ದಾವಣಗೆರೆ (Davanagere): ಬೈಕ್ ಕೊಡಿಸದಿದ್ದಕ್ಕೆ ಬೇಸತ್ತು ಪ್ರಥಮ ಪಿಯುಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.
ನ್ಯಾಮತಿ ಪಟ್ಟಣದ 20 ವರ್ಷದ ವಿಕಾಸ್ ಆತ್ಮಹತ್ಯೆಗೆ ಶರಣಾದ ಯುವಕ.
ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡಿ ತಂದೆಯೊಂದಿಗೆ ಕೆಲಸ ಮಾಡಿಕೊಂಡಿದ್ದ ವಿಕಾಸ್ ಬೈಕ್ ಕೊಡಿಸುವಂತೆ ಪೋಷಕರಲ್ಲಿ ಕೇಳಿಕೊಂಡಿದ್ದಾನೆ. ಸ್ವಲ್ಪ ಕಷ್ಟವಿದ್ದ ಕಾರಣ ಹಣ ಬಂದ ಕೂಡಲೇ ಬೈಕ್ ಕೊಡಿಸುವುದಾಗಿ ಪೋಷಕರು ಹೇಳಿದ್ದಾರೆ. ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ. ಯಾರೊಟ್ಟಿಗೂ ಮಾತನಾಡುತ್ತಿರಲಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ಆದರೆ, ಬೈಕ್ ಕೊಡಿಸದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ವಿಕಾಸ್, ಬೈಕ್ ಕೊಡಿಸುವಂತೆ ಪದೇ ಪದೇ ಪೋಷಕರನ್ನು ಪೀಡಿಸುತ್ತಿದ್ದ. ಕುಂಕುವ ಗ್ರಾಮದ ಅವರ ಅಣ್ಣನ ಮನೆಗೆ ಹೋದಾಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಕಾರಿಯಾಗದೇ ಮತಪಟ್ಟಿದ್ದಾನೆ ಎಂದು ಮೃತನ ತಂದೆ ರಾಜಪ್ಪ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read also : accident news | ರಸ್ತೆ ಅಪಘಾತ: ಬೈಕ್ ಸವಾರ ಸಾವು