ದಾವಣಗೆರೆ, ಅ.30 (Davanagere) : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಅಕ್ಟೋಬರ್ 31 ರಂದು ನಗರದ ಹೈಸ್ಕೂಲ್ ಮೈದಾನದಲ್ಲಿರುವ ಪಟಾಕಿ ವರ್ತಕರ ಮಳಿಗೆಗಳ ಮೂಲಕ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಒಂದು ಲಕ್ಷ ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಸಾರ್ವಜನಿಕರು ಪಟಾಕಿ ಖರೀದಿ ಸಮಯದಲ್ಲಿ ಪಟಾಕಿ ವರ್ತಕರ ಮಳಿಗೆಗಳಿಂದ ಮಾಸ್ಕ್‍ಗಳನ್ನು ಕೇಳಿ ಪಡೆಯಬಹುದು. ಹಾಗೂ ಸಾರ್ವಜನಿಕರಿಗೆ ಮಾಸ್ಕ್‍ಗಳ ಅವಶ್ಯಕತೆ ಇದ್ದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಕಚೇರಿ ಸಮಯದಲ್ಲಿ ಪ್ರತಿಯೊಬ್ಬರಿಗೆ ತಲಾ 2 ರಂತೆ ನೀಡಲಾಗುವುದೆಂದು ಪ್ರಧಾನ ಕಾರ್ಯದರ್ಶಿ ಆನಂದ್ ಜ್ಯೋತಿ ತಿಳಿಸಿದ್ದಾರೆ.
Read also : Davanagere | ಬ್ಯಾಂಕ್ ನಿಂದ ಗೃಹ ಸಾಲ ನೀಡಿಕೆ ವೇಳೆ ಒತ್ತಾಯ ಪೂರ್ವ ವಿಮಾ ಪಾಲಿಸಿ : ರೂ.88,344 ಪರಿಹಾರಕ್ಕೆ ಆದೇಶ