ಹರಿಹರ (Harihara): ವೃದ್ದೆಯೊಬ್ಬರು ರೈಲು ಹಳಿ ದಾಟುವ ವೇಳೆ ರೈಲು ಗಾಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 11ರ ಸುಮಾರಿಗೆ ಮಹಿಳೆ ರೈಲ್ವೆ ಹಳಿ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
Read also : Davanagere | ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಮಹಿಳೆಯ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಅವರು ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ತಲೆಯಲ್ಲಿ ಬಿಳಿ ಕೂದಲುಹೊಂದಿದ್ದು, ಎಡಗೈನಲ್ಲಿ ಗೌರಮ್ಮ ಎಂಬ ಹೆಸರು ಹಾಗೂ ಬಲಗೈಯಲ್ಲಿ ನಕ್ಷತ್ರದ ಹಚ್ಚೆ ಗುರುತುಗಳಿವೆ. ಮಹಿಳೆಯ ಬಗ್ಗೆ ಮಾಹಿತಿ ಇದ್ದವರು ದಾವಣಗೆರೆ ರೈಲ್ವೆ ಪೆÇಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ. ಮೊ.ನಂ . 9480802123, 9480800469