ದಾವಣಗೆರೆ (Davanagere): ಜೀವನ್ ಭೀಮಾನಗರಲ್ಲಿ ಬೈಕ್‌ನಲ್ಲಿ ಬಂದು ಮಹಿಳೆಯ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಕೆಟೆಜೆ ನಗರ ಪೊಲೀಸರು ಬಂಧಿಸಿದ್ದಾರೆ.
ತೋಳಹುಣಸೆ ಗ್ರಾಮ ಗಜೇಂದ್ರ.ಕೆ, ಉಚ್ಚಂಗಿದುರ್ಗ ಗ್ರಾಮ, ಹನುಮಂತನಾಯ್ಕ ಬಂಧಿತ ಆರೋಪಿಗಳು.
ಕಳೆದ ವರ್ಷ 25.02.2023 ರಂದು ನಾಗರತ್ನ ಜಿ ಎಸ್ ಮಹಿಳೆ ಜೀವನ್ ಭೀಮಾನಗರದ 2ನೇ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಬ್ಬರು ಬೈಕಿನಲ್ಲಿ ಬಂದು ಕೊರಳಲ್ಲಿದ್ದ 35 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಎಸ್ಪಿ ಉಮಾಪ್ರಶಾಂತ ಮತ್ತು ಎಎಸ್ಪಿಗಳಾದ
ವಿಜಯಕುಮಾರ್ ಎಂ.ಸಂತೋ಼ಷ್. ಮಂಜುನಾಥ್. ಜಿ. ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ.ಬಿ. ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳ ತಂಡ ಭೂಮಿಕಾ ನಗರ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ ಆರೋಪಿತರು ಸುಲಿಗೆ ಮಾಡಿಕೊಂಡು ಹೋಗಿದ್ದ 2,50,000/- ರೂ ಬೆಲೆ ಬಾಳುವ 34.730 ಗ್ರಾಂ ಬಂಗಾರದ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ಕಳ್ಳತನ ಮಾಡಿಕೊಂಡು ಬಂದ 1,00,000/- ಬೆಲೆ ಬಾಳುವ ಪಲ್ಸರ್ ಬೈಕ್ ಒಟ್ಟು 3,50,000/-ರೂ ಬೆಲೆಯ ಬಂಗಾರದ ಸರ ಮತ್ತು ಪಲ್ಸರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ಪಿ.ಎಸ್.ಐ ಲತಾ.ಆರ್ ಹಾಗು ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ. ಶ್ರೀಮತಿ ಗೀತಾ. ಮತ್ತು ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನ ಸಿಬ್ಬಂದಿ ಮಾರುತಿ ಮತ್ತು ಸೋಮು ರವರನ್ನು ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ