ಪಕ್ಷ ದಲಿತರನ್ನು ಗುಲಾಮರೆಂದು ತಿಳಿದಿದೆ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಮುಖಂಡ ಹಾಗೂ ಮಾಜಿ ತಾಪಂ ಸದಸ್ಯ ಆಲೂರು ಲಿಂಗರಾಜ್ ಟೀಕೆ ಮಾಡಿದ್ದಾರೆ
ಹಿಂದುಳಿದ ವರ್ಗಗಳ ಚಾಂಪಿಯನ್ ಸಿದ್ದರಾಮಯ್ಯನವರು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಶನಿವಾರ ಮೈಸೂರು ಮಹಾರಾಜ ಕಾಲೇಜ್ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ 2578 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಶಂಕುಸ್ಥಾಪನೆಗೆ ಚಾಲನೆ ನೀಡಿದ್ದಾರೆ.
ಆದರೆ ಈ ರೂ.2578 ಗಳಲ್ಲಿ ದಲಿತರಿಗೆ ಹಾಗೂ ದಲಿತರ ಅಭಿವೃದ್ಧಿಗಾಗಿ ಒಂದು ರೂಪಾಯಿ ಹಣವನ್ನು ಘೋಷಣೆಯಾಗದಿರುವುದು ಈ ರಾಜ್ಯದ ದಲಿತರ ದುರ್ದೈವ ಹಾಗೂ ನಕಲಿ ಅಹಿಂದ ನಾಯಕರು ಎಂದು ಆರೋಪಿಸಿದ್ದಾರೆ ರಾಜ್ಯದಲ್ಲಿ ಶೂನ್ಯ ಸಾಧನೆ, ಮಿತಿ ಮೀರಿದ ಭ್ರಷ್ಟಾಚಾರಕ್ಕೂ ಒಂದು ಸಮಾವೇಶ ಬೇಕೇ? ಸಿದ್ದರಾಮಯ್ಯನವರೇ ದಲಿತರ ವಿರೋಧಿ ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿನ ಶಾಸಕರು ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅವರೇ ಧ್ವನಿ ಎತ್ತಿದ್ದು ಸಾಧನೆ ಏನೂಆಗಿಲ್ಲ ಎಂದಿದ್ದಾರೆ. ತಾವು ಕ್ಷೇತ್ರಗಳಿಗೆ ಹೋಗಲಾಗುತ್ತಿಲ್ಲ ಎಂದು ಆರೋಪಿಸಿದ ಬಳಿಕ ಕೇವಲ ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಈ ಹಣದಲ್ಲಿ ದಲಿತರ ಅಭಿವೃದ್ಧಿಗೆ ಎಷ್ಟು ಮೀಸಲಿಡುತ್ತೀರಾ ಎಂದು ಹೇಳಬೇಕು ಎಂದು ಟೀಕಿಸಿದರು.
Read also : ನೇಕಾರರಿಗೆ ವಾರ್ಷಿಕ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನ
ಜನರ ಸಂಕಷ್ಟಗಳಿಗೆ ಸ್ಪಂದಿಸುವ ಸರ್ಕಾರವಲ್ಲ ಇದು ರಾಜ್ಯದ ಜನರು ಸರ್ಕಾರದ ಬಗ್ಗೆ ಬೇಸತ್ತು ಹೋಗಿದ್ದಾರೆ, ಜನರ ಅಸಮಾಧಾನದ ಮದ್ಯೆಯೇ ಶೂನ್ಯ ಸಾಧನೆಯ ಸಮಾವೇಶ ಮಾಡಲು ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಆಲೂರು ನಿಂಗರಾಜ್ ಪ್ರಕಟಣೆಯಲ್ಲಿ ಒತ್ತಾಯಿಸಿದರು.