ದಾವಣಗೆರೆ (Davanagere) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಜಾದ್ ನಗರ 9 ಮತ್ತು 12ನೇ ವಾರ್ಡ್ ಬ್ರಾಂಚ್ ಸಮಿತಿ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 12ನೇ ವಾರ್ಡ್ ಆಜಾದ್ ನಗರ ಮುಖ್ಯ ರಸ್ತೆಯಲ್ಲಿ 2021-22 ಸಾಲಿನ 15ನೇ ಹಣಕಾಸು ಆಯೋಗದ ಜನರಲ್ ಬೇಸಿಕ್ ಗ್ರಾಂಟ್ ನಲ್ಲಿ ಅಂದಾಜು 9 ಲಕ್ಷ ಹಣವನ್ನು ವಿನಿಯೋಗಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿತ್ತು. ಆದರೆ ಇದು ಕಳೆದ 1 ವರ್ಷ ದಿಂದ ಕೆಟ್ಟ ನಿಂತು ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ, ಇದನ್ನೇ ನಂಬಿಕೊಂಡಿದ್ದ ಸ್ಥಳೀಯರು ನಗರದ ಬೇರೆ ಬೇರೆ ಕಡೆ ಹೋಗಿ ಕುಡಿಯುವ ನೀರು ತರುವ ದುಸ್ಥಿತಿ ಎದುರಾಗಿದೆ. ಮತ್ತು 9 ಮತ್ತು 12ನೇ ವಾರ್ಡಿನ ಕಾರ್ಪೊರೇಟರ್ ಗಳು ತಮಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ . ಲಕ್ಷ ಲಕ್ಷ ಸಾರ್ವಜನಿಕರ ತೆರಿಗೆ ಹಣವನ್ನು ವಿನಿಯೋಗಿಸಿ ನಿರ್ಮಿಸಿದ ಈ ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಮತ್ತು ಜನರ ಸಂಕಷ್ಟದ ಬಗೆಗೆ ಮಾಹಿತಿಯೊಂದಿಗೆ ಆಯುಕ್ತರಿಗೆ ವಿವರಿಸಿ, ಶೀಘ್ರವಾಗಿ ಮುತುವರ್ಜಿ ವಹಿಸಿ ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಕ್ರಮ ವಹಿಸಬೇಕಾಗಿ ಆಗ್ರಹಿಸಲಾಯಿತು.
ಆಜಾದ್ ನಗರ 9 ಮತ್ತು 12ನೇ ವಾರ್ಡಿನ ಬ್ರಾಂಚ್ ನ ಪದಾಧಿಕಾರಿಗಳು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್. ತಾಹೀರ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಏಜಾಜ್ ಅಹಮದ್ ರವರು ಉಪಸ್ಥಿತರಿದ್ದರು.