ದಾವಣಗೆರೆ (Davanagere): ನಗರದ ಚನ್ನಗಿರಿ ವಿರುಪಾಕ್ಷಪ್ಪ ಧರ್ಮಶಾಲಾಮಂಟಪದಲ್ಲಿ ಇತ್ತೀಚೆಗೆ ನಡೆದ 2024ನೇ ವರ್ಷದ ಕರ್ನಾಟಕ ಮುಕುಟಮಣಿ ರಾಜ್ಯಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು 69ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ನಗರದ ಸುವರ್ಣ ಕರ್ನಾಟಕ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಂತೋಷಕುಮಾರ್ ಕನ್ನಡಪರ ಹೋರಾಟ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಇವರಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ “ಕರ್ನಾಟಕ ಮುಕುಟಮಣಿ ರಾಜ್ಯಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಿರುತ್ತಾರೆ.
ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಗಣೇಶ್ ಸಾಲಿ ಗ್ರಾಮ ಗ್ರಾಮ ಶಣೈ, ಅಧ್ಯಕ್ಷರು ಎಚ್.ಕೆ.ಮಂಜುನಾಥ ಮಹಿಳಾ ಅಧ್ಯಕ್ಷರಾದ ಹೇಮಾ ಶಾಂತಮ್ಮ ಮತ್ತು ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು ಎಂದು ಸುವರ್ಣ ಕರ್ನಾಟಕ ವೇದಿಕೆಯ ರಾಜ್ಯಯುವ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ್ ಭೈರಪ್ಪ ತಿಳಿಸಿದ್ದಾರೆ.
Read also : Kannada Story | ಚಿನ್ನದ ಬಳೆಗಳು | ಸವಿತಾ ಎಸ್ ವೆಂಕಟೇಶ್