ಜಗಳೂರು (Davanagere): ಜಗಳೂರು ಠಾಣಾ ವ್ಯಾಪ್ತಿಯ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು 112 ಹೊಯ್ಸಳ ಅಧಿಕಾರಿ ಸಿಬ್ಬಂದಿಗಳ ಕ್ಷಿಪ್ರ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಜ.27 ರಂದು ಹೊಯ್ಸಳ 112ರ ರಾತ್ರಿ ಉಸ್ತುವಾರಿ ಅಧಿಕಾರಿ ಮಂಜುನಾಥ ಪ್ರಸಾದ್ ಎ ಮತ್ತು ಚಾಲಕ ಹಾಲೇಶ್ ರಾತ್ರಿ 11:00 ಸಮಯದಲ್ಲಿ ಅಣಬೂರು ಗೊಲ್ಲರಹಟ್ಟಿಯ ಆಂಜನೇಯ ಸ್ವಾಮಿ ಕಳ್ಳತನ ಮಾಡುತ್ತಿದ್ದಾರೆ ಎನ್ನುವ ಕರೆ ಬಂದ 2-3 ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ.
ಈ ವೇಳೆ ದೇವಸ್ಥಾನದ ಹುಂಡಿಯನ್ನು ಹೊಡೆಯುತ್ತಿದ್ದ ಮೂರು ಆರೋಪಿತರನ್ನು ಹಾಗೂ ಕೃತ್ಯ ವೆಸಗಲು ಬಳಸಿದ್ದ ಕೆಎ16 ಇಎ 4081 ನೇ ಮೋಟಾರ್ ಬೈಕ್ ಹಾಗೂ ಹುಂಡಿಯನ್ನು ಹೊಡೆಯಲು ತಂದಿದ್ದ ಒಂದು ಕಬ್ಬಿಣದ ರಾಡ್ ಮತ್ತು ಒಂದು ಹುಳಿ ಒಂದು ಸ್ಕ್ರೂ ಡ್ರೈವರ್ ವಶಪಡಿಸಿಕೊಂಡಿದ್ದಾರೆ.
ನಾಗರಾಜ್, ಶೀವಪ್ಪ ಎಂ, ನರಸಿಂಹಪ್ಪ ಬಂಧಿತ ಆರೋಪಿಗಳು.
ಆರೋಪಿತರನ್ನು ಠಾಣೆಯ ಜಗಳೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಷ್ಟ್ರಪತಿ ಹೆಚ್ ಎಸ್ ಅವರ ಬಳಿ ಹಾಜರಪಡಿಸಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ಹಲವು ದೇವಾಸ್ಥಾನಗಳ ಹುಂಡಿ ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ಮುಂದುವರೆದಿದೆ.
ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಲು ತಿಳಿಸಿದ್ದಾರೆ.
Read also : ಸುಕನ್ಯಾ ಸಮೃದ್ದಿ ಯೋಜನೆ ದುರುಪಯೋಗ : ಅಂಚೆ ಪಾಲಕನಿಗೆ ಶಿಕ್ಷೆ