ದಾವಣಗೆರೆ: ಡಿ. 16 (Davanagere): ಪ್ರತಿವರ್ಷದಂತೆ ಈ ವರ್ಷವೂ ಸೂಫಿ ಸಂತರದ ಹಜರತ್ ಸೈಯದ್ ಚಮನ್ ಶಾವಲಿ (ರ. ಅ) ರವರ ಸಂಭ್ರಮದ ಸಂದಲ್ ಮತ್ತು ಉರುಸ್ ಡಿ.18ಮತ್ತು 19 ರಂದು ನಡೆಯಲಿದ್ದು ಸೂಕ್ತವಾದ ಪೊಲೀಸ್ ಬಂದೋಬಸ್ತ್ ಒದಗಿಸಿ ಕೊಡುವಂತೆ ದೊಡ್ಡಬಾತಿ ಮುಸ್ಲಿಂ ಒಕ್ಕೂಟದ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವರ್ಷವು ಸಂಭ್ರಮದ ಸಂದಲ್ (ಗಂದ)ವನ್ನು ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬುಧವಾರ ಸಂಜೆಯಿAದ ಸಂತರ ದರ್ಗಾಕ್ಕೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪ್ರಚೋದನಕಾರಿ ಘೋಷಣೆ ಕೂಗುತ್ತಾ ಪ್ರಚೋದಿಸುವ ಮತ್ತು ಉತ್ತೇಜಿಸುವ ಉದ್ದೇಶದೊಂದಿಗೆ ಶಾಂತಿ ಕದಡಲು ಪ್ರಯತ್ನಿಸಬಹುದು. ವಾತಾವರಣವನ್ನು ಕದಡಲು ಪ್ರಯತ್ನಿಸುವ ಮತ್ತು ಪ್ರಚೋದನಕಾರಿ ಘೋಷಣೆ ಕೂಗುವ ವ್ಯಕ್ತಿಗಳ ಮೇಲೆ ಮುಲಾಜು ಇಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು.ಹೆಚ್ಚಿನ ಪೊಲೀಸರ ನಿಯೋಜಿಸಿ ಶಾಂತಿಯುತ ಉರುಸ್ ನಡೆಸಿಕೊಡಲು ಮನವಿ ಮಾಡಲಾಯಿತು.
ದೊಡ್ಡಬಾತಿ ಮುಸ್ಲಿಂ ಒಕ್ಕೂಟದ ಕನ್ವೀನಿಯರ್ ಹಾಗೂ ಎಸ್‌ಡಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಮತ್ತು ಒಕ್ಕೂಟದ ಸದಸ್ಯರು, ತಂಜಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಸೈಯದ್ ಹಾಕಿ ಆರೀಫ್, ಸಾಜಿದ್ ಅಹ್ಮದ್, ಹಾಗೂ ದರ್ಗಾ ಕಮಿಟಿ ಸದಸ್ಯರಾದ ಝಬಿ ಹಜರತ್ ಹಜರತ್, ಸೈಯದ್ ರಿಯಾಜ್, ಸೈಯದ್ ಮುನೀರ್ ಮತ್ತು ಇತರರು ಉಪಸ್ಥಿತರಿದ್ದರು.
Read also : Political analysis | ವಿಜಯೇಂದ್ರ ಟೀಮಿಗೆ ಸರ್ಜರಿ ಫಿಕ್ಸ್