ದಾವಣಗೆರೆ ಮಾ.20 (Davanagere )– ರಾಜೀವ್ ಗಾಂಧಿ ವಸತಿ ನಿಗಮ, ಮನೆ ವಸತಿ ಯೋಜನೆಗಳ ಅನುಸಾರ ವಸತಿ-ರಹಿತರನ್ನು ಗುರುತಿಸಿ ಮಾಹಿತಿಯನ್ನು ಭೌತಿಕವಾಗಿ ಸಂಗ್ರಹಿಸಿ ನಿಗದಿತ ನಮೂನೆಯಲ್ಲಿ ತುರ್ತಾಗಿ ವರದಿ ಸಲ್ಲಿಸಲು ಮಹಾನಗರಪಾಲಿಕೆಯ ಕರ ವಸೂಲಿಗಾರರು, ವಿಷಯ ನಿರ್ವಾಹಕರು, ಕಂದಾಯ ನಿರೀಕ್ಷಕರು ಹಾಗೂ ಪಾಲಿಕೆಯ ಇತರೆ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಈ ಅಧಿಕಾರಿ, ನೌಕರರು ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ಬೇಡಿಕೆ ಸಮೀಕ್ಷೆ ಸರ್ವೇ ಪ್ರಕಾರ 29379 ನಿವೇಶನ, ವಸತಿ ರಹಿತರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಆನ್‍ಲೈನ್ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ಫಲಾನುಭವಿಗಳ ಮನೆ ಮನೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದು, ಫಲಾನುಭವಿಗಳು ಮಾಹಿತಿ ಮಾತ್ರ ನೀಡಬೇಕು. ಸರ್ಕಾರದ ಅಧಿಸೂಚನೆಯಂತೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಒಂದು ವೇಳೆ ಮಾಹಿತಿ ಜೊತೆಗೆ ಪಾಲಿಕೆಯ ಅಧಿಕಾರಿ, ನೌಕರರು ಹಾಗೂ ಯಾವುದೇ ಮಧ್ಯವರ್ತಿಗಳು ಹಣ ನೀಡುವಂತೆ ಬೇಡಿಕೆ ಇಟ್ಟರೆ, ಅಂತಹವರ ವಿರುದ್ಧ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ.
Read also : ಇಂದಿನಿಂದ ಏಪ್ರಿಲ್14 ರವರೆಗೆ “ಸಕ್ಷಮ” ಉಚಿತ ಸಿಇಟಿ ತರಗತಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಒಂದು ವೇಳೆ ಫಲಾನುಭವಿಗಳು ಅಧಿಕಾರಿ, ನೌಕರರು, ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋದಲ್ಲಿ ಅದಕ್ಕೆ ಪಾಲಿಕೆಯು ಜವಾಬ್ದಾರರಾಗುವುದಿಲ್ಲ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.