ದಾವಣಗೆರೆ (Davanagere): ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ದಾವಣಗೆರೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ (ಎಚ್‍ಕೆಆರ್ ಬಣ)ದ ಆಶ್ರಯದಲ್ಲಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 1.40 ಲಕ್ಷ ಕಾರ್ಯಕರ್ತೆಯರು ಮಕ್ಕಳ ಪೌಷ್ಠಿಕ ಅಹಾರ, ಲಾಲನೆ, ಪಾಲನೆ, ಆರೋಗ್ಯ, ಶಾಲಾ ಪೂರ್ವ ಶಿಕ್ಷಣ ನೀಡುವುದು ಸೇರಿದಂತೆ ಗರ್ಭೀಣಿ, ಬಾಣಂತಿಯರ ಪೂರಕ ಪೌಷ್ಠಿಕ ಆಹಾರ ಆರೋಗ್ಯದ ಕಾಳಜಿ ವಹಿಸುವ ಮೂಲಕ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆಗೆ ತಕ್ಕಂತೆ ಪ್ರತಿಫಲ ದೊರೆಯುತ್ತಿಲ್ಲ ಎಂದು ಜಿಲ್ಲಾ ಮುಖಂಡರಾದ ವಿಶಾಲಕ್ಷಿ ಮೃತ್ಯುಂಜಯ ಅಸಮಾಧಾನ ವ್ಯಕ್ತಪಡಿಸಿದರು.
ಬೇಡಿಕೆಗಳು :
ಕನಿಷ್ಠ ವೇತನ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ನೀಡಬೇಕು
ನಿವೃತ್ತರಾದ ಎಲ್ಲರಿಗೂ ಗ್ರ್ಯಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು
ಸೇವೆಯನ್ನು ನಾಗರೀಕ ಸೇವೆ ಎಂದು ಪರಿಗಣಿಸಿ ಸಿ ಮತ್ತು ಡಿ ದರ್ಜೆ ನೌಕರರ ಸ್ಥಾನಮಾನ ನೀಡುವ ಮೂಲಕ ಖಾಯಂಗೊಳಿಸಬೇಕು
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷರಾದ ಎಂ ಸರ್ವಮ್ಮ, ವಿಮಲಾಕ್ಷಿ, ಸುಶೀಲ ಹಾಗೂ ಮುಖಂಡಾದ ಜೆ.ಎಂ.ಉಮಾ, ಕಾಳಮ್ಮ ಪುಷ್ಪ ಸೇರಿದಂತೆ ಕಾರ್ಯಕರ್ತೆರು ಭಾಗವಹಿಸಿದ್ದರು.
Read also : Davanagere | ಅತ್ಯಾಚಾರ ಪ್ರಕರಣ : ಆರೋಪಿಗೆ 21 ವರ್ಷ ಕಾರಾಗೃಹ ಶಿಕ್ಷೆ