ದಾವಣಗೆರೆ (Davanagere): ಒಗ್ಗಟ್ಟಿನಿಂದ ಸಾಧಿಸಲಾದ್ದನ್ನು ಸಾಧಿಸಬಹದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ಹಳೇ ಕುಂದವಾಡ ಗ್ರಾಮದಲ್ಲಿನ ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟನೆ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ನೆನೆಗುದಿಗೆ ಬಿದ್ದಿದ್ದ ಹಳೇ ಕುಂದುವಾಡದ ಆಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ಈಗ ಕಾಯಕಲ್ಪ ಮೂಡಿ ಬಂದಿದ್ದು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ಮೂಡಿ ಬಂದಿವೆ. ಈ ಹಿಂದೆ ನಗರ ಪ್ರದೇಶಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡುವಾಗಲು ತೊಡಕುಗಳು ಬಂದಿದ್ದವು, ಆಗಲು ಹಳೇ ಕುಂದುವಾಡ ಹಿರಿಯ ಗ್ರಾಮಸ್ಥರು ನನ್ನ ಬೆನ್ನು ತಟ್ಟಿ ಬೆಂಬಲಿಸಿದ್ದರಿಂದ ಈಗ ಕುಡಿಯುವ ಬೃಹತ್ ಘಟಕ ನಿರ್ಮಾಣ ಆಗಿದೆ. ಕಾಂಗ್ರೆಸ್ ಪಕ್ಷವು ಬಡವರ ಪಕ್ಷವಾಗಿದೆ, ದೀನ ದಲಿತರ, ದಮನಿತರ ಅಭಿವೃದ್ಧಿಗೆ ಉತ್ತಮ ಕಾರ್ಯಗಳು ಪಕ್ಷದಿಂದ ನಡೆಯುತ್ತಿವೆ. ಅಭಿವೃದ್ಧಿ ಕಾರ್ಯಗಳಿಗೆ ಕುಂದುವಾಡ ಸೇರಿದಂತೆ ಪ್ರತಿಯೊಬ್ಬರ ಸಹಕಾರವಿರಲಿ ಎಂದರು.
ರಾಷ್ಟ್ರೀಯ ಹೆದ್ದಾರಿಯವರು ರಸ್ತೆ ಕಾಮಗಾರಿಯ ವೇಳೆ ಅಂಡರ್ ಪಾಸ್ ಚಿಕ್ಕದಾಗಿ ಕಟ್ಟಿದ್ದಾರೆ ಎಂದು ಊರಿನವರು ಹೋರಾಟ ಮಾಡುತ್ತಿರುವಿರಿ. ಶಾಮನೂರು ಬಡಾವಣೆಯವರು ಹೋರಾಟ ಮಾಡಿದ ಫಲವಾಗಿ ಉತ್ತಮ ಅಂಡರ್ ಪಾಸ್ ರಸ್ತೆ ನಿರ್ಮಾಣವಾಗಿದೆ. ಅಧಿಕಾರಿಗಳು ಮಾತು ಕೇಳಬೇಕು ಎಂದರೆ ಹೋರಾಟವು ಅಗತ್ಯವಾಗಿದೆ. ಇಲ್ಲವಾದಲ್ಲಿ ಅಧಿಕಾರಿಗಳು ಮಾತು ಕೇಳುವುದಿಲ್ಲ ಎಂದು ತಿಳಿಸಿದ ಸಚಿವರು, ನಿಮ್ಮೆಲ್ಲರ ಹೋರಾಟಕ್ಕೆ ನಮ್ಮ ಬೆಂಬಲವು ಇದೆ ಎಂದರು.
ಈ ವೇಳೆ ಶ್ರೀಗಳು, ಹಳೇ ಕುಂದುವಾಡ ಬಡಾವಣೆಯ ಮುಖಂಡರುಗಳು, ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮಸ್ಥರು ಇತರರು ಇದ್ದರು.
Read also : Crime news | ವೃದ್ಧ ಮಹಿಳೆಯ ಸರಗಳ್ಳತನ ಮಾಡಿದ್ದ ಆರೋಪಿತನ ಬಂಧನ