Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಇಹಲೋಕಕ್ಕೆ ವಿದಾಯ ಹೇಳಿದ ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಕಿರು ಪರಿಚಯ
ಅಭಿಪ್ರಾಯ

ಇಹಲೋಕಕ್ಕೆ ವಿದಾಯ ಹೇಳಿದ ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಕಿರು ಪರಿಚಯ

Dinamaana Kannada News
Last updated: December 27, 2024 5:50 am
Dinamaana Kannada News
Share
Former Prime Minister Manmohan Singh
Former Prime Minister Manmohan Singh
SHARE

ಮನಮೋಹನ್ ಸಿಂಗ್ ವಿಶ್ವದ ಅತ್ಯಂತ ಪ್ರಮುಖ ಆರ್ಥಿಕ ತಜ್ಞರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಭಾರತೀಯ ಅರ್ಥಶಾಸ್ತ್ರಜ್ಞರಾಗಿದ್ದರು ಹಾಗೂ ನಂತರ ದೇಶದ ರಾಜಕೀಯ ನಾಯಕತ್ವ ವಹಿಸಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ 2004 ರಿಂದ 2014 ರವರೆಗೆ ಭಾರತದ 13 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಆರಂಭಿಕ ಜೀವನ ಮತ್ತು ಶಿಕ್ಷಣ

ಮನಮೋಹನ್ ಸಿಂಗ್ ಅವರು ಸೆಪ್ಟೆಂಬರ್ 26, 1932 ರಂದು ಬ್ರಿಟಿಷ್ ಆಡಳಿತದಲ್ಲಿದ ಭಾರತದ ಪಂಜಾಬ್‌ನ ಗಾಹ್‌ನಲ್ಲಿ ಜನಿಸಿದರು ( ಈಗ ಪಾಕಿಸ್ತಾನದಲ್ಲಿದೆ ). ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ನಂತರ ಲಂಡನ್’ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು ತಮ್ಮ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಗಳಿಸಿದರು.

ವೃತ್ತಿ :

ಮನಮೋಹನ್ ಸಿಂಗ್ ಅವರ ವೃತ್ತಿಜೀವನವು ಐದು ದಶಕಗಳವರೆಗೆ ವ್ಯಾಪಿಸಿದೆ, ಈ ಅವಧಿಯಲ್ಲಿ ಅವರು ಶೈಕ್ಷಣಿಕ, ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ಕೆಲವು ಗಮನಾರ್ಹ ಸ್ಥಾನಗಳು ಇಂತಿವೆ:

  • 1. ವಿದೇಶಿ ವ್ಯಾಪಾರ ಸಚಿವಾಲಯದ ಆರ್ಥಿಕ ಸಲಹೆಗಾರ (1971-1972)
  • 2. ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ (1972-1976)
  • 3. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ (1982-1985)
  • 4. ಯೋಜನಾ ಆಯೋಗದ ಉಪಾಧ್ಯಕ್ಷ (1985-1987)
  • 5. ಭಾರತದ ಹಣಕಾಸು ಮಂತ್ರಿ (1991-1996)
  • 6. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (1998-2004)
  • 7. ಭಾರತದ ಪ್ರಧಾನ ಮಂತ್ರಿ (2004-2014)

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಾಧನೆಗಳು

ಪ್ರಧಾನಿಯಾಗಿದ್ದಾಗ, ಮನಮೋಹನ್ ಸಿಂಗ್ ಅವರು ಹಲವಾರು ಮಹತ್ವದ ನೀತಿಗಳು ಮತ್ತು ಉಪಕ್ರಮಗಳನ್ನು ಜಾರಿಗೆ ತಂದರು, ಅವುಗಳೆಂದರೆ :

  • 1. ಆರ್ಥಿಕ ಉದಾರೀಕರಣ ಮತ್ತು ಸುಧಾರಣೆಗಳು
  • 2. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (NREGA)
  • 3. ಮಾಹಿತಿ ಹಕ್ಕು ಕಾಯಿದೆ (RTI)
  • 4. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (NRHM)
  • 5. ಅಮೇರಿಕಾ(USA)ದ ಜೊತೆ ಭಾರತದ ಪರಮಾಣು ಒಪ್ಪಂದ

ಪ್ರಶಸ್ತಿಗಳು ಮತ್ತು ಗೌರವಗಳು :

ಮನಮೋಹನ್ ಸಿಂಗ್ ಅವರು ಅರ್ಥಶಾಸ್ತ್ರ, ರಾಜಕೀಯ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಕೊಡುಗೆಗಳಿಗಾಗಿ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ, ಅವುಗಳೆಂದರೆ :

  • 1. ಪದ್ಮವಿಭೂಷಣ (1987)
  • 2. ಅಂತಾರಾಷ್ಟ್ರೀಯ ತಿಳುವಳಿಕೆಗಾಗಿ ಜವಾಹರಲಾಲ್ ನೆಹರು ಪ್ರಶಸ್ತಿ (1996)
  • 3. ವರ್ಷದ ಹಣಕಾಸು ಸಚಿವರಿಗೆ ಏಷ್ಯಾ ಮನಿ ಪ್ರಶಸ್ತಿ (1993, 1994)
  • 4. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ಗಳು

ಮನಮೋಹನ್ ಸಿಂಗ್ ಅವರು ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರು ಭಾರತದ ಆರ್ಥಿಕ ನೀತಿಗಳ ಗಹನ ಅಧ್ಯಯನ ಹಾಗೂ ಅನುಭವ ಉಳ್ಳವರಾಗಿದ್ದು. ಅವುಗಳ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಭಾರತದ ಪ್ರಧಾನಿಯಾಗುವ ಮೊದಲು ಅನೇಕ ಜಾಗತಿಕ ಆರ್ಥಿಕ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಮನಮೋಹನ ಸಿಂಗ್ ಅವರು 1966 ರಿಂದ 1969 ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‌ಮೆಂಟ್ (UNCTAD) ನೊಂದಿಗೆ ಕೆಲಸ ಮಾಡಿದರು. ಅವರು 1987 ರಲ್ಲಿ ಸ್ವತಂತ್ರ ಆರ್ಥಿಕತೆಯ ಕುರಿತ ನೀತಿ ಚಿಂತಕರ ಚಾವಡಿಯಾದ ದಕ್ಷಿಣ ಆಯೋಗ (South Commission) ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು.

Read also : ಪ್ಲಾಸ್ಟಿಕ್ ಕಪ್, ಮೇಣಲೇಪಿತ ಪೇಪರ್ ಲೋಟ, ಕ್ಯಾರಿ ಬ್ಯಾಗ್ ನಿಷೇಧ.

ಆರ್ಥಿಕ ನೀತಿ ಮತ್ತು ಸುಧಾರಣೆಯಲ್ಲಿ ಸಿಂಗ್ ಅವರ ಅನುಭವವು ಮಹತ್ವದ್ದಾಗಿದೆ, ವಿಶೇಷವಾಗಿ 1991 ರಿಂದ 1996 ರವರೆಗೆ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ. ಅವರು ಭಾರತದ ಆರ್ಥಿಕತೆಯನ್ನು ಉದಾರೀಕರಣ ಗೊಳಿಸುವಲ್ಲಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.

ಮನಮೋಹನ್ ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕುಟುಂಬದ ಆರ್ಥಿಕ ಸಂಘರ್ಷದ ನಡುವೆಯೂ ಕ್ಲಿಷ್ಟಕರ ಪರೀಸ್ಥಿತಿಯಲ್ಲಿ ಅತ್ಯುನ್ನತ ಶಿಕ್ಷಣವನ್ನು ಗಳಿಸಿದರು, ಆದರೆ ಅದನ್ನೇಲ್ಲಿಯೂ ಅವರು ಹೇಳಿಕೊಳ್ಳಲ್ಲಿಲ್ಲ. ಯಾವುದೇ ಸಂದರ್ಭದಲ್ಲಿಯೂ ತಮ್ಮ ಸರಳತೆ ಮತ್ತು ನಮ್ರತೆಯನ್ನು ಕಳೆದುಕೊಳ್ಳದ ಅವರು, ಸಮಗ್ರ ಜೀವನ ನಡೆಸಿದರು.

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವೇದಿಕೆ ನಿಕಟಪೂರ್ವ ಅದ್ಯಕ್ಷರಾದ ಪ್ರೊ ಭೀಮಣ್ಣ.ಸುಣಗಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಗ್ರಹ: ಪ್ರೊ ಭೀಮಣ್ಣ.ಸುಣಗಾರ 

ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು  ದಾವಣಗೆರೆ.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಮನಮೋನ್ ಸಿಂಗ್ ಜೀವನಮನಮೋಹನ್ ಸಿಂಗ್
Share This Article
Twitter Email Copy Link Print
Previous Article Davanagere ನಗರದ ಬಹುತೇಕ ಕಡೆ ಡಿ.28 ರಂದು ಬೆಳಿಗ್ಗೆ 10  ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ
Next Article DAVANAGERE ಆರ್ಥಿಕ ಬಿಕ್ಕಟ್ಟು ಮೆಟ್ಟಿ ನಿಂತ ಆರ್ಥಿಕ ತಜ್ಞ ಅಸ್ತಂಗತ: ಜಿ. ಬಿ. ವಿನಯ್ ಕುಮಾರ್ ಸಂತಾಪ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಮಕ್ಕಳ ಸುರಕ್ಷತೆಗಾಗಿ ನಿಯಮಗಳ ಪಾಲನೆ ಕಡ್ಡಾಯ : ಡಿಸಿ

ದಾವಣಗೆರೆ (Davanagere) : ಜಿಲ್ಲೆಯಲ್ಲಿನ ವಿವಿಧ ಶಾಲೆಗಳಿಗೆ ಕರೆದುಕೊಂಡು ಹೋಗುವ ಶಾಲಾ ವಾಹನಗಳು ಮಕ್ಕಳ ರಕ್ಷಣೆ ದೃಷ್ಟಿಯಿಂದ ಸುರಕ್ಷತಾ ಕ್ರಮ…

By Dinamaana Kannada News

Davangere | ಆರೋಗ್ಯ ಭಾಗ್ಯವನ್ನು ಕೊಡುವವನು ಧನ್ವಂತರಿ : ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರ್

ದಾವಣಗೆರೆ  (Davangere) :  ‘ಧನ್ವಂ ತರತೀ ಇತೀ ಧನ್ವಂತರಿ’ – ಅಂದರೆ ಪಾಪವನ್ನು ಕಳೆಯುವವನು, ದೋಷವನ್ನು ದೂರ ಮಾಡುವವನು, ಅನಾರೋಗ್ಯವನ್ನು…

By Dinamaana Kannada News

ಬೆಂಗಳೂರು ಕಂದಾಯ ಆಡಳಿತವಿಭಾಗಮಟ್ಟದ ಸಂಪುಟಸಭೆ ದಾವಣಗೆರೆಯಲ್ಲಿ ನಡೆಸಲಿ : ಕಲ್ಲೇಶ್ ರಾಜ್ ಪಟೇಲ್

ದಾವಣಗೆರೆ (Davanagere): ಕರ್ನಾಟಕ ಸರ್ಕಾರದ ಬೆಂಗಳೂರು ಕಂದಾಯ ಆಡಳಿತವಿಭಾಗಮಟ್ಟದ ಸಂಪುಟಸಭೆ (ಕ್ಯಾಬಿನೆಟ್ ಮೀಟಿಂಗ್) ದಾವಣಗೆರೆಯಲ್ಲಿ ನಡೆಸಲಿ ಎಂದು ಕೆಪಿಸಿಸಿ ಸದಸ್ಯ…

By Dinamaana Kannada News

You Might Also Like

Dr. Prabha Mallikarjun
ತಾಜಾ ಸುದ್ದಿ

ಆಪರೇಷನ್ ಸಿಂಧೂರ್ ಯಶಸ್ಸು; ನಗರದೇವತೆಗೆ ಸಂಸದರಿಂದ ವಿಶೇಷ ಪೂಜೆ

By Dinamaana Kannada News
Davanagere
Blogತಾಜಾ ಸುದ್ದಿ

Davanagere | ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

Davanagere | ಜಿ ಆರ್  ಕುಸುಮಗೆ ರಾಗಾಆವಿವಿವಿ ದಿಂದ ಡಾಕ್ಟರೇಟ್ ಪದವಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ತಾಲ್ಲೂಕು ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?