ದಾವಣಗೆರೆ (Davanagere) : ಅಧಿಕಾರಿಗಳು ನೊಂದವರ ಧ್ವನಿಯಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ನಗರದ ಗೃಹ ಕಚೇರಿಯಲ್ಲಿ ಚನ್ನಗಿರಿ ತಾಲ್ಲೂಕಿನ ನೂತನ ತಹಶಿಲ್ದಾರ್ ಆಗಿ ನೇಮಕವಾಗಿರುವ ನಾಗರಾಜ್ ಎನ್.ಜಿ ಅವರಿಗೆ ಶುಭವನ್ನು ತಿಳಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಹಲವು ಭಾಗಗಲ್ಲಿ ಜಮೀನು, ನಿವೇಶನಗಳು ಹಾಗೂ ಇತರೆ ಪ್ರದೇಶಗಳು ಒತ್ತುವರಿಯಾಗಿರುವ ಕುರಿತು ದೂರುಗಳು ಕೇಳಿ ಬರುತ್ತಿದ್ದು ಒತ್ತುವರಿ ಪ್ರದೇಶಗಳನ್ನು ರಕ್ಷಣೆ ಮಾಡುವುದರ ಜತೆಗೆ ಜನತೆಯ ನೆಚ್ಚಿನ ಅಧಿಕಾರಿಗಳಾಗಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಇತರರು ಉಪಸ್ಥಿತರಿದ್ದರು.