ದಾವಣಗೆರೆ.ನ.೧೧ (Davanagere): ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮ ದಿನದ ಅಂಗವಾಗಿ ರಾಜ್ಯಮಟ್ಟದಲ್ಲಿ ಮಕ್ಕಳ ದಿನಾಚರಣೆಯನ್ನು ಜವಾಹರ್ ಬಾಲ್ ಮಂಚ್ ವತಿಯಿಂದ ಬೆಂಗಳೂರಿನ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ನ.14 ರಂದು ಬೆಳಗ್ಗೆ 9.30 ಕ್ಕೆ ಆಯೋಜಿಸಲಾಗಿದೆ ಎಂದು ಮಂಚ್ ರಾಜ್ಯಾಧ್ಯಕ್ಷ ಹೆಚ್.ಜೆ. ಮೈನುದ್ದೀನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಚಿವರು ಭಾಗವಹಿಸಲಿದ್ದಾರೆ ಎಂದರು.
ಮಕ್ಕಳ ದಿನಾಚರಣೆಯ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಅದರಲ್ಲಿ ವಿಜೇತ ಮಕ್ಕಳಿಗೆ ಅಂದು ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಣೆಯನ್ನು ಮಾಡಲಾಗುವುದು. ದಾವಣಗೆರೆಯಲ್ಲೂ ಸಹ ಮಕ್ಕಳ ದಿನಾಚರಣೆಯ ಅಂಗವಾಗಿ ವಿವಿಧ ಶಾಲೆಗಳಲ್ಲಿ ಚಿತ್ರಕಲೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಈ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ನ.14 ರಂದು ಬೆಳಗ್ಗೆ 11 ಕ್ಕೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಲಿರುವ ಜವಾಹರ್ ಲಾಲ್ ನೆಹರು ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದ ಹಲವು ಮಕ್ಕಳು ವಿಶೇಷ ಸಾಧನೆಗಳನ್ನು ಮಾಡಿಯೂ ಸಹ ಸಮಾಜದಲ್ಲಿ ಗುರುತಿಸಿಕೊಳ್ಳಲು ಅಸಾಧ್ಯವಾಗಿದ್ದು, ಅಂತಹ ಮಕ್ಕಳಿಗೆ ನಮ್ಮ ವೇದಿಕೆಯು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಸನ್ಮಾನಿಸಲಿದೆ. ವಿಶೇಷ ಸಾಧನೆ ಮಾಡಿರುವ ಮಕ್ಕಳು ಹೆಸರು ನೋಂದಾಯಿಸಲು ಕರೆ ನೀಡಿದರು.ಹೆಚ್ಚಿನ ಮಾಹಿತಿಗೆ ಮೊ: 9632360919, 8095748005, 8050737458 ಸಂಪರ್ಕಿಸಲು ತಿಳಿಸಿದರು.
Read also : Davanagere | ಸದೃಢ ದೇಶ, ಸಮಾಜ ನಿರ್ಮಾಣಕ್ಕೆ ತಂಬಾಕು ಮುಕ್ತರಾಗೋಣ : ನ್ಯಾ.ಮಹಾವೀರ ಎಂ. ಕರೆಣ್ಣವರ
ಸುದ್ದಿಗೋಷ್ಠಿಯಲ್ಲಿ, ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ, ಲಿಯಾಕತ್ ಅಲಿ, ಮೊಹಮ್ಮದ್ ಸಾಧಿಕ್, ಸದ್ದಾಂ, ಅಮ್ಜದ್ ಖಾನ್, ಅಫ್ರೀದಿ, ಚಿರಂಜೀವಿ ಇತರರು ಉಪಸ್ಥಿತರಿದ್ದರು.